ಬೆಂಬಿಡದ ಸಂಕಷ್ಟ; ಪತಿ ಆಯ್ತು ಇದೀಗ ಶಿಲ್ಪಾ ಶೆಟ್ಟಿ, ತಾಯಿ ಸುನಂದಾ ಶೆಟ್ಟಿ ವಿರುದ್ಧ FIR

ಬೆಂಬಿಡದ ಸಂಕಷ್ಟ; ಪತಿ ಆಯ್ತು ಇದೀಗ ಶಿಲ್ಪಾ ಶೆಟ್ಟಿ, ತಾಯಿ ಸುನಂದಾ ಶೆಟ್ಟಿ ವಿರುದ್ಧ FIR

ಮುಂಬೈ: ಒಂದೆಡೆ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ವಿರುದ್ಧ ಅಶ್ಲೀಲ ಚಿತ್ರಗಳ ನಿರ್ಮಾಣದ ಆರೋಪ ಕೇಳಿಬಂದಿದ್ದರೆ ಇತ್ತ ಸ್ವತಃ ಶಿಲ್ಪಾ ಶೆಟ್ಟಿ ಹಾಗೂ ತಾಯಿ ಸುನಂದ ಶೆಟ್ಟಿ ವಿರುದ್ಧ ವಂಚನೆ ಕೇಸ್ ಕೂಡ ದಾಖಲಾಗಿದೆ.

ಉತ್ತರ ಪ್ರದೇಶದಲ್ಲಿ ಶಿಲ್ಪ ಶೆಟ್ಟಿ ಹಾಗೂ ತಾಯಿ ಸುನಂದ ಶೆಟ್ಟಿ ಇಯೊಸಿಸ್ ವೆಲ್​ನೆಸ್ ಸೆಂಟರ್​ನ್ನು ಪ್ರಾರಂಭಿಸಿದ್ದರು.. ಇದಕ್ಕೆ ಶಿಲ್ಪಾ ಶೆಟ್ಟಿ ಚೇರ್​​ಮನ್ ಆಗಿದ್ರೆ ಅವರ ತಾಯಿ ಸುನಂದ ನಿರ್ದೇಶಕಿಯಾಗಿದ್ದರು. ವೆಲ್​ನೆಸ್ ಸೆಂಟರ್​ನ ಬ್ರ್ಯಾಂಚ್ ಒಂದನ್ನು ನಿರ್ಮಿಸುವುದಾಗಿ ಹೇಳಿ ತಾಯಿ ಮಗಳಿಬ್ಬರೂ ಜನರಿಂದ ಕೋಟ್ಯಂತರ ರೂ ಹಣ ಪಡೆದುಕೊಂಡಿದ್ದರು. ಆದರೆ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಲಖನೌದ ಹಜ್ರತ್ ಗಂಜ್ ಮತ್ತು ವಿಭೂತಿ ಖಂಡ್ ಪೊಲೀಸ್ ಸ್ಟೇಷನ್​ಗಳಲ್ಲಿ ಪ್ರತ್ಯೇಕ ಎಫ್​ಐಆರ್​ಗಳು ಇವರ ವಿರುದ್ಧ ದಾಖಲಾಗಿದೆ. ಇನ್ನು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.

Source: newsfirstlive.com Source link