ಟೋಕಿಯೋದಿಂದ ಭಾರತಕ್ಕೆ ಬಂದ ಒಲಿಂಪಿಕ್ಸ್ ಹೀರೋಗಳು; ಏರ್​ಪೋರ್ಟ್​ನಲ್ಲಿ ಅದ್ಧೂರಿ ಸ್ವಾಗತ

ಟೋಕಿಯೋದಿಂದ ಭಾರತಕ್ಕೆ ಬಂದ ಒಲಿಂಪಿಕ್ಸ್ ಹೀರೋಗಳು; ಏರ್​ಪೋರ್ಟ್​ನಲ್ಲಿ ಅದ್ಧೂರಿ ಸ್ವಾಗತ

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಹೆಮ್ಮೆಯ ಪುತ್ರ ನೀರಜ್​​ ಚೋಪ್ರಾ ತಾಯ್ನಾಡಿಗೆ ಮರಳಿದ್ದಾರೆ. ರವಿ ದಹಿಯಾ, ಭಜರಂಗ್ ಪುನಿಯಾ ಸೇರಿದಂತೆ ಎಲ್ಲಾ ಭಾರತೀಯ ಆಟಗಾರರೊಂದಿಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನೀರಜ್ ಚೋಪ್ರಾಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಈ ವೇಳೆ ನೀರಜ್​​ ಜೊತೆಗೆ ದೇಶದ ಎಲ್ಲಾ ಆಟಗಾರರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ನೀರಜ್​​ ಚೋಪ್ರಾ ಸೇರಿದಂತೆ ಭಾರತದ ಆಟಗಾರರನ್ನು ಸ್ವಾಗತಿಸಲು ಕ್ರೀಡಾ ಅಧಿಕಾರಿಗಳು, ರಾಜಕೀಯ ನಾಯಕರು, ಕೇಂದ್ರ ಸಚಿವರು, ವಿವಿಧ ಒಕ್ಕೂಟಗಳು, ಮಾಧ್ಯಮಗಳು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ನೂರಾರು ಕಲಾವಿದರು ತ್ರಿವರ್ಣವನ್ನು ಹೊತ್ತು ಆಟಗಾರರನ್ನು ಸ್ವಾಗತಿಸಿದರು. ನೀರಜ್​​ ಚೋಪ್ರಾ ಮೇಲಂತೂ ಜನರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು.

blank

ನೀರಜ್​​ ಚೋಪ್ರಾ ಸೇರಿದಂತೆ ಎಲ್ಲಾ ಆಟಗಾರರಿಗೆ ಹೂಮಾಲೆ ಹಾಕಿ ಗೌರವಿಸಲಾಯಿತು. ಈ ವೇಳೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೂಡ ಹಾಜರಿದ್ದರು.

Source: newsfirstlive.com Source link