ಲವ್​ಯೂ ರಚ್ಚು ಶೂಟಿಂಗ್ ದುರಂತ; ಸಾಕ್ಷ್ಯನಾಶ ಆರೋಪದಡಿ ಎಫ್​ಐಆರ್​ಗೆ ಸಿದ್ಧತೆ

ಲವ್​ಯೂ ರಚ್ಚು ಶೂಟಿಂಗ್ ದುರಂತ; ಸಾಕ್ಷ್ಯನಾಶ ಆರೋಪದಡಿ ಎಫ್​ಐಆರ್​ಗೆ ಸಿದ್ಧತೆ

ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯನಾಶ ಅಡಿಯಲ್ಲಿ ಚಿತ್ರತಂಡದ ವಿರುದ್ದ FIR ನಲ್ಲಿ ಉಲ್ಲೇಖಿಸಲು ಸಿದ್ಧತೆ ನಡೆದಿದೆಯಂತೆ. ಐಪಿಸಿ ಸೆಕ್ಷನ್ 304 , 308 ಜೊತೆ 201 IPC ಸಾಕ್ಷನಾಶ ಸೆಕ್ಷನ್ ಆಡ್ ಆನ್ ಮಾಡಲಾಗುವುದು ಎನ್ನಲಾಗಿದೆ.

blank

ಘಟನೆ ನಡೆದು ಕೆಲ ತಾಸುಗಳಾದ್ರು ಪೊಲೀಸರಿಗೆ ಚಿತ್ರತಂಡ ಮಾಹಿತಿ ನೀಡಿಲ್ಲ.. ಜೆಸಿಬಿ ತರಿಸಿ ಕ್ರೇನ್ ತೆರವುಗೊಳಿಸೋ ಕೆಲಸಕ್ಕೆ ಮುಂದಾಗಿದ್ದಾರೆ. ವಿವೇಕ್ ಮೃತ ಪಡ್ತಿದ್ದಂತೆ ಪ್ಯಾಕ್ ಆಪ್ ಮಾಡ್ಕೊಂಡು ಚಿತ್ರತಂಡ ಕಾಲ್ಕಿತ್ತಿದೆ.. ನಂತರ ಘಟನೆ ನಡೆದ ಸ್ಥಳಕ್ಕೆ ಬಂದಿರೋ ಗ್ರಾಮಸ್ಥರು ಚಿತ್ರತಂಡ ಅನುಮಾನಾಸ್ಪದವಾಗಿ ಕಾಲ್ಕಿಳ್ತಿದ್ದಂತೆ ಬಿಡದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

blank
ಮೃತ ವಿವೇಕ್

Source: newsfirstlive.com Source link