ಕ್ಯಾಂಟೀನ್​​ ಹೆಸ್ರು ಬದಲಿಸಬಹುದು, ಇಂದಿರಾ ಗಾಂಧಿ ವ್ಯಕ್ತಿತ್ವವನ್ನಲ್ಲ; ಸಿಟಿ ರವಿಗೆ ಖಾದರ್​ ಟಾಂಗ್

ಕ್ಯಾಂಟೀನ್​​ ಹೆಸ್ರು ಬದಲಿಸಬಹುದು, ಇಂದಿರಾ ಗಾಂಧಿ ವ್ಯಕ್ತಿತ್ವವನ್ನಲ್ಲ; ಸಿಟಿ ರವಿಗೆ ಖಾದರ್​ ಟಾಂಗ್

ಬೆಂಗಳೂರು: ಇಂದಿರಾ ಕ್ಯಾಂಟೀನ್​ ಹೆಸರು ಬದಲಿಸಿ ಎಂದು ಸಿಎಂ ಬಸವರಾಜ್​​ ಬೊಮ್ಮಾಯಿಗೆ ಮನವಿ ಮಾಡಿದ್ದ ಸಚಿವ ಸಿ.ಟಿ ರವಿಗೆ ಮಾಜಿ ಸಚಿವ ಯು.ಟಿ ಖಾದರ್​​ ಟಾಂಗ್​​ ಕೊಟ್ಟಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತಾಡಿದ ಯು.ಟಿ ಖಾದರ್​​​, ನೀವು ಕ್ಯಾಂಟಿನ್​​ ಹೆಸರು ಬದಲಿಸಬಹುದು, ಆದರೆ ಇಂದಿರಾ ಗಾಂಧಿ ವ್ಯಕ್ತಿತ್ವವನ್ನಲ್ಲ ಎಂದು ತಿರುಗೇಟು ನೀಡಿದರು.

ಕ್ಯಾಂಟೀನ್​​ ಹೆಸರು ಮುಖ್ಯವಲ್ಲ, ಸರ್ಕಾರ ನಡೆಸೋದು ಮುಖ್ಯ. ಮೊದಲು ಮುಚ್ಚಿದ್ದ ನೀವು ಕೋರ್ಟ್​ ಆದೇಶದ ಬಳಿಕ ಇಂದಿರಾ ಕ್ಯಾಂಟೀನ್​​ಗೆ ಅನುದಾನ ಬಿಡುಗಡೆ ಮಾಡಿದ್ದೀರಿ. ಕ್ಯಾಂಟೀನ್​​ಗೆ ಇಂದಿರಾ ಗಾಂಧಿಯವರ ಹೆಸರೇ ಸೂಕ್ತ, ಏಕೆಂದರೆ ರೇಷನ್​​ ಕಾರ್ಡ್​ ವ್ಯವಸ್ಥೆ ಜಾರಿಗೆ ತಂದಿದ್ದೇ ಅವರು ಎಂದು ತಿಳಿಸಿದರು.

ಇದನ್ನೂ ಓದಿ: SSLC ಫಲಿತಾಂಶ ಪ್ರಕಟ.. ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳೂ ಪಾಸ್.. ಓರ್ವ ಮಾತ್ರ ಫೇಲ್

ನಾವು ಅಧಿಕಾರದಲ್ಲಿದ್ದಾಗ ವಾಜಪೇಯಿ ಸ್ಕೀಮ್ಸ್​ ಹೆಸರು ಬದಲಿಸಲಿಲ್ಲ. ಅಂತಹ ಕೆಟ್ಟ ಆಲೋಚನೆ ನಾವು ಮಾಡೋದಿಲ್ಲ ಎಂದರು. ಇದೇ ವೇಳೆ ನಿಮಗೆ ಕನ್ನಡದ ಬಗ್ಗೆ ಕಾಳಜಿ ಇದ್ದರೆ ಮೇಕೆದಾಟು ಜಾರಿಗೊಳಿಸಿ. ಮೇಕೆದಾಟು ವಿರುದ್ಧ ಧರಣಿ ಕೂತ ಅಣ್ಣಾಮಲೈಗೆ ಮಾತಾಡಿ ಎಂದು ಸಿ.ಟಿ ರವಿಗೆ ಸವಾಲ್​ ಎಸೆದರು.

ಇದನ್ನೂ ಓದಿ: ನಮ್ಮೆಲ್ಲರ, ಇಂದಿರಾಗಾಂಧಿಯವ್ರ ತಾಯಿ ಅನ್ನಪೂರ್ಣೇಶ್ವರಿ.. ಹೆಸರು ಇಡೋದ್ರಲ್ಲಿ ತಪ್ಪೇನಿದೆ -ಡಾ.ಸುಧಾಕರ್

Source: newsfirstlive.com Source link