ರೌಡಿಸಂ ವಿರುದ್ಧ ದಂಗೆ; 200ಕ್ಕೂ ಹೆಚ್ಚು ರೌಡಿಗಳ ನಿದ್ದೆಗೆಡಿಸಿದ ಪೊಲೀಸರು

ರೌಡಿಸಂ ವಿರುದ್ಧ ದಂಗೆ; 200ಕ್ಕೂ ಹೆಚ್ಚು ರೌಡಿಗಳ ನಿದ್ದೆಗೆಡಿಸಿದ ಪೊಲೀಸರು

ಬೆಂಗಳೂರು: ರೌಡಿಸಂ ವಿರುದ್ಧ ದಂಗೆ ಎದ್ದಿರುವ ಬೆಂಗಳೂರು ಪೊಲೀಸರು ಇಂದು ಕೂಡ ದಾಳಿ ನಡೆಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ರೌಡಿ ಶೀಟರ್​​ಗಳ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.

ಬೆಳಗ್ಗೆ 4 ಗಂಟೆ ಸಮಯದಲ್ಲಿ ಏಕಕಾಲಕ್ಕೆ ಪೊಲೀಸರು ದಾಳಿ ಮಾಡಿದ್ದಾರೆ. ಸಿದ್ದಾಪುರ, ಸಿಕೆ ಅಚ್ಚುಕಟ್ಟು, ಹನುಮಂತನಗರ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ರೇಡ್ ಮಾಡಿದ್ದಾರೆ. ತೋಪರಾಜ, ಮೂರಡಿ ಸುನಿಲ, ಭೋಜ, ವೆಂಕಟೇಶ್, ಸಂಜಯ್ ಸೇರಿದಂತೆ ಪ್ರಮುಖ ರೌಡಿ ಆಸಾಮಿಗಳ ಮನೆ ಮೇಲೆ ದಾಳಿ ಮಾಡಿ ಮನೆಯಲ್ಲಿದ್ದ ಮಚ್ಚು, ಲಾಂಗು ಹಾಗೂ ಮಾರಕಾಸ್ತ್ರಗಳನ್ನ ವಶಕ್ಕೆ ಪಡ್ಕೊಂಡಿದ್ದಾರೆ.

ದಾಳಿ ವೇಳೆ ಸಿಕ್ಕಿಬಿದ್ದ ಕೆಲವು ರೌಡಿಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೆಲವು ಕಾಲ ಕ್ಲಾಸ್ ತೆಗೆದುಕೊಂಡಿರುವ ಪೊಲೀಸರು ಬಳಿಕ ಮುಚ್ಚಳಿಕೆಯನ್ನ ಬರೆಸಿಕೊಂಡು ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

Source: newsfirstlive.com Source link