ಲವ್​ಯೂ ರಚ್ಚು ಸಿನಿಮಾ ಅವಘಡ; ಮತ್ತೋರ್ವ ಯುವಕನ ಸ್ಥಿತಿಯೂ ಗಂಭೀರ.. ICUಗೆ ದಾಖಲು

ಲವ್​ಯೂ ರಚ್ಚು ಸಿನಿಮಾ ಅವಘಡ; ಮತ್ತೋರ್ವ ಯುವಕನ ಸ್ಥಿತಿಯೂ ಗಂಭೀರ.. ICUಗೆ ದಾಖಲು

ಬೆಂಗಳೂರು: ಲವ್​ಯೂ ರಚ್ಚು ಸಿನಿಮಾ ಶೂಟಿಂಗ್​ ವೇಳೆ ಫೈಟರ್ ವಿವೇಕ್ ಎಂಬಾತನಿಗೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ. ಈ ಬೆನ್ನಲ್ಲೇ ಇದೀಗ ರಂಜಿತ್ ಎಂಬ ಸಹಾಯಕನಿಗೂ ಘಟನೆಯಲ್ಲಿ ಗಂಭೀರ ಗಾಯವಾಗಿರುವುದು ಬೆಳಕಿಗೆ ಬಂದಿದೆ.

ಕ್ರೇನ್ ಎತ್ತುವ ಸಮಯದಲ್ಲಿ ವಿದ್ಯುತ್ ತಂತಿಗೆ ಕ್ರೇನ್ ತಗುಲಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ವಿವೇಕ್ ಸಾವನ್ನಪ್ಪಿದ್ದರೆ ಇತ್ತ ರಂಜಿತ್ ಎಂಬ ಸಹಾಯಕನಿಗೂ ಸಹ ಗಂಭೀರ ಗಾಯವಾಗಿದೆ. ಸದ್ಯ ರಂಜಿತ್​ಗೆ ಆರ್​.ಆರ್. ಆಸ್ಪತ್ರೆಯ ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಎಂದ ಮಾಹಿತಿ ಲಭ್ಯವಾಗಿದೆ.

blank

Source: newsfirstlive.com Source link