ರೇಣುಕಾಚಾರ್ಯ ಸಚಿವ ಸ್ಥಾನಕ್ಕೆ ಆರ್ಹರಿದ್ದಾರೆ: ಮುರುಗೇಶ್ ನಿರಾಣಿ

ಚಾಮರಾಜನಗರ: ರೇಣುಕಾಚಾರ್ಯ ಸಚಿವ ಸ್ಥಾನಕ್ಕೆ ಅರ್ಹರಿದ್ದಾರೆ ಎಂದು ರೇಣುಕಾಚಾರ್ಯ ಪರ ಬೃಹತ್ ಮತ್ತು ಮದ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಬ್ಯಾಟಿಂಗ್ ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಮತನಾಡಿದ ಅವರು, ಬರುವ ದಿನದಲ್ಲಿ ರೇಣುಕಾಚಾರ್ಯ ಸೇರಿದ್ದಂತೆ ಉಳಿದವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಖಾತೆ ಹಂಚಿಕೆಯಲ್ಲಿ ವಿಭಾಗವಾರು ಏರುಪೇರಾಗಿದೆ. ಮುಂದೆ ಇದು ಸರಿಯಾಗುತ್ತದೆ. ನನಗೆ ಕೊಟ್ಟಿರುವ ಖಾತೆ ಬಗ್ಗೆ ಅಸಮಾಧಾನ ಇಲ್ಲ. ನನ್ನ ಮನಸ್ಸಿನಲ್ಲಿರುವ ಖಾತೆಯನ್ನು ಸಿಎಂ ಕೊಟ್ಟಿದ್ದಾರೆ. ಸ್ವತಃ ನಾನು ಕೈಗಾರಿಕೋದ್ಯಮಿ. ಕೈಗಾರಿಕೋದ್ಯಮದ ಸಮಸ್ಯೆ ಬಗೆಹರಿಸಲು ಕಾರ್ಯಕ್ರಮ ರೂಪಿಸುತ್ತೇನೆ ಅಂತಾ ತಿಳಿಸಿದರು ಎಂದಿದ್ದಾರೆ. ಇದನ್ನೂ ಓದಿ: ನಾನು ಮೋದಿಗಿಂತ ಸೀನಿಯರ್: ಸಿದ್ದರಾಮಯ್ಯ

ಸಚಿವ ಯೋಗೇಶ್ವರ್ ದೆಹಲಿಗೆ ಹೋಗಿರುವ ವಿಚಾರ ಗೊತ್ತಿಲ್ಲ. ನನ್ನನ್ನು ದೆಹಲಿಗೆ ಹೋಗಿದ್ದಾರೆ ಅಂತ ಮಾಧ್ಯಮಗಳಲ್ಲಿ ಸುದ್ದಿ ಬಂದಿದೆ. ನಾನು ಇಲ್ಲೆ ಇದ್ದೇನೆ, ಯೋಗೇಶ್ವರ್ ಹೋಗಿದ್ದರೆ ಅವರ ವೈಯಕ್ತಿಕ ವಿಚಾರಕ್ಕೆ ಹೋಗಿರಬಹುದು. ನಾನು ಸಹ ದೆಹಲಿಗೆ ಆಗಾಗ ಹೋಗುತ್ತೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ದೆಹಲಿಗೆ ಹೋಗುವುದರಲ್ಲಿ ತಪ್ಪೇನಿದೆ ನಿರಾಣಿ ಪ್ರಶ್ನಿಸಿದ್ದಾರೆ.

Source: publictv.in Source link