ನಾನಾ ನೀನಾ ನೋಡೇ ಬಿಡೋಣ, ತಾಕತ್ತಿದ್ರೆ ಎದುರಿಗೆ ಬಾ; ಸಂಬರ್ಗಿಗೆ ಚಂದ್ರಚೂಡ್​​ ಸವಾಲ್​​

ನಾನಾ ನೀನಾ ನೋಡೇ ಬಿಡೋಣ, ತಾಕತ್ತಿದ್ರೆ ಎದುರಿಗೆ ಬಾ; ಸಂಬರ್ಗಿಗೆ ಚಂದ್ರಚೂಡ್​​ ಸವಾಲ್​​

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರ್ಗಿ ಮತ್ತು ಚಕ್ರವರ್ತಿ ಚಂದ್ರಚೂಡ್​ ಅತೀ ಹೆಚ್ಚು ಕಾಲ ಜೊತೆಯಲ್ಲೇ ಇದ್ದವರು. ವೈಲ್ಡ್​ ಕಾರ್ಡ್​ ಮೂಲಕ ಚಕ್ರವರ್ತಿ ಚಂದ್ರಚೂಡ್​ ಬಿಗ್​ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಪ್ರಶಾಂತ್​​​ಗೆ ಫುಲ್​​ ಖುಷಿಯಾಗಿತ್ತು. ಹೀಗಿದ್ದ ಇಬ್ಬರ ನಡುವೆಯೇ ಆಗ್ಗಾಗ ಕಿರಿಕ್​​ ನಡೆಯುತ್ತಲೇ ಇರುತ್ತದೆ. ಈಗ ಪ್ರಶಾಂತ್​​ ಸಂಬರ್ಗಿಗೆ ಚಕ್ರವರ್ತಿ ಚಂದ್ರಚೂಡ್​ ಸವಾಲ್​ ಎಸೆದಿದ್ದಾರೆ.

ಪ್ರಶಾಂತ್​​ ಸಂಬರ್ಗಿ, ನೀವು ಬರಹಗಾರನ ಮುಖವಾಡ, ಹೋರಾಟದ ಮುಖವಾಡ ಇತ್ಯಾದಿ ಇತ್ಯಾದಿ ಎಂದು ವಾಂತಿ ಮಾಡಿಕೊಳ್ಳುತ್ತಿದ್ದೀರಿ. ನಾವು ನೀವು ಹೊರಬರುವ ತನಕ ಮಾತನಾಡಬಾರದು ಎಂದು ನೈತಿಕ ಪ್ರಜ್ಞೆಯಿಂದ ಮೌನವಿದ್ದೆ. ನಿಮ್ಮ ಹೋರಾಟ, ನನ್ನ ಜನಪರ ಹೋರಾಟಗಳು, ನನ್ನ ಬರಹ, ನಿಮ್ಮ ಸಮಾಜದ ಕೆಲಸದ ಬಗ್ಗೆ ಒಂದು ವೇದಿಕೆ ಮೇಲೆ ಚರ್ಚೆ ಮಾಡೋಣವೆ ಎಂದು ಸವಾಲ್​​ ಹಾಕಿದ್ದಾರೆ ಚಂದ್ರಚೂಡ್​​.

blank

ಒಂದೇ ವೇದಿಕೆಯಲ್ಲಿ ಯಾರಿಗೆ ಯಾರು ಕಪ್ಪು ಮಸಿ ಬಳಿದಿದ್ದಾರೆ ಎಂದು ನೋಡೋಣವೇ. ನೀವೊಂದು ಚಾನೆಲ್​​, ನಾನೊಂದು ಚಾನೆಲ್​ ಎಂದು ಟೈಮ್​​ ವೇಸ್ಟ್​ ಮಾಡೋದು ಬೇದ. ಬದಲಿಗೆ ನೇರವಾಗಿ ಭೇಟಿ ಮಾಡಿ, ನನ್ನ ಕೆಲಸಗಳ ಬಗ್ಗೆ ದಾಖಲಾತಿ ಸಹಿತ ತರುವೆ ಎಂದಿದ್ದಾರೆ.

blank

ಓಪನ್​​ ಡಿಬೇಟ್​

ಓಪನ್​​​ ಡಿಬೇಟ್​​ ಬರ್ತೀರಾ? ಯಾವ ಮಾಧ್ಯಮ ? ಎಲ್ಲಿ, ಯಾವತ್ತು, ಯಾವಾಗ? ಎಂದು ನೀವು ಹೇಳಿ. ದಯವಿಟ್ಟು ಕಿತ್ತೂರು ರಾಣಿ ಚನ್ನಮ್ಮನ ಮೊಮ್ಮಗ ಎಂದು ಹುಸಿ ಪ್ರಚಾರ ಪಡೆಯಬೇಡಿ. ನಿಮ್ಮ ಬಗ್ಗೆ ಇಂಚಿಂಚೂ ದಾಖಲಾತಿಯೊಂದಿಗೆ ಬರುವೆ, ನನ್ನ 20 ವರುಷದ ಪತ್ರಿಕೋದ್ಯಮದ ಮೇಲಾಣೆ. ಸಂಬರಗಿಯಿಂದ ಮೊನ್ನೆಯ ಕ್ವಾರೈಂಟೈನ್ ತನಕ, ದೇವನೂರಿನಿಂದ ಈ ಕ್ಷಣದ ತನಕ. ತಾಕತ್ತಿದೆಯಾ ಸಂಬರ್ಗಿ ಎಂದು ಚಾಲೆಂಜ್​​ ಮಾಡಿದ್ದಾರೆ.

Source: newsfirstlive.com Source link