ಜಮೀರ್​ಗೆ ನನ್ನ ಮೇಲೆ ಪ್ರೀತಿ.. ಅದಕ್ಕೆ ನನ್ನ ಮೇಲೆ ಆರೋಪ ಮಾಡ್ತಾರೆ – ಹೆಚ್​ಡಿಕೆ ಟಾಂಗ್

ಜಮೀರ್​ಗೆ ನನ್ನ ಮೇಲೆ ಪ್ರೀತಿ.. ಅದಕ್ಕೆ ನನ್ನ ಮೇಲೆ ಆರೋಪ ಮಾಡ್ತಾರೆ – ಹೆಚ್​ಡಿಕೆ ಟಾಂಗ್

ರಾಮನಗರ: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದ ಹಿನ್ನೆಲೆ ನನಗೆ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅವರ ಮೇಲೇ ಡೌಟ್ ಬರುತ್ತಿದೆ ಎಂದು ಹೇಳಿಕೆ ನೀಡಿದ್ದರು.. ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ.. ಅವರಿಗೆ ನನ್ನ ಮೇಲೆ ಪ್ರೀತಿ ಅದಕ್ಕೆ ನನ್ನ ಮೇಲೆ ಆರೋಪ ಮಾಡ್ತಾರೆ ಎಂದಿದ್ದಾರೆ.

ನನ್ನ ಮೇಲೆಯೇ ಕಣ್ಣಿದೆ.. ಅಧಿಕಾರ ಇದ್ದರೂ, ಇಲ್ಲದಿದ್ದರೂ ನನ್ನ ಮೇಲೇ ಕಣ್ಣು.. ಯಾರೋ ಮಾತನಾಡುವುದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ.. ಅದೆಲ್ಲವೂ ಅನಾವಶ್ಯಕ.. ಅದರ ಬಗ್ಗೆ ಅವಶ್ಯಕತೆ ಇಲ್ಲ.. ಕೇಂದ್ರ ಸರ್ಕಾರ ನನ್ನ ಕೈಯಲ್ಲಿದ್ದೆಯಾ ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನಾನು ED ದಾಳಿಗೆ ಜಗ್ಗಲ್ಲ, ಬಗ್ಗಲ್ಲ, ಹೆದರಲ್ಲ, ಬೆದರಲ್ಲ; ಜಮೀರ್​​ ಅಹ್ಮದ್​​

ಪ್ರತಿದಿನ ಕಾರ್ಯಕರ್ತರು ಬರ್ತಾರೆ.. ನಾನು ಕೃಷಿಯಲ್ಲಿ ತೊಡಗಿದ್ದೇನೆ.. ತೋಟದ ಮನೆಯಲ್ಲಿ ನಾನು ಕೃಷಿಯಲ್ಲಿ ತೊಡಗಿದ್ದೇನೆ.. ಇಡಿ, ಇನ್ ಕಮ್ ಟ್ಯಾಕ್ಸ್ ನನ್ನ ಕೈಯಲ್ಲಿ ಇಲ್ಲ. ಅವರಿಗೆ ನನ್ನ ಮೇಲೆ ಪ್ರೀತಿ.. ಅದಕ್ಕೆ ನನ್ನ ಮೇಲೆ ಆರೋಪ ಮಾಡ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ED ದಾಳಿ: ನಂಗೆ ಈಗ ಕುಮಾರಸ್ವಾಮಿ ಮೇಲೆಯೇ ಡೌಟ್ ಬರ್ತಿದೆ -ಜಮೀರ್ ಕಿಡಿ

ಇದನ್ನೂ ಓದಿ: ‘ನಂದು ಬ್ಲಾಕ್​​ ಅಲ್ಲ.. ವೈಟ್’ ಹಿಂಗ್ಯಾಕೆ ಹೇಳಿದ್ರು ಜಮೀರ್?

Source: newsfirstlive.com Source link