SSLC ಫಲಿತಾಂಶ; 625ಕ್ಕೆ 625 ಅಂಕ ಗಳಿಸಿದ 157 ಸ್ಟೂಡೆಂಟ್ಸ್.. ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..

SSLC ಫಲಿತಾಂಶ; 625ಕ್ಕೆ 625 ಅಂಕ ಗಳಿಸಿದ 157 ಸ್ಟೂಡೆಂಟ್ಸ್.. ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..

ಬೆಂಗಳೂರು: ಬಹುನಿರೀಕ್ಷಿತ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ ಇಂದು ಬಿಡುಗಡೆಯಾಗಿದ್ದು ಓರ್ವ ವಿದ್ಯಾರ್ಥಿಯ ಹೊರತಾಗಿ ಪರೀಕ್ಷೆ ಬರೆದ ಬೇರೆಲ್ಲ ವಿದ್ಯಾರ್ಥಿಗಳೂ ಪಾಸ್ ಆಗಿದ್ದಾರೆ. ಒಟ್ಟಾರೆ 99.9 ಪರ್ಸೆಂಟ್ ಫಲಿತಾಂಶ ಬಂದಿದ್ದು ಇದರಲ್ಲಿ 157 ಮಕ್ಕಳು 625 ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ.

ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶದ ವಿವರ ಹೀಗಿದೆ..

  1. 1 ಲಕ್ಷ 28 ಸಾವಿರ 931 ವಿದ್ಯಾರ್ಥಿಗಳು A+ ಗ್ರೇಡ್ ಪಡೆದಿದ್ದಾರೆ.
  2. 2 ಲಕ್ಷ 50 ಸಾವಿರದ 317 ವಿದ್ಯಾರ್ಥಿಗಳು A -ಗ್ರೇಡ್ ಪಡೆದಿದ್ದಾರೆ.
  3. 2ಲಕ್ಷ 87 ಸಾವಿರ 684 ವಿದ್ಯಾರ್ಥಿಗಳು B ಗ್ರೇಡ್ ಪಡೆದಿದ್ದಾರೆ.
  4. 1 ಲಕ್ಷ 13 ಸಾವಿರದ 610 ವಿದ್ಯಾರ್ಥಿಗಳು C ಗ್ರೇಡ್ ಪಡೆದಿದ್ದಾರೆ.
  5. ಶೇ 9ರಷ್ಟು ವಿದ್ಯಾರ್ಥಿಗಳು ಕೃಪಾಂಕ ಪಡೆದು ಪಾಸ್ ಆಗಿದ್ದಾರೆ.

ಒಟ್ಟು 8.71 ಲಕ್ಷ ಎಸ್‌ಎಸ್‌ಎಲ್ ಸಿ ಪರೀಕ್ಷೆ ಬರೆದಿದ್ದಾರೆ. ಈ ಪೈಕಿ ಓರ್ವ ಮಾತ್ರ ಬೇರೊಬ್ಬರಿಂದ ಪರೀಕ್ಷೆ ಬರೆಸಿದ್ದರಿಂದ ರಿಸಲ್ಟ್ ತಡೆಹಿಡಿಯಲಾಗಿದೆ.

ಹೆಚ್ಚು ಅಂಕ ಗಳಿಸಿದವರ ಅಂಕಿ-ಅಂಶಗಳು..

  1. 157 ಮಕ್ಕಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.
  2. 289 ವಿದ್ಯಾರ್ಥಿಗಳು 625ಕ್ಕೆ 623 ಅಂಕಗಳನ್ನು ಪಡೆದಿದ್ದಾರೆ.
  3. 2 ವಿದ್ಯಾರ್ಥಿಗಳು 625 ಕ್ಕೆ 622 ಅಂಕಗಳನ್ನು ಪಡೆದಿದ್ದಾರೆ.
  4. 499 ವಿದ್ಯಾರ್ಥಿಗಳು 625 ಕ್ಕೆ 621 ಅಂಕಗಳನ್ನು ಪಡೆದಿದ್ದಾರೆ.
  5. 28 ಮಕ್ಕಳು 625-620 ಅಂಕಗಳನ್ನು ಪಡೆದಿದ್ದಾರೆ.

ಭಾಷಾವಾರು ಹೆಚ್ಚು ಅಂಕ ಗಳಿಸಿದವರು..

  1. ಪ್ರಥಮ ಭಾಷೆ ಕನ್ನಡದಲ್ಲಿ 25,702 ಮಕ್ಕಳು 125ಕ್ಕೆ 125 ಅಂಕಗಳನ್ನು ಪಡೆದಿದ್ದಾರೆ.
  2. ದ್ವಿತೀಯ ಭಾಷೆಯಲ್ಲಿ 36,628 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
  3. ತೃತೀಯ ಭಾಷೆಯಲ್ಲಿ 36,776 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
  4. ಗಣಿತದಲ್ಲಿ 6,321 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
  5. ವಿಜ್ಞಾನದಲ್ಲಿ 3,649 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಸಿದ್ದಾರೆ.
  6. ಸಮಾಜ ವಿಜ್ಞಾನ ವಿಷಯದಲ್ಲಿ 9,367 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.

Source: newsfirstlive.com Source link