‘ಲವ್​ ಯು ರಚ್ಚು’ ಸಿನಿಮಾ ದುರಂತ ಪ್ರಕರಣ; ನಿರ್ದೇಶಕ ಸೇರಿ ಮೂವರು ಪೊಲೀಸರ ವಶಕ್ಕೆ

‘ಲವ್​ ಯು ರಚ್ಚು’ ಸಿನಿಮಾ ದುರಂತ ಪ್ರಕರಣ; ನಿರ್ದೇಶಕ ಸೇರಿ ಮೂವರು ಪೊಲೀಸರ ವಶಕ್ಕೆ

‘ಲವ್​ ಯು ರಚ್ಚು’ ಚಿತ್ರದ ಶೂಟಿಂಗ್ ವೇಳೆ ಅವಘಡ ಸಂಭವಿಸಿದ ಪರಿಣಾಮ ವಿದ್ಯುತ್ ಶಾಕ್ ತಗುಲಿ ಫೈಟರ್​​ ಒಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣ ಸಂಬಂಧ ಪೊಲೀಸರು ಈಗ ಸಿನಿಮಾದ ನಿರ್ದೇಶಕ ಶಂಕರ್ ರಾಜ್, ಫೈಟ್ ಮಾಸ್ಟರ್ ವಿನೋದ್ ಮತ್ತು ನಿರ್ಮಾಪಕ ಗುರುದೇಶ ಪಾಂಡೆಯವರನ್ನು ವಶಕ್ಕೆ ಪಡೆದಿದ್ದಾರೆ.

ಬಿಡದಿಯ ಜೋಗನಪಾಳ್ಯದಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ 11 KV ವಿದ್ಯುತ್ ತಂತಿ ತಗುಲಿ ಫೈಟರ್ ಅಸಿಸ್ಟೆಂಟ್ ವಿವೇಕ್ ಎಂಬುವರು ಸಾವನ್ನಪ್ಪಿದ ಕೂಡಲೇ ಪೊಲೀಸರು​ ದೂರು ದಾಖಲಿಸಿಕೊಂಡರು. ಪ್ರಕರಣದಲ್ಲಿ ನಿರ್ಮಾಪಕ ಗುರುದೇಶ ಪಾಂಡೆ A1, ನಿರ್ದೇಶಕ ಶಂಕರ್ ರಾಜ್ A2 ಮತ್ತು ಸಾಹಸ ನಿರ್ದೇಶಕ ವಿನೋದ್ A3 ಆಗಿದ್ದರು.

ಇದನ್ನೂ ಓದಿ: ‘ಲವ್​ ಯು ರಚ್ಚು’ ಚಿತ್ರೀಕರಣದ ವೇಳೆ ಅವಘಡ; ವಿದ್ಯುತ್ ತಂತಿ ತಗುಲಿ ಫೈಟರ್ ಸಾವು

ಮೂವರು ಆರೋಪಿಗಳ ವಿರುದ್ಧ 304, 308 ಅಡಿಯಲ್ಲಿ ಬಿಡದಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಈ ಸೆಕ್ಷನ್ಸ್​​ ಪ್ರಕಾರ ಆರೋಪಿಗಳಿಗೆ 3-7 ವರ್ಷಗಳ ಶಿಕ್ಷೆ ನೀಡಲು ಅವಕಾಶವಿದೆ.

Source: newsfirstlive.com Source link