ದೊಡ್ಡ ದೊಡ್ಡ ರಾಜಕಾರಣಿಗಳು ದೂರು ಕೊಟ್ಟಿರೋ ಅನುಮಾನ ಇದೆ: ಜಮೀರ್ ಬಾಂಬ್

– ಕೈ ನಾಯಕರು ದೂರು ಕೊಟ್ಟಿಲ್ಲ

ಬೆಂಗಳೂರು: ದೊಡ್ಡ ದೊಡ್ಡ ರಾಜಕಾರಣಿಗಳು ನನ್ನ ವಿರುದ್ಧ ದೂರು ಕೊಟ್ಟಿರುವ ಅನುಮಾನ ನನಗೆ ಎದ್ದು ಕಾಣುತ್ತಿದೆ ಎಂದು ಹೇಳುವ ಮೂಲಕ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

ಚಾಮರಾಜಪೇಟೆಯಲ್ಲಿರುವ ತಮ್ಮ ಕಚೇರಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ದೊಡ್ಡ ದೊಡ್ಡ ರಾಜಕಾರಣಿಗಳು ದೂರು ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ದೂರು ಕೊಟ್ಟಿಲ್ಲ. ನಾನು ಬಿಟ್ಟು ಬಂದಿರೋ ಪಕ್ಷದವರು ಮಾಡಿರೋ ಅನುಮಾನ ಇದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಡೆ ಶಾಸಕರು ಬೆರಳು ಮಾಡಿದ್ದಾರೆ.

ಜಾರಿ ನಿರ್ದೇಶನಾಲಯ(ಇಡಿ) ನನಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ಹತ್ತು ದಿನಗಳ ಕಾಲಾವಕಾಶ ಪಡೆದುಕೊಳ್ಳಲಾಗಿದೆ. ಹತ್ತು ದಿನದಲ್ಲಿ ದಾಖಲೆಗಳನ್ನ ಅಕೌಂಟ್ ಮೂಲಕ ಕಳಿಸಿಕೊಡಿ ಅಂತ ಹೇಳಿದ್ದಾರೆ. ದಾಳಿಯ ವೇಳೆ ಶೇ.90 ರಷ್ಟು ದಾಖಲೆಗಳನ್ನ ಕೊಡಲಾಗಿದೆ. ಕೆಲವೊಂದು ದಾಖಲೆಗಳು ಬ್ಯಾಂಕ್ ನಲ್ಲಿದೆ ಅದನ್ನ ಕೊಡಬೇಕು, ಪ್ರಾಪರ್ಟಿ ವಿಚಾರವಾಗಿ ಇಡಿ ದಾಳಿ ನಡೆಸಿದೆ ಎಂದರು. ಇದನ್ನೂ ಓದಿ: ಜಮೀರ್ ಮನೆ ಬಗ್ಗೆ ನಾನಂತೂ ದೂರು ಕೊಟ್ಟಿಲ್ಲ: ಹೆಚ್‍ಡಿಕೆ

ಇಡಿ ಅವರು ಬಂದು ಲೆಕ್ಕ ಕೇಳಿದ್ರು. ಅದಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆ ಕೊಟ್ಟಿದ್ದೇನೆ. ಯಾವ ಹಿನ್ನೆಲೆಯಲ್ಲಿ ಇಡಿ ದಾಳಿ ಮಾಡಿದೆ ಎಂದು ಗೊತ್ತಿಲ್ಲ. ಇಡಿ ರೇಡ್ ಮಾಡುವ ಅಗತ್ಯವಿರಲಿಲ್ಲ. ಐಟಿ ದಾಳಿ ಮಾಡೋ ಪವರ್ ಇದೆ. ಡಿಕೆಶಿ ಮನೆ ಮೇಲೆ ದಾಳಿ ಮಾಡಿದ್ದನ್ನ ನೋಡಬಹುದು. ಡಿಕೆಶಿ ಅವರು ಐಎಂಎ ಭಾಗಿಯಾಗಿರಲಿಲ್ಲ. ಆದರೂ ಇಡಿ ಅವರು ರೇಡ್ ಮಾಡಿದ್ದರು. ಅದಕ್ಕೆ ನಾವು ಏನು ಹೇಳೋಕೆ ಆಗಲ್ಲ. ನಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ, ಸಂಬಂಧಪಟ್ಟ ದಾಖಲೆಯನ್ನೂ ಕೊಟ್ಟಿದ್ದೇನೆ ಎಂದರು. ಇದನ್ನೂ ಓದಿ: ನನ್ನ ಆಸ್ತಿಯೆಲ್ಲ ಬಡವರ ಬಳಿಯೇ ಇದೆ: ಜಮೀರ್

blank

ಇತ್ತ ಶಾಸಕರಿಗೆ ಇಡಿ ನೋಟಿಸ್ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು, ನೋಟಿಸ್ ಬೆನ್ನಲ್ಲೆ ಜಮೀರ್ ಪ್ರಖ್ಯಾತ ವಕೀಲರ ಮೊರೆ ಹೋಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿತ್ತು. ತಮ್ಮ ಇಡಿ ಕೇಸನ್ನ ನೀವೇ ನಿರ್ವಹಿಸಬೇಕು ಎಂದು ಜಮೀರ್ ಅವರು ಹಿರಿಯ ಕಾಂಗ್ರೆಸ್ ನಾಯಕ ಖ್ಯಾತ ವಕೀಲ ಕಪಿಲ್ ಸಿಬಲ್ ಮೊರೆ ಹೋಗಿದ್ದಾರಂತೆ. ಅಲ್ಲದೆ ಈಗಾಗಲೇ ಕಪಿಲ್ ಸಿಬಲ್ ಜೊತೆ ಫೋನ್ ಮಾಡಿ ಮಾತನಾಡಿದ್ದಾರೆ. ಈ ವೇಳೆ ಸಿಬಲ್ ಅವರು ಕೇಸ್ ಡೀಟೈಲ್ಸ್ ಹಾಗೂ ಕೆಲವು ದಾಖಲೆಗಳನ್ನು ಕೇಳಿದ್ದಾರೆ. ಕೇಸ್ ಸ್ಟಡಿ ಮಾಡಿ ಮುಂದಿನ ವಿಚಾರ ಚರ್ಚಿಸುವುದಾಗಿ ಕಪಿಲ್ ಸಿಬಲ್ ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಜಮೀರ್ ಆಸ್ತಿ 10 ವರ್ಷದ ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

blank

ಈ ಹಿನ್ನೆಲೆಯಲ್ಲಿ ಜಮೀರ್ ಪರವಾದ ವಕೀಲ ಜಬೀ ಅವರು ಕಪಿಲ್ ಸಿಬಲ್ ಗೆ ನೀಡಲು ದಾಖಲೆಗಳೊಂದಿಗೆ ದೆಹಲಿ ತಲುಪಿದ್ದಾರೆ. ದಾಖಲೆಗಳನ್ನ ಪರಿಶೀಲಿಸಿದ ನಂತರ ಕೇಸ್ ನಡೆಸುವ ಬಗ್ಗೆ ಕಪಿಲ್ ಸಿಬಲ್ ತಮ್ಮ ಅಭಿಪ್ರಾಯ ತಿಳಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Source: publictv.in Source link