‘ಲವ್ ಮಾಕ್ಟೇಲ್-2‘ ನಲ್ಲಿ ನಟಿಸಿರುವ ಮಗು ಯಾರದ್ದು..? ಮಗುವಿಗೆ ಕೃಷ್ಣನ ಡಬ್ಬಿಂಗ್ ಪಾಠ

‘ಲವ್ ಮಾಕ್ಟೇಲ್-2‘ ನಲ್ಲಿ ನಟಿಸಿರುವ ಮಗು ಯಾರದ್ದು..? ಮಗುವಿಗೆ ಕೃಷ್ಣನ ಡಬ್ಬಿಂಗ್ ಪಾಠ

ಮದರಂಗಿ ಕೃಷ್ಣ ಲವ್​ ಮಾಕ್ಟೇಲ್​ ಚಿತ್ರದ ನಂತ್ರ ಲವ್​ ಮಾಕ್ಟೇಲ್​ 2 ಎಂಬ ಬಣ್ಣದ ಗಾಳಿಪಟವನ್ನು ಚಿತ್ರಪ್ರೇಮಿಗಳ ಅಂಗಳದಲ್ಲಿ ಹಾರಿಸೋಕೆ ರೆಡಿಯಾಗಿದ್ದಾರೆ.. ಆ ಗಾಳಿಪಟವನ್ನು ಗಗನಕ್ಕೆ ಕಳಿಸೋಕು ಮುಂಚೆನೇ ಡೈರೆಕ್ಟರ್ ಕೃಷ್ಣ ಲವ್​ ಮಾಕ್ಟೇಲ್​ ಸಿನಿಮಾ ನೋಡಿ ಹರಸಿದ್ದವರ ಪ್ರೇಕ್ಷಕ ಪ್ರಭುಗಳ ತಲೆಗೆ ಹುಳ ಬಿಟ್ಟಿದ್ದಾರೆ.

blank

ಲವ್​ ಮಾಕ್ಟೇಲ್​ 2 ಸಿನಿಮಾ ಸೆಟ್ಟೇರಿದಾಗಲೇ ನಿರ್ದೇಶಕ ಕೃಷ್ಣ ಈ ಸಿನಿಮಾ ಲವ್​ ಮಾಕ್ಟೇಲ್​ ಸಿಕ್ವೇಲ್​ ಅಂತ ಹೇಳಿದ್ರು.. ಲವ್​ ಮಾಕ್ಟೇಲ್​ ಸಿನಿಮಾ ನೋಡಿದವರು ಸಿಕ್ವೇಲ್ ಹೇಗಿರುತ್ತೇ. ಯಾವ ಪಾತ್ರಗಳು ಮತ್ತೆ ತೆರೆ ಮೇಲೆ ಕಾಣಿಸ್ತಾವೆ ಅನ್ನೋ ಕತೂಹಲದಲ್ಲಿದ್ದರು.. ಆ ಕುತೂಹಲ ತಣಿಯುವ ಮುನ್ನವೇ ಡಾರ್ಲಿಂಗ್ ಕೃಷ್ಣ ಲವ್​ ಮಾಕ್ಟೇಲ್​ 2 ಚಿತ್ರದ ಪಾತ್ರಗಳ ಬಗ್ಗೆ ಮತ್ತೊಂದು ಕ್ಯೂರಿಯಾಸಿಟಿ ಕ್ರಿಯೇಟ್​ ಮಾಡಿದ್ದಾರೆ.

blank

ಸಾಲು ಸಾಲು ಚಿತ್ರಗಳಲ್ಲಿ ನಾಯಕನಾಗಿ ನಟಿಸ್ತಿರುವ ಕೃಷ್ಣ , ತಮಗೆ ಸಿಕ್ಕ ಫ್ರೀ ಟೈಂ ಅನ್ನು ಅವರ ಕನಸಿನ ಕೂಸು ಲವ್​ ಮಾಕ್ಟೇಲ್​ 2 ಚಿತ್ರಕ್ಕೆ ಮೀಸಲಿಡ್ತಾರೆ.. ಅಂತೇಯೆ ಈಗ ಕೃಷ್ಕ್ಷ ಲವ್​ ಮಾಕ್ಟೇಲ್​ 2 ಚಿತ್ರದ ಡಬ್ಬಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ವಿಸೇಷ ಅಂದ್ರರೆ ಕೃಷ್ಣ ಅವರ ಪಾತ್ರಕ್ಕೆ ಡಬ್​ ಮಾಡ್ತಿಲ್ಲ, ಬದಲಿಗೆ ಚಿತ್ರದಲ್ಲಿ ಬರುವ ಪುಟ್ಟ ಮಗುವಿನ ಪಾತ್ರಕ್ಕೆ ಮಗುವಿಕ ಕೈಲಿ ಡಬ್ಬಿಂಗ್ ಮಾಡಿಸುತ್ತ ತಾವೆ ಮಗುವಿಗೆ ಡಬ್ಬಿಂಗ್​ ಪಾಠ ಮಾಡಿದ್ದಾರೆ.

blank

ಡಾರ್ಲಿಂಗ್ ಕೃಷ್ಣ ಮಗುವಿಗೆ ಡಬ್ಬಿಂಗ್ ಹೇಳಿ ಕೊಡ್ತಿರುವ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.. ಆ ವಿಡಿಯೋವನ್ನು ನೋಡಿದ ಸಿನಿ ರಸಿಕರು ಲವ್​ ಮಾಕ್ಟೇಲ್​ 2 ನಲ್ಲಿ ಕಾಣಿಸಿರುವ ಆ ಮಗು ಆದಿ ನಿಧಿಮಾದ ಅನ್ನೋ ಕನ್ಪ್ಯೂಸ್​ನಲ್ಲಿದ್ದಾರೆ.. ಲವ್​ ಮಾಕ್ಟೇಲ್​ ನಲ್ಲಿ ನಿಧಿ ಪಾತ್ರ ಈಗಾಗಲೇ ಎಂಡ್ ಆಗಿದ್ದು, ಸಿಕ್ವೇಲ್​ನಲ್ಲಿ ಮಗುವಿನ ಕತೆ ಹೇಳಲು ಕೃಷ್ಣ ಹೊರಟಿದ್ದಾರೆ ಎಂಬ ಕಲರ್ ಕಲರ್ ಅಲೋಚನೆಗಳು ಈಗ ಶುರುವಾಗಿವೆ.

ಚಿತ್ರ ಶುರುವಾದಗಿಂದಲೂ ಚಿತ್ರದ ಕತೆ, ಪಾತ್ರಗಳ ಬಗ್ಗೆ ಸಸ್ಪೆನ್ಸ್​ ಕಾಡಿರುವ ನಿರ್ದೇಶಕ ಕೃಷ್ಣ, ಈಗ ಈ ಮಗುವಿನ ಪಾತ್ರವನ್ನು ರಿವೀಲ್​ ಮಾಡಿ ಆ ಮಗು ಯಾರದು, ಯಾವ ಪಾತ್ರವನ್ನು ಆ ಮಗು ನಿಭಾಯಿಸಿದೆ ಅನ್ನೋ ಕುತೂಹಲವನ್ನ ಅವರ ಅಭಿಮಾನಿಗಳ ಅಂಗಳಕ್ಕೆ ಕೊಟ್ಟಿದ್ದಾರೆ.

Source: newsfirstlive.com Source link