BIGG BOSS ಗೆಲುವನ್ನ ಮಂಜು ತಂದೆ-ತಾಯಿಗೆ ಅರ್ಪಿಸಿಲ್ಲ ಯಾಕೆ..?

BIGG BOSS ಗೆಲುವನ್ನ ಮಂಜು ತಂದೆ-ತಾಯಿಗೆ ಅರ್ಪಿಸಿಲ್ಲ ಯಾಕೆ..?

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 8ಕ್ಕೆ ಕೊನೆಗೂ ತೆರೆಬಿದ್ದಿದೆ. ಫೈನಲ್​ ಹಣಾಹಣಿಯಲ್ಲಿ ಮಂಜು ಪಾವಗಡ ಬಿಗ್​ಬಾಸ್​​ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ. ಆದರೆ ಬಿಗ್​​ಬಾಸ್ ಗೆಲುವನ್ನು ತಂದೆ, ತಾಯಿಗೆ ಅರ್ಪಿಸದೆ.. ಮಜಾ ಭಾರತ ಕಾರ್ಯಕ್ರಮಕ್ಕೆ ಅರ್ಪಿಸಿದ ಹಿಂದಿನ ಕಾರಣವನ್ನು ನ್ಯೂಸ್​​ ಫಸ್ಟ್​ಗೆ ತಿಳಿಸಿದ್ದಾರೆ.

ತಂದೆ-ತಾಯಿಗೆ ನಾವು ಏನೂ ಬಿಡಿಸಿ ಹೇಳಬೇಕಿಲ್ಲ. ಏಕೆಂದರೆ ಮಕ್ಕಳ ಹಸಿವು ಏನೆಂದು ಅವರಿಗೆ ಗೊತ್ತಿರುತ್ತದೆ. ನಾವು ಆ ಸ್ಟೇಜ್​ಗೆ ಬಂದಿದ್ದೀನಿ ಎಂದರೇನೆ ಅವರಿಗೆ ಎಷ್ಟು ಖುಷಿ ಆಗಿರುತ್ತದೆ ಗೊತ್ತಿದೆ. ನಾನು ಅವರ ಹೆಸರನ್ನ ಹೊತ್ತಿ ಹೊತ್ತಿ ಹೇಳಬೇಕಿಲ್ಲ. ನಮ್ಮ ಹೆಸರು ಹೇಳಲಿಲ್ಲ ಅಂತಾ ಯಾರು ಅಂದು ಕೊಳ್ಳುವುದಿಲ್ಲ. ನನಗೆ ಮಜಾ ಭಾರತ ಇಲ್ಲ ಎಂದಿದ್ದರೇ ಬಿಗ್​​ಬಾಸ್.. ಈ ಟ್ರೋಫಿ ಸಿಗುತ್ತಿರಲಿಲ್ಲ. ಆದ್ದರಿಂದ ಮಜಾ ಭಾರತಕ್ಕೆ ನಾನು ಟ್ರೋಫಿ ಅರ್ಪಣೆ ಮಾಡಿದೆ ಎಂದು ಸ್ಪಷ್ಟಪಡಿಸಿದರು.

ನಾನು ಫಿನಾಲೆವರೆಗೂ ಬಂದಿದ್ದೇನೆ ಎಂದರೇ ಸಿಂಪತಿ.. ಅನಿವಾರ್ಯತೆ ಅಷ್ಟೇ ಸಾಕಾಗೋದಿಲ್ಲ. ಆದರೆ ಅಲ್ಲಿ ಪ್ರತಿಭೆ ಕೂಡ ಇರಬೇಕು. ನನಗೆ ದೇವರು ಒಂದು ಒಳ್ಳೆ ವರ ಕೊಟ್ಟಿದ್ದಾರೆ. ಅದು ಮರೆವು ನನಗೆ ಅಂದಿನ ಘಟನೆಗಳನ್ನು ಅಂದೇ ಮರೆತು ಹೋಗುತ್ತೆ.. ಇದು ನನಗೆ ಬಹಳ ಸಹಕಾರಿ ಆಯ್ತು ಎಂದು ಹೇಳಿದ್ದಾರೆ.

Source: newsfirstlive.com Source link