‘ಲವ್​ ಯು ರಚ್ಚು’ ಶೂಟಿಂಗ್ ವೇಳೆ ಫೈಟರ್ ಸಾವು; ನಿರ್ಮಾಪಕ ಗುರು ದೇಶಪಾಂಡೆ ಹೇಳಿದ್ದೇನು..?

‘ಲವ್​ ಯು ರಚ್ಚು’ ಶೂಟಿಂಗ್ ವೇಳೆ ಫೈಟರ್ ಸಾವು; ನಿರ್ಮಾಪಕ ಗುರು ದೇಶಪಾಂಡೆ ಹೇಳಿದ್ದೇನು..?

ಬೆಂಗಳೂರು: ಲವ್​ ಯೂ ರಚ್ಚು ಚಿತ್ರದ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು, ಫೈಟರ್​​ ವಿವೇಕ್ (28) ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಚಿತ್ರದ ನಿರ್ಮಾಪಕ, ಕ್ರಿಯೇಟಿವ್ ಹೆಡ್​ ಗುರು ದೇಶಪಾಂಡೆ ಮಾತನಾಡಿ.. ನಾನು ಸ್ಪಾಟ್​ಅಲ್ಲಿ ಇರಲಿಲ್ಲ. ಹೊರಗಡೆ ಇದ್ದೇನೆ, ನಾನು ಚಿತ್ರವನ್ನ ನಿರ್ಮಾಣ ಮಾಡಿದ್ದೇನೆ. ನನಗೆ ಈ ಬಗ್ಗೆ ತುಂಬಾ ಮಾಹಿತಿ ಇಲ್ಲ, ತುಂಬಾ ಟೆನ್ಷನ್​ನಲ್ಲಿ ಇದ್ದೇನೆ. ಅಲ್ಲಿಗೆ ಹೋಗಿ ತಿಳಿದುಕೊಂಡು ನಾನು ಮಾಹಿತಿ ನೀಡುತ್ತೇನೆ. ತಂಬಾ ದೂರದಲ್ಲಿ ಶೂಟಿಂಗ್ ಮಾಡಲಾಗಿತ್ತು. ಡೈರೆಕ್ಟರ್ ಹಾಗೂ ಡೈರೆಕ್ಟರ್ ಅಸಿಸ್ಟೆಂಟ್​ಗಳು ಅಲ್ಲಿ ಇದ್ದರು ಅಂತಾ ತಿಳಿಸಿದ್ದಾರೆ.

ಬಿಡದಿಯ ಜೋಗನಪಾಳ್ಯದಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಕ್ರೇನ್ ಮೂಲಕ ರೋಪ್ ಶೂಟ್ ಮಾಡುತ್ತಿದ್ದಾಗ ಹೈಟೆನ್ಷನ್ ವೈರ್​ ತಾಗಿ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ಬಿಡದಿ ಠಾಣೆ ಇನ್ಸ್​ಪೆಕ್ಟರ್ ಪ್ರಕಾಶ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ನಂತರ ಡೈರೆಕ್ಟರ್ ಶಂಕರ್ ಎಸ್ ರಾಜ್ ಹಾಗೂ ಫೈಟ್ ಮಾಸ್ಟರ್ ವಿನೋದ್ ಅವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಜಯ್ ರಾವ್, ರಚಿತಾ ರಾಮ್ ನಟನೆಯ ಚಿತ್ರ ಇದಾಗಿದೆ.

Source: newsfirstlive.com Source link