ಸೂಪರ್​ ಸ್ಟಾರ್​ ಬರ್ತ್​​​ಡೇ ಬ್ಲಾಸ್ಟರ್​​ -ನ್ಯೂ ಲುಕ್​​ನಲ್ಲಿ ಹುಡುಗಿಯರ ಎದೆಗೆ ಕಿಚ್ಚು ಹಚ್ಚಿದ ಮಹೇಶ್

ಸೂಪರ್​ ಸ್ಟಾರ್​ ಬರ್ತ್​​​ಡೇ ಬ್ಲಾಸ್ಟರ್​​ -ನ್ಯೂ ಲುಕ್​​ನಲ್ಲಿ ಹುಡುಗಿಯರ ಎದೆಗೆ ಕಿಚ್ಚು ಹಚ್ಚಿದ ಮಹೇಶ್

ಆ ಹೈಟು.. ಆ ಲುಕ್ಸು.. ಆ ಹೇರ್ಸು.. ಇಂದಿಗೂ ಹುಡುಗಿಯರ ಹೃದಯಕ್ಕೆ ಕಿಚ್ಚು ಹಚ್ಚುತ್ತಲೇ ಇದೆ.. ತೆಲಗು ಇಂಡಸ್ಟ್ರಿಯ ಈ 6 ಅಡಿ ಕಟೌಟ್​ ಅಂದ್ರೆ ಇಂದಿಗೂ ಅದೇ ಕ್ರೇಜು.. ಈ ಸುರಸುಂದರಾಂಗ ಇಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ತಿದ್ದಾರೆ.. ಅದರ ಸವಿ ನೆನಪಿಗಾಗಿ ಹೊಸ ಚಿತ್ರದ ಟೀಸರೂ ರಿಲೀಸ್​ ಆಗಿದ್ದು.. ಇವರ ಬರ್ತ್​ ಡೇ ಕೇಕ್​ ಮೇಲೆ ಚೆರಿಯಿಂದ ರಂಗೋಲಿ ಬಿಡಿಸಿದಂತಿದೆ.

ಪ್ರಿನ್ಸ್.. ಈ ಹೆಸರು ಕೇಳಿದ್ರೆ ಸಾಕು ತೆಲುಗು ಚಿತ್ರ ಪ್ರೇಮಿಗಳ ಕಿವಿ ಚುರುಕಾಗುತ್ತೆ.. ಒಂದು ಸ್ಮೈಲ್ ಕೊಟ್ರೆ ಸಾಕು ತೆಲುಗು ಪಿಲ್ಲಗಳ್ಳು ಫಿದಾ ಆಗಿ ಬಿಡ್ತಾರೆ.. ತೆಲುಗಿನಲ್ಲಿ ಚಿತ್ರ ಮಾಡಿದ್ರೂ.. ಪ್ಯಾನ್ ಇಂಡಿಯಾ ಸ್ಟಾರ್ ಆಗಿರೋ ಈ ಪೊಕಿರಿ ಅಂದ್ರೆ ಜನರಿಗೆ ಅದೇನೋ ಪ್ರೀತಿ.. ಇಂದಿಗೂ 20ರ ಹರೆಯದ ಹುಡುಗನಂತೆ ಕಾಣೋ ಈ ಚಿರ ಯುವಕ ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

blank

ಹೌದು.. ಟಾಲಿವುಡ್​​ ಸೂಪರ್​​ ಸ್ಟಾರ್​​ ಪ್ರಿನ್ಸ್​​ ಮಹೇಶ್​​ ಬಾಬು ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನೋಡೋಕೆ ಯಂಗ್​​​ ಆಂಡ್​​ ಎನರ್ಜಿಟಿಕ್​​ ಆಗಿ 20 ವರ್ಷದ ಹುಡುಗನಂತೆ ಕಾಣೋ ಈ ಪ್ರಿನ್ಸ್​​​ಗೆ ಇವತ್ತಿಗೆ 45 ವರುಷ ಕಂಪ್ಲೀಟ್​ ಆಗಿದ್ದು, 46 ನೇ ವಸಂತಕ್ಕೆ ಕಾಲಿಡ್ತಿದ್ದಾರೆ.

