‘ಲವ್​ಯೂ ರಚ್ಚು’ ಚಿತ್ರತಂಡದ ವಿರುದ್ಧ ಪೊಲೀಸರಿಂದ ಸ್ವಯಂಪ್ರೇರಿತ ಕೇಸ್; ಜಮೀನು ಮಾಲೀಕ ನಾಪತ್ತೆ

‘ಲವ್​ಯೂ ರಚ್ಚು’ ಚಿತ್ರತಂಡದ ವಿರುದ್ಧ ಪೊಲೀಸರಿಂದ ಸ್ವಯಂಪ್ರೇರಿತ ಕೇಸ್; ಜಮೀನು ಮಾಲೀಕ ನಾಪತ್ತೆ

ಬೆಂಗಳೂರು: ಲವ್​ ಯೂ ರಚ್ಚು ಸಿನಿಮಾ ಶೂಟಿಂಗ್​ ವೇಳೆ ಫೈಟರ್ ಅಸಿಸ್ಟೆಂಟ್ ವಿವೇಕ್ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಶೂಟಿಂಗ್ ನಡೆಯುತ್ತಿದ್ದ ತೆಂಗಿನ ತೋಟದ ಜಮೀನು ಮಾಲೀಕ ಪುಟ್ಟರಾಜು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಜಮೀನು ಮಾಲೀಕ ಅನುಮತಿ ಪಡೆದಿದ್ದಾರೆ ಎಂದು ಶೂಟಿಂಗ್​ಗೆ ಅವಕಾಶ ನೀಡಿದ್ದರಂತೆ. ಇದೇ ಜಮೀನಿನಲ್ಲಿ ಕಳೆದ ಐದು ದಿನಗಳಿಂದ ಚಿತ್ರೀಕರಣ ನಡೆಯುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: ವಿದ್ಯುತ್ ಶಾಕ್ ತಗುಲಿ, ಫೈಟರ್ ಸಾವು: ಇದು 100% ಬೇಜವಾಬ್ದಾರಿಯೇ -ಅಜಯ್ ರಾವ್

ಫೈಟ್ ಸೀನ್ ಶೂಟ್ ಮಾಡುವ ವೇಳೆ ಮೇಲೆ ಇದ್ದ ವಿದ್ಯುತ್ ತಂತಿ ನೋಡದೇ ಕ್ರೇನ್ ಮೇಲಕ್ಕೆತ್ತಿದ್ದ ವೇಳೆ ವಿವೇಕ್​ಗೆ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ, ಕ್ರೇನ್ ಚಾಲಕ ಹಾಗೂ ಫೈಟ್ ಮಾಸ್ಟರ್ ಅನ್ನು ಪೊಲೀಸರು ವಿಚಾರಣೆ ಕರೆತರುತ್ತಿದೆ ಎಂದು ನ್ಯೂಸ್​ ಫಸ್ಟ್​ಗೆ ಬಿಡದಿ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇಂದು ಕೊನೆ‌ಯ ದಿನದ ಚಿತ್ರೀಕರಣ ನಡೆಯುತ್ತಿತ್ತು.. ಚಿತ್ರೀಕರಣದ ಆರಂಭದ ಮೊದಲೇ ಈ ಅವಘಡ ಸಂಭವಿಸಿದೆ. ಶೂಟಿಂಗ್​ ನಡೆಸಲು ಚಿತ್ರತಂಡ ಪೊಲೀಸರಿಂದ ಯಾವುದೇ ಅನುಮತಿ ಪಡೆದಿರಲಿಲ್ಲವಂತೆ. ಸದ್ಯ ಕ್ರೇನ್ ಚಾಲಕ ಹಾಗೂ ಫೈಟರ್ & ನಿರ್ದೇಶಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಲವ್​ ಯು ರಚ್ಚು’ ಸಿನಿಮಾ ದುರಂತ ಪ್ರಕರಣ; ನಿರ್ದೇಶಕ ಸೇರಿ ಮೂವರು ಪೊಲೀಸರ ವಶಕ್ಕೆ

ಯಾವುದೇ ಮುಂಜಾಗ್ರತಾ ಕ್ರಮ ಇಲ್ಲದೇ ಚಿತ್ರೀಕರಣ ನಡೆಸಲಾಗುತ್ತಿತ್ತು.. ತೆಂಗಿನ ತೋಟದ ಜಮೀನು ಸಂಪೂರ್ಣ ಹಾಳಾಗಿದೆ.. ಫೈಟರ್​ಗೆ ಸಹಾಯವಾಗಿದ್ದ ವ್ಯಕ್ತಿಗೂ ಗಂಭೀರ ಗಾಯವಾಗಿದೆ ಎನ್ನಲಾಗಿದೆ.

Source: newsfirstlive.com Source link