ಮೋದಿಗಿಂತಲೂ ನಾನೇ ದೊಡ್ಡವನು; ಮಾಜಿ ಸಿಎಂ ಸಿದ್ದರಾಮಯ್ಯ

ಮೋದಿಗಿಂತಲೂ ನಾನೇ ದೊಡ್ಡವನು; ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು:  ಪ್ರಧಾನಿ ನರೇಂದ್ರ ಮೋದಿಗಿಂತಲೂ ನಾನೇ ದೊಡ್ಡವನು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಸಿದ್ದರಾಮಯ್ಯ, ನಾನು 1948 ಆಗಸ್ಟ್​ 3ನೇ ತಾರೀಕಿನಂದು ಹುಟ್ಟಿದ್ದೇನೆ ಎಂದು ಮಾಸ್ಟರ್​​ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹುಟ್ಟಿದ್ದು 1950ರಲ್ಲಿ. ಹಾಗಾಗಿ ನಾನೇ ಮೋದಿಗಿಂತ 2 ವರ್ಷ ದೊಡ್ಡವನು ಎಂಬರ್ಥದಲ್ಲಿ ಹೇಳಿದರು.

ಬ್ರಿಟಿಷರನ್ನ ಹೊಡೆದು ಓಡಿಸಲು ಕ್ವಿಟ್​​ ಇಂಡಿಯಾ ಮೂವ್​ಮೆಂಟ್ ಮಾಡಲಾಯ್ತು. ಮಾಡು ಇಲ್ಲವೇ ಮಾಡಿ ಎಂಬ ಪದ ಬಳಕೆಯಾಗಿದ್ದು ಅಂದೇ. ಸ್ವಾತಂತ್ರ್ಯ ಸಿಗಲು ಕ್ವಿಟ್​​ ಇಂಡಿಯಾ ಚಳುವಳಿಯೇ ಕಾರಣ ಎಂದರು.

ದೇಶದಲ್ಲಿ ಶೇ.23ರಷ್ಟು ಜನ ಬಡತನ ರೇಖೆಗಿಂತಲೂ ಕೆಳಗೆ ಹೋಗಿದ್ದಾರೆ. ನಿರುದ್ಯೋಗ ಸಮಸ್ಯೆ ದೇಶವನ್ನು ಕಾಡುತ್ತಿದೆ. ಇದು ದೇಶಕ್ಕೆ ಮೋದಿ ನೀಡಿದ ಕೊಡುಗೆ ಎಂದು ಹೇಳಿದರು.

ಇದನ್ನೂ ಓದಿ: ‘ನಂದು ಬ್ಲಾಕ್​​ ಅಲ್ಲ.. ವೈಟ್’ ಹಿಂಗ್ಯಾಕೆ ಹೇಳಿದ್ರು ಜಮೀರ್?

Source: newsfirstlive.com Source link