ನಾಲಿಗೆ ಚಪ್ಪರಿಸಿ ತಿನ್ನಿ ಅನಾನಸ್ ಕೇಸರಿಬಾತ್

ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರು ನಾಲಿಗೆ ಚಪ್ಪರಿಸಿ ಸಿಹಿ ತಿಂಡಿಯನ್ನು ತಿನ್ನುತ್ತಾರೆ. ಅದರಲ್ಲೂ ಮಕ್ಕಳಿಗೆ ಸಿಹಿ ತಿಂಡಿ ಎಂದರೆ ತುಂಬಾ ಇಷ್ಟ. ನಿಮ್ಮ ಮಕ್ಕಳಿಗಾಗಿ ನಿಮ್ಮ ಕೈಯಾರೆ ಇಂದು ಮನೆಯಲ್ಲಿ ಸ್ವೀಟ್ ತಯಾರಿಸಿಕೊಡಿ.

ಹಬ್ಬದ ದಿನ ಸಿಹಿ ತಿಂಡಿ ಇದ್ದರೆ ಹಬ್ಬಕ್ಕೆ ಒಂದು ಕಳೆ ಇರುತ್ತದೆ. ಮನೆಯಲ್ಲಿ ಸ್ವೀಟ್ ಮಾಡಬೇಕು ಎಂದರೆ ಯಾವುದಾದರೂ ವಿಶೇಷ ಕಾರ್ಯಕ್ರಮ ಅಥವಾ ಹಬ್ಬ ಇರಬೇಕಿತ್ತು. ಆದರೆ ಇಂದು ಕಾಲ ಬದಲಾದಂತೆ ಆಹಾರ ಕ್ರಮವು ಬದಲಾಗಿದೆ. ಯಾವಾಗ ಬೇಕಾದರೂ ಯಾವ ಆಹಾರವನ್ನಾದರು ಸೇವಿಸುತ್ತೇವೆ. ಮನೆಯಲ್ಲಿ ಮಾಡಲಾಗಲಿಲ್ಲ ಎಂದರೆ ನಾವು ಹೋಟೇಲ್‍ಗಳಲ್ಲಿಯಾದ್ರೂ ಸಿಹಿ ತಿಂಡಿ ತಿನ್ನುತ್ತೇವೆ. ಇಂದು ಮನೆಯಲ್ಲಿ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ಅನಾನಸ್ ಕೇಸರಿಬಾತ್ ಮಾಡಿ ಸವಿಯಿರಿ.


ಬೇಕಾಗುವ ಸಾಮಗ್ರಿಗಳು:
*ಅನಾನಸ್- ಒಂದು ಕಪ್
*ಬೆಣ್ಣೆ- ಒಂದು ಚಮಚ
*ಸಕ್ಕರೆ- ಒಂದು ಚಮಚ
*ಹಾಲು-1 ಕಪ್
*ರವೆ-ಒಂದು ಕಪ್
*ಸಕ್ಕರೆ- ಅರ್ಧ ಕಪ್
*ಏಲಕ್ಕಿ ಹುಡಿ-ಳಿ ಚಮಚ
*ಕೇಸರಿ-ಹಾಲಿನಲ್ಲಿ ಮುಳುಗಿಸಿಡಬೇಕು

blank

ಮಾಡುವ ವಿಧಾನ:
* ಒಂದು ಪಾತ್ರೆಗೆ ಅನಾನಸ್, ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು 3-4 ನಿಮಿಷ ಕಾಲ ಕುದಿಸಿ.
* ಈಗ ಇನ್ನೊಂದು ತವಾ ತೆಗೆದುಕೊಂಡು ಅದರಲ್ಲಿ ರವೆಯನ್ನು ಬೆಣ್ಣೆಯೊಂದಿಗೆ ಬಿಸಿ ಮಾಡಿ. ರವೆ ಗುಲಾಬಿ ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಹುರಿದುಕೊಳ್ಳಿ

blank

* ಈಗ ರವೆಗೆ ಹಾಲನ್ನು ಹಾಕಿ. ತಕ್ಷಣ ಇದಕ್ಕೆ ಸ್ವಲ್ಪ ನೀರನ್ನು ಹಾಕಿಕೊಂಡು ಸರಿಯಾಗಿ ಕಲಸಿ. ಇಲ್ಲವಾದರೆ ರವೆ ಗಟ್ಟಿಯಾಗುತ್ತದೆ. ಕೆಲವು ನಿಮಿಷ ತಿರುಗಿಸುತ್ತಾ ಇರಬೇಕಾಗುತ್ತದೆ. ಇದು ದಪ್ಪಗೆ ಆದಾಗ ಸಕ್ಕರೆ ಹಾಕಿ ಮಿಶ್ರಣವಾಗುವ ತನಕ ತಿರುಗಿಸಿ.
* ಈಗ ಇದಕ್ಕೆ ಅನಾನಸ್, ಕೇಸರಿ ಹಾಕಿದ ಹಾಲು, ಏಲಕ್ಕಿ ಹುಡಿಯನ್ನು ಮಿಶ್ರಣಕ್ಕೆ ಹಾಕಿ. ಸರಿಯಾಗಿ ಮಿಶ್ರಣವಾದ ಬಳಿಕ 1-2 ನಿಮಿಷ ಬೇಯಿಸಿದರೆ ರುಚಿಯಾದ ಅನಾನಸ್ ಕೇಸರಿಬಾತ್ ಸವಿಯಲು ಸಿದ್ಧವಾಗುತ್ತದೆ.

Source: publictv.in Source link