ತಮಿಳು ನಿರ್ದೇಶಕನ ಜಾತಿಯ ಬಗ್ಗೆ ಕೀಳು ಭಾಷೆಯ ಬಳಕೆ; ಹಾಟ್​ ನಟಿ ಅರೆಸ್ಟ್

ತಮಿಳು ನಿರ್ದೇಶಕನ ಜಾತಿಯ ಬಗ್ಗೆ ಕೀಳು ಭಾಷೆಯ ಬಳಕೆ; ಹಾಟ್​ ನಟಿ ಅರೆಸ್ಟ್

ಚೆನ್ನೈ: ಜಾತಿನಿಂದನೆ ಆರೋಪದ ಮೇಲೆ ತಮಿಳು ನಟಿ ಮೀರಾ ಮಿಥುನ್​ರನ್ನ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 7 ನೇ ತಾರೀಖು ಮೀರಾ ಮಿಥುನ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದು ಆ ವಿಡಿಯೋದಲ್ಲಿ ನಿರ್ದಿಷ್ಠ ಸಮುದಾಯವೊಂದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು ಕೆಲವರು ಅವರನ್ನ ಬಂಧಿಸುವಂತೆ ಒತ್ತಾಯಿಸಿದ್ದರು.

ಮೀರಾ ಮಿಥುನ್ ವಿರುದ್ಧ ವಿಡುತಲೈ ಸಿರುತೈಗಳ್ ಕಾಟ್ಚಿ ಪಾರ್ಟಿಯ ಮುಖ್ಯಸ್ಥ ವನ್ನಿ ಅರಸು ಎಂಬುವವರು ದೂರು ನೀಡಿದ್ದರು. ಈ ಹಿನ್ನೆಲೆ ಚೆನ್ನೈ ಪೊಲೀಸರು ಕೇಸ್ ದಾಖಲಿಸಿ ಇದೀಗ ನಟಿಯನ್ನ ಅರೆಸ್ಟ್ ಮಾಡಿದ್ದಾರೆ.

blank

ವಿಡಿಯೋದಲ್ಲಿ ಸಿನಿಮಾ ನಿರ್ದೇಶಕರೊಬ್ಬರು ತನ್ನ ಫೋಟೋವನ್ನು ಕದ್ದು ಅದನ್ನ ಸಿನಿಮಾ ಪೋಸ್ಟರ್​ಗೆ ಬಳಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ನಂತರ ನಿರ್ದೇಶಕರ ಸಮುದಾಯದ ವಿರುದ್ಧ ಕೀಳುಪದಗಳನ್ನ ಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ನಟಿಯ ವಿರುದ್ಧ ಐಪಿಸಿ ಸೆಕ್ಷನ್, 153, 153ಎ(1), 505(1)(ಬಿ), 505(2) ಅಡಿ ಕೇಸ್ ದಾಖಲಿಸಲಾಗಿದೆ.

blank

ತಮಿಳು ಸಿನಿಮಾಗಳಲ್ಲಿ ಮೀರಾ ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸುತ್ತಿದ್ದರು.. ತಮಿಳಿನ ಬಿಗ್​ಬಾಸ್​ ಸೀಸನ್​ನ 3 ನೇ ಸೀಸನ್​ನಲ್ಲಿ ಕಂಟೆಸ್ಟೆಂಟ್ ಕೂಡ ಆಗಿದ್ದರು. ಎಟ್ಟು ತೊಟ್ಟಕ್ಕಲ್ ಸಿನಿಮಾ ಅವರ ಡೆಬ್ಯೂಟ್ ಸಿನಿಮಾ ಆಗಿತ್ತು.. ನಂತರ 2018 ರಲ್ಲಿ ತೆರೆಕಂಡ ಥಾನಾ ಸೇರುಂದ ಕೂಟ್ಟಮ್ ಸಿನಿಮಾದಲ್ಲೂ ನಟಿಸಿದ್ದಾರೆ.

 

View this post on Instagram

 

A post shared by MeeraMitun (@meeramitun)

Source: newsfirstlive.com Source link