‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ದುರಂತ – ಹೈಟೆನ್ಷನ್ ವೈರ್ ತಗುಲಿ ಫೈಟರ್ ಸಾವು

– ಅಜಯ್ ರಾವ್, ರಚಿತಾ ರಾಮ್ ಅಭಿನಯದ ಚಿತ್ರ

ಬೆಂಗಳೂರು: ಲವ್ ಯು ರಚ್ಚು ಸಿನಿಮಾ ಶೂಟಿಂಗ್ ವೇಳೆ ದುರಂತ ಸಂಭವಿಸಿದ್ದು, ಹೈಟೆನ್ಷನ್ ವೈರ್ ತಗುಲಿ ಫೈಟರ್ ಸಾವನ್ನಪ್ಪಿದ್ದಾರೆ.

35 ವರ್ಷದ ವಿವೇಕ್ ಮೃತ ಫೈಟರ್. ಬಿಡದಿಯ ಈಗಲ್‍ಟನ್ ರೆಸಾರ್ಟ್ ಬಳಿಯಲ್ಲಿ ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿನಯಿಸುತ್ತಿರುವ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಫೈಟ್ ಮಾಸ್ಟರ್ ವಿನೋದ್ ಸಾಹಸ ನಿರ್ದೇಶನದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರಕ್ಕೆ ಗುರುದೇಶಪಾಂಡೆ ನಿರ್ಮಾಣವಿದೆ.

ಕಳೆದ ಐದು ದಿನಗಳಿಂದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರೀಕರಣದ ವೇಳೆ ಮುಂಜಾಗ್ರತ ಕ್ರಮಗಳ ತೆಗೆದುಕೊಂಡಿದ್ರಾ ಅಥವಾ ಇಲ್ಲವಾ ಎಂಬುದರ ಮಾಹಿತಿ ಲಭ್ಯವಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಫೈಟ್ ಮಾಸ್ಟರ್ ವಿನೋದ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Source: publictv.in Source link