ED ದಾಳಿ: ನಂಗೆ ಈಗ ಕುಮಾರಸ್ವಾಮಿ ಮೇಲೆಯೇ ಡೌಟ್ ಬರ್ತಿದೆ -ಜಮೀರ್ ಕಿಡಿ

ED ದಾಳಿ: ನಂಗೆ ಈಗ ಕುಮಾರಸ್ವಾಮಿ ಮೇಲೆಯೇ ಡೌಟ್ ಬರ್ತಿದೆ -ಜಮೀರ್ ಕಿಡಿ

ಬೆಂಗಳೂರು: ಮಾಜಿ ಸಿಎಂ ಹೆಚ್.​ಡಿ ಕುಮಾರಸ್ವಾಮಿ ಯಾಕೆ ಹಾಗೆ ಹೇಳಿದರು. ಎಲ್ಲೋ ಒಂದು ಕಡೆ ಕುಮಾರಸ್ವಾಮಿ ಅವರೇ ಕೊಟ್ಟಿರಬಹುದು ಅಂತಾ ಡೌಟ್​ ಶುರುವಾಗಿದೆ ಅಂತಾ ಕಾಂಗ್ರೆಸ್​ ಶಾಸಕ ಜಮೀರ್ ಅಹಮ್ಮದ್ ಹೇಳಿದ್ದಾರೆ.

ತಮ್ಮ ನಿವಾಸದ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಮೊದಲ ಬಾರಿಗೆ ಸುದ್ದಿಗೋಷ್ಟಿ ನಡೆಸಿದ ಮಾತನಾಡಿದ ಅವರು.. ಯಾವ ಪಕ್ಷ ಅಂತಾ ಹೇಳಲು ನಾನು ಸಿದ್ಧವಿಲ್ಲ. ನಮ್ಮ ಪಕ್ಷದವ್ರ ಕೈವಾಡ ಒಂದು ಪರ್ಸೆಂಟ್​ನಷ್ಟು ಇಲ್ವೇ ಇಲ್ಲ. ದಾಳಿ ಹಿಂದೆ ರಾಜಕೀಯ ಹಿನ್ನೆಲೆ ಇದೆ. ಮಾಹಿತಿ ಸಿಗುವವರೆಗೂ ನಾನು ಸ್ಪಷ್ಟವಾಗಿ ಹೇಳೋದು ಕಷ್ಟ. ನನಗೆ 15 ದಿನ ಟೈಂ ಕೊಡಿ, ಅದಾದ ಬಳಿಕ ಸುದ್ದಿಗೋಷ್ಠಿ ಮಾಡಿ ಈ ಬಗ್ಗೆ ನಾನು ಡೀಟೈಲ್ ಆಗಿ ಹೇಳ್ತೇನೆ ಎಂದರು.

ಇದನ್ನೂ ಓದಿ: ನಾನು ED ದಾಳಿಗೆ ಜಗ್ಗಲ್ಲ, ಬಗ್ಗಲ್ಲ, ಹೆದರಲ್ಲ, ಬೆದರಲ್ಲ; ಜಮೀರ್​​ ಅಹ್ಮದ್​​

ರಾಜಕೀಯವಾಗಿ ಫೈಟ್ ಮಾಡಿಕೊಳ್ಳೋಣ
ನಾನು ದಾಖಲೆಗಳ ಆಧಾರದ ಮೇಲೆ ಮಾತನಾಡುತ್ತೇನೆ. ಯಾರೂ ಕೂಡ ಸುಮ್ಮ ಸುಮ್ಮನೇ ದಾಳಿ ಮಾಡೋಕೆ ಬರಲ್ಲ. ರಾಜಕಾರಣ ಸಹಜ. ನಾವು ರಾಜಕೀಯವಾಗಿ ಫೈಟ್ ಮಾಡಿಕೊಳ್ಳೋಣ. ಮನೆ ಕಟ್ಟಬಾರದು ಅಂಥಾ ಇದ್ಯಾ? ಬೇರಯವರ ಆಸ್ತಿ ಹೊಡೆದುಕೊಂಡು ಮಾಡಿದ್ದೇನಾ? ಬೇರೆಯವ್ರ ಲೂಟಿ ಮಾಡಿಕೊಂಡು ಮಾಡಿದ್ದೇನಾ? ಅದಕ್ಕೆ ಇವರು ಹೊಟ್ಟೆಕಿಚ್ಚು ಮಾಡಿ ದೂರು ಕೊಡ್ತಾರೆ ಅಂದ್ರೆ.. ದೇವರು ಅವರನ್ನ ಚೆನ್ನಾಗಿ ಇಟ್ಟಿರ್ತಾನಾ?

ನಮ್ಮಪಕ್ಷದವರು ಇಲ್ಲೇ ಇಲ್ಲ. ಉಳಿದಿರೋದು ಬಿಜೆಪಿ, ಜೆಡಿಎಸ್​. ದಾಖಲೆ ಸಮೇತ ನಾನು ಹೇಳ್ತೇನೆ. ನಾನು ಕುಮಾರಸ್ವಾಮಿ ಅವರ ಹೆಸರನ್ನ ಹೇಳಿಯೇ ಇಲ್ಲ. ಯಾಕೆ ಅವರು ನಾನು ದೂರು ನೀಡಿಲ್ಲ ಅಂತಾ ಹೇಳಿದರು? ಎಲ್ಲೋ ಒಂದು ಕಡೆ ನನಗೆ ಕುಮಾರಸ್ವಾಮಿ ಮೇಲೆಯೇ ಈಗ ಡೌಟ್ ಬರುತ್ತಿದೆ. ಕುಮಾರಸ್ವಾಮಿಗೆ ನಾನು ಇದನೆಲ್ಲಾ ಹೇಳಿದ್ದೇನಾ? ಕುಮಾರಸ್ವಾಮಿ ಯಾಕೆ ಹಾಗೆ ಹೇಳಿದರು. ಎಲ್ಲೋ ಒಂದ್ಕಡೆ ಕುಮಾರಸ್ವಾಮಿ ಅವರೇ ಕೊಟ್ಟಿರಬಹುದು ಅಂತಾ ಹೇಳಿದರು.

ಇದನ್ನೂ ಓದಿ: ‘ನಂದು ಬ್ಲಾಕ್​​ ಅಲ್ಲ.. ವೈಟ್’ ಹಿಂಗ್ಯಾಕೆ ಹೇಳಿದ್ರು ಜಮೀರ್?

Source: newsfirstlive.com Source link