ಟಿಪ್ಪು ಸುಲ್ತಾನ್​​ ಜಯಂತಿ ಮಾಡಿದ್ದು ನಾನೇ.. ಏನಿವಾಗ?; ಸಿದ್ದರಾಮಯ್ಯ

ಟಿಪ್ಪು ಸುಲ್ತಾನ್​​ ಜಯಂತಿ ಮಾಡಿದ್ದು ನಾನೇ.. ಏನಿವಾಗ?; ಸಿದ್ದರಾಮಯ್ಯ

ಬೆಂಗಳೂರು: ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಟಿಪ್ಪು ಸುಲ್ತಾನ್​​ ಜಯಂತಿ ಮಾಡಿದ್ದೇ ಏನಿವಾಗ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಪ್ರಶ್ನಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಸಿದ್ದರಾಮಯ್ಯ, ನಾನೇ ಟಿಪ್ಪು ಸುಲ್ತಾನ್​​ ಜಯಂತಿ ಮಾಡಿದ್ದು. ಟಿಪ್ಪುವಿನ ರಾಜ್ಯದ ದಿವಾನರಾಗಿ ಬ್ರಾಹ್ಮಣ ವರ್ಗದ ಪೂರ್ಣಯ್ಯರನ್ನು ನೇಮಿಸಿದ್ದರು. ಪೂರ್ಣಯ್ಯ ಮೇಲಿಲ್ಲದ ಕೋಪ ಟಿಪ್ಪು ಮೇಲ್ಯಾಕೆ ಎಂದು ಪ್ರಶ್ನಿಸಿದರು.

ಟಿಪ್ಪು ಸುಲ್ತಾನ್​​ ರಾಜ್ಯದ ದಿವಾನರಾಗಿದ್ದ ಪೂರ್ಣಯ್ಯ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಇವರೇ ಟಿಪ್ಪು ಹಣಕಾಸು ವಿಚಾರಗಳನ್ನು ನೋಡಿಕೊಂಡಿದ್ದು. ಟಿಪ್ಪು ದೇಶದ್ರೋಹದ ಕೆಲಸ ಮಾಡಿದ್ದಾರೆ ಎಂದು ಹೇಳಿದ್ಯಾರು? ನಮಗೆ ಪಾಠ ಮಾಡೋಕೆ ಬರ್ತೀರಾ ಎಂದು ಬಿಜೆಪಿ ವಿರುದ್ಧ ಕುಟುಕಿದರು ಸಿದ್ದರಾಮಯ್ಯ.

ಇದನ್ನೂ ಓದಿ: ‘ನಂದು ಬ್ಲಾಕ್​​ ಅಲ್ಲ.. ವೈಟ್’ ಹಿಂಗ್ಯಾಕೆ ಹೇಳಿದ್ರು ಜಮೀರ್?

Source: newsfirstlive.com Source link