‘ನಂದು ಬ್ಲಾಕ್​​ ಅಲ್ಲ.. ವೈಟ್’ ಹಿಂಗ್ಯಾಕೆ ಹೇಳಿದ್ರು ಜಮೀರ್?

‘ನಂದು ಬ್ಲಾಕ್​​ ಅಲ್ಲ.. ವೈಟ್’ ಹಿಂಗ್ಯಾಕೆ ಹೇಳಿದ್ರು ಜಮೀರ್?

ಬೆಂಗಳೂರು: ನನ್ನದು ಬ್ಲಾಕ್​​ ಅಲ್ಲ, ಎಲ್ಲವೂ ವೈಟ್​​​, ED ದಾಳಿಯಿಂದ ಕ್ಲೀನ್ ಆಗುತ್ತೇ ಎಂದು ಮಾಜಿ ಸಚಿವ ಮತ್ತು ಕಾಂಗ್ರೆಸ್​ ಶಾಸಕ ಜಮೀರ್​​ ಅಹಮ್ಮದ್  ಖಾನ್​​​ ಹೇಳಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಜಮೀರ್​​​, ನಾನು ED ದಾಳಿಗೆ ಹೆದರಲ್ಲ. ನಾನು ಮಾಡಿರೋದೆಲ್ಲ ವೈಟೇ, ಬ್ಲಾಕ್​​ ಯಾವುದು ಇಲ್ಲ. ED ದಾಳಿಯಾಗಿದ್ದು ಒಳ್ಳೇದಾಯ್ತು. ಇದರಿಂದ ನಂದೆಲ್ಲಾ ಕ್ಲೀನ್​​ ಆಗುತ್ತೆ ಎಂದರು.
ಬಿಜೆಪಿಗೆ ಅಲ್ಪಸಂಖ್ಯಾತರೇ ಟಾರ್ಗೆಟ್. ಅದಕ್ಕೆ ಜಮೀರ್​​ ಜೈಲಿಗೆ ಹೋಗ್ತಾರೆ ಎಂದು ಜಮೀರ್​ ಹೇಳಿರೋದು. ನಾನು ಯಾರಿಗೂ ಉತ್ತರ ನೀಡಬೇಕಾದ ಅಗತ್ಯ ಇಲ್ಲ ಎಂದು ಜಮೀರ್​​ ಹೇಳಿದ್ದಾರೆ.

ನನ್ನ ಅಭಿಮಾನಿಗಳು ರಾಜ್ಯಾದ್ಯಂತ ಪ್ರತಿಭಟನೆ ಮಾಡಿದ್ದಾರೆ. ನಾನು ಎಂದೂ ನನ್ನ ಅಭಿಮಾನಿಗಳ ನಂಬಿಕೆ ಹುಸಿಗೊಳಿಸೋದಿಲ್ಲ. ಇನ್ನು ಮುಂದೆ ಬಡವರಿಗೆ ಸಹಾಯ ಮಾಡೋ ಕೆಲಸ ಇನ್ನೂ ಜಾಸ್ತಿ ಮಾಡ್ತೀನಿ. ED ದಾಳಿಗೆ ಹೆದರಿ ನನ್ನ ಕೆಲಸ ನಿಲ್ಲಿಸೋಲ್ಲ ಎಂದು ಜಮೀರ್​​ ತಮ್ಮ ವಿರೋಧಿಗಳಿಗೆ ಟಾಂಗ್​ ಕೊಟ್ಟರು.

ಇದನ್ನೂ ಓದಿ: ನಾನು ED ದಾಳಿಗೆ ಜಗ್ಗಲ್ಲ, ಬಗ್ಗಲ್ಲ, ಹೆದರಲ್ಲ, ಬೆದರಲ್ಲ; ಜಮೀರ್​​ ಅಹ್ಮದ್​​

ಸಿದ್ದರಾಮಯ್ಯ ಅವರನ್ನು ಇನ್ನೂ ಭೇಟಿ ಮಾಡಿಲ್ಲ. ಸಂಜೆ ಹೋಗಿ ಸಿದ್ದರಾಮಯ್ಯ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.

Source: newsfirstlive.com Source link