ನಾನು ED ದಾಳಿಗೆ ಜಗ್ಗಲ್ಲ, ಬಗ್ಗಲ್ಲ, ಹೆದರಲ್ಲ, ಬೆದರಲ್ಲ; ಜಮೀರ್​​ ಅಹ್ಮದ್​​

ನಾನು ED ದಾಳಿಗೆ ಜಗ್ಗಲ್ಲ, ಬಗ್ಗಲ್ಲ, ಹೆದರಲ್ಲ, ಬೆದರಲ್ಲ; ಜಮೀರ್​​ ಅಹ್ಮದ್​​

ಬೆಂಗಳೂರು: ನಾನು ED ದಾಳಿಗೆ ಹೆದರೋದೆ ಇಲ್ಲ ಎಂದು ಮಾಜಿ ಸಚಿವ ಮತ್ತು ಕಾಂಗ್ರೆಸ್​ ಶಾಸಕ ಜಮೀರ್​​ ಅಹ್ಮದ್​​ ಖಾನ್ ಖಡಕ್​​ ಆಗಿ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಜಮೀರ್​​ ಖಾನ್​​, ನಾನು ED ದಾಳಿಗೆ ಜಗ್ಗಲ್ಲ, ಬಗ್ಗಲ್ಲ, ಹೆದರಲ್ಲ, ಬೆದರಲ್ಲ ಎಂದು ಹೇಳಿದ್ದಾರೆ.

ED ದಾಳಿಯಿಂದ ನನಗೆ ಇನ್ನೂ ಶಕ್ತಿ ಹೆಚ್ಚಾಗಿದೆ. ನನ್ನ ವಿರುದ್ಧ ದೂರು ನೀಡಿದ್ಯಾರು ಎಂದು ಕೆಲವೇ ದಿನಗಳಲ್ಲಿ ನಿಮಗೆ ಹೇಳುತ್ತೇನೆ. ಇದು ನಮ್ಮ ಪಕ್ಷದವ್ರು ಮಾಡಿದ ಕೆಲಸ ಅಲ್ಲ. ಬದಲಿಗೆ ವಿರೋಧ ಪಕ್ಷದವರ ಕುತಂತ್ರ ಎಂದರು.

ಇದನ್ನೂ ಓದಿ: ಜಮೀರ್ ಅಹಮ್ಮದ್​​​ಗೆ ಮತ್ತೆ ಶಾಕ್.. ದಿಢೀರ್ ನೋಟಿಸ್ ಕೊಟ್ಟ ED

ಇನ್ನು, ಎನ್​​​.ಆರ್​​ ರಮೇಶ್​​ ಬಾಯಿಗೆ ಬಂದಂಗೆ ಮಾತಾಡ್ತಾರೆ. ನಾನು ಎನ್​​​.ಆರ್​​​ ರಮೇಶ್​​ಗೆ ಉತ್ತರ ಕೊಡಬೇಕಾಗಿಲ್ಲ. ED ಅಧಕಾರಿಗಳಿಗೆ ನಾನು ಉತ್ತರ ಕೊಡಬೇಕಿರೋದು ಎಂದು ಕಿಡಿಕಾರಿದರು.

Source: newsfirstlive.com Source link