‘ನಿಮ್ಗೆಲ್ಲ ಒಂದು ಪ್ರಾಮೀಸ್’ -ಬಿಗ್​​​ಬಾಸ್ ವಿನ್ನರ್​ ಮಂಜು ಪಾವಗಡ ಮೊದಲ ಮಾತು

‘ನಿಮ್ಗೆಲ್ಲ ಒಂದು ಪ್ರಾಮೀಸ್’ -ಬಿಗ್​​​ಬಾಸ್ ವಿನ್ನರ್​ ಮಂಜು ಪಾವಗಡ ಮೊದಲ ಮಾತು

ಬಿಗ್​ ಬಾಸ್​ ಸೀಸನ್​ ವಿನ್ನರ್​ ಮಂಜು ಪಾವಗಡ ಟ್ರೋಫಿ ಗೆದ್ಮೇಲೆ ಮೊದಲ ಬಾರಿಗೆ ನ್ಯೂಸ್​ ಫಸ್ಟ್​ ಜೊತೆ ವಿನ್ನಿಂಗ್​ ಮೂಮೆಂಟ್​ ಬಗ್ಗೆ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ.

ತುಂಬಾ ಖುಷಿಯಾಗ್ತಿದ್ದು, ನಿದ್ದೆನೆ ಮಾಡಿಲ್ಲ.. ಸ್ನೇಹಿತರು, ಹಿತೈಷಿಗಳಿಂದ ಅಭಿನಂದನೆಗಳ ಸುರಿಮಳೆ ಆಗ್ತಿದೆ. ಬಿಗ್​ ಬಾಸ್​ಗೆ ಹೋಗುವ ಮೊದಲು ಬಿಗ್​ ಬಾಸ್​ ಟ್ರೋಫಿಗೆ ನಾನು ಅರ್ಹ ಅಂತಾ ನಂಗೆ ಗೊತ್ತಿರಲಿಲ್ಲ. ಮಜಾಭಾರತದಿಂದ ಗುರುತಿಸಿಕೊಂಡು, ಬಿಗ್​ ಬಾಸ್​ನಂತಹ ದೊಡ್ಡ ವೇದಿಕೆಗೆ ಹೋಗಿ ಘಟಾನುಘಟಿ ಲೆಜೆಂಡ್ರಿ ಆಕ್ಟರ್ಸ್​, ಬೇರೆ ಫೀಲ್ಡನ್​ನಿಂದ ಬಂದಿದ್ರು. ಅವರ ನಡುವೆ ನಾನು ಜಗಳಾ ಆಡ್ತೀನಿ, ಪ್ರೀತಿ ಮಾಡ್ತೀನಿ.. ಟಾಸ್ಕ್​, ಚೇಷ್ಟೆ.. ಇದೆಲ್ಲ ಮಾಡಿ ಫೈನಲಿ ಈ ಟ್ರೋಫಿ ಹಿಡ್ಕೊಂಡಿದ್ದೀನಿ.

ಇದೆಲ್ಲದ್ಕಿಂತ ಹೆಚ್ಚಾಗಿ ತುಂಬಾ ಇಷ್ಟಾಪಟ್ಟು ಜನತೆ ನನ್ನ ಗೆಲ್ಲಿಸಿದ್ದಿರ.. ನಿಮ್ಮ ಋಣ ಯಾವ ರೀತಿ ತೀರಿಸಬೇಕು ಅಂತಾ ಗೊತ್ತಾಗ್ತಿಲ್ಲ. ಕೊನೆಯವರೆಗೂ ಎಂಟರ್​ಟೈನ್​ ಮಾಡ್ತಾನೆ ಇರ್ತೀನಿ ಎಂದು ಹರ್ಷವ್ಯಕ್ತಪಡೆಸಿದ್ರು ಮಂಜು.

Source: newsfirstlive.com Source link