blank

ಇನ್ನು ಮಹೇಶ್​​ ಬಾಬು ಸದ್ಯ ಸರ್ಕಾರುವಾರಿ ಪಾಟ ಸಿನಿಮಾದಲ್ಲಿ ಬ್ಯುಸಿ ಇರೋದು ಗೊತ್ತಿರೋ ವಿಚಾರಾನೇ.. ಆದ್ರೀಗ ಪ್ರಿನ್ಸ್​ ಹುಟ್ಟುಹಬ್ಬದ ದಿನದಂದು ಸಿನಿಮಾ ತಂಡದಿಂದ ಒಂದು ಭರ್ಜರಿ ಗಿಫ್ಟ್​​​ ಸಿಕ್ಕಿದೆ. ಸರ್ಕಾರುವಾರಿ ಪಾಟ ಸಿನಿಮಾದ ಟೀಸರ್​​ ಇವತ್ತು ರಿಲೀಸ್​ ಮಾಡಲಾಗಿದ್ದು, ಅಭಿಮಾನಿಗಳು ಸಖತ್​​ ಹ್ಯಾಪಿ ಮೂಡ್​​ನಲ್ಲಿದ್ದಾರೆ. ಅಂದ್ಹಾಗೆ ಈ ಸಿನಿಮಾದ ಟೀಸರ್​​ ಅನ್ನು ಸರ್ಕಾರುವಾರಿ ಪಾಟ ಬರ್ತ್​​ಡೇ ಅಂತ ಚಿತ್ರತಂಡ ಇದಕ್ಕೆ ಟೈಟಲ್​ ಕೊಟ್ಟಿದೆ. ಇನ್ನು ಈ ಟೈಟಲ್​ಗೆ ತಕ್ಕಂತೆ ಸಿನಿಮಾ ಟೀಸರ್​ ಕೂಡ ಯೂಟ್ಯೂಬ್​​ನಲ್ಲಿ ಸಖತ್​​ ಧೂಳೆಬ್ಬಿಸ್ತಿದೆ. ಇನ್ನು ಬಿಡುಗಡೆಯಾಗದ ಕೆಲವೇ ಘಂಟೆಗಳಲ್ಲಿ ಮಿಲಿಯನ್​​ಗಟ್ಟಲೆ ವೀವ್ಸ್​​ ಪಡೆದುಕೊಂಡಿದೆ.

blank

ಅಂದ್ಹಾಗೆ ಸರ್ಕಾರುವಾರಿ ಪಾಟ ಚಿತ್ರಕ್ಕೆ ಪರಶುರಾಮ್​ ಪೆಟ್ಲಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಮಹೇಶ್​ ಬಾಬುಗೆ ನಾಯಕಿಯಾಗಿ ಕೀರ್ತಿ ಸುರೇಶ್​ ಅಭಿನಯಿಸಿದ್ದಾರೆ. ಆ್ಯಕ್ಷನ್​ ಅವತಾರದಲ್ಲೂ, ಸಿಕ್ಕಾಪಟ್ಟೆ ರೊಮ್ಯಾಂಟಿಕ್​ ಆಗಿಯೂ ಮಹೇಶ್​ ಬಾಬು ಕಾಣಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಹುಡುಗಿ ಲುಕ್​ನಲ್ಲಿ ಕೀರ್ತಿ ಸುರೇಶ್​ ಮಿಂಚಿದ್ದಾರೆ. ಈ ಟೀಸರ್​ನಿಂದಾಗಿ ಚಿತ್ರದ ಮೇಲಿನ ಕ್ರೇಜ್​ ಇನ್ನಷ್ಟು ಹೆಚ್ಚುವಂತಾಗಿದೆ.

blank

ಈ ಬಾರಿ ಪೆಂಡಮಿಕ್​ ಕಾರಣದಿಂದಾಗಿ ಜಾತ್ರೆಯಂತೆ ಆಚರಿಸಲಾಗ್ತಿದ್ದ ಇವರ ಹುಟ್ಟುಹಬ್ಬವನ್ನ ಈ ಬಾರಿ ಫ್ಯಾನ್ಸ್​ಗಳೂ ವಿಭಿನ್ನ ರೀತಿಯಿಂದ ಆಚರಿಸ್ತಿದ್ದಾರೆ. ಮಹೇಶ್ ಬಾಬೂ ಅವರೂ ಪ್ರೀತಿಯ ಮಡದಿ ನಮ್ರತಾ ಶಿರೋಡ್ಕರ್ ಮತ್ತು ಮಕ್ಕಳೊಂದಿಗೆ ಹ್ಯಾಪಿ ಹ್ಯಾಪಿಯಾಗಿ ದಿನ ಕಳೆದಿದ್ದಾರೆ.

Source: newsfirstlive.com Source link