ಸಾಗರ ಭದ್ರತೆ ಬಲವರ್ಧನೆ ಅಂತರಾಷ್ಟ್ರೀಯ ಸಹಕಾರ ಅಭಿವೃದ್ಧಿಗೆ ಉದಾಹರಣೆ; ಪ್ರಧಾನಿ ಮೋದಿ

ಸಾಗರ ಭದ್ರತೆ ಬಲವರ್ಧನೆ ಅಂತರಾಷ್ಟ್ರೀಯ ಸಹಕಾರ ಅಭಿವೃದ್ಧಿಗೆ ಉದಾಹರಣೆ; ಪ್ರಧಾನಿ ಮೋದಿ

ಭಾರತದ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸಾಗರ ಭದ್ರತೆ ಕುರಿತು ಉನ್ನತ ಮಟ್ಟದ ವರ್ಚುವಲ್ ಸಭೆ ನಡೆಯಿತು. ಈ ಸಭೆಯಲ್ಲಿ ಮಾತಾಡಿದ ಪ್ರಧಾನಿ ನರೇಂದ್ರ ಮೋದಿ, ಸಾಗರ ಭದ್ರತೆ ಬಲವರ್ಧನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ದೇಶಗಳ ನಡುವಣ ಸಂಬಂಧ ಮತ್ತು ಸಹಕಾರ ಅಭಿವೃದ್ಧಿಗೆ ಒಂದು ಉದಾಹರಣೆ ಎಂದರು.

ಸಾಗರ ವಲಯದಲ್ಲಿ ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಭಯೋತ್ಪಾದಕರು ಸಮುದ್ರ ಮಾರ್ಗಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಂತರಾಷ್ಟ್ರೀಯ ವ್ಯಾಪರಕ್ಕೆ ಸಮುದ್ರ ಮಾರ್ಗಗಳು ಬಹಳ ಮುಖ್ಯ. ಇವೇ ನಮ್ಮ ಮುಂದಿನ ಭವಿಷ್ಯ. ನಾವು ಕಡಲ ವ್ಯಾಪರಕ್ಕೆ ಹಾಕಿರುವ ಬ್ಯಾರೀಕೆಡ್ ತೆಗೆಯಬೇಕು ಎಂದು ತಿಳಿಸಿದರು.

ಕಡಲ ವಲಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಒಗ್ಗಟ್ಟಿನಿಂದ ಎದುರಿಸಬೇಕು. ಅದಕ್ಕಾಗಿ ಎಲ್ಲಾ ದೇಶಗಳ ನಡುವೆ ಪರಸ್ಪರ ಹೊಂದಾಣಿಕೆ ಇರಬೇಕು. ರಾಜ್ಯ ಪ್ರಾಯೋಜಿತ ಭೋತ್ಪಾದನೆಯನ್ನು ಹತ್ತಿಕ್ಕಬೇಕು, ಅಂತರಾಷ್ಟ್ರೀಯ ಶಾಂತಿ ಕಾಪಾಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿಗೆ UNSC ಸಭೆಗೆ ಮೋದಿ ಅಧ್ಯಕ್ಷತೆ; ಪುಟಿನ್ ಸೇರಿ ಹಲವು ರಾಷ್ಟ್ರ ನಾಯಕರು ಭಾಗಿ

ಸಾಗರ ಭದ್ರತೆಗೆ ಒಂದು ಕಾರ್ಯಸೂಚಿ ಸಿದ್ಧತೆ ಮಾಡಬೇಕು. ಇದಕ್ಕೂ ನಮ್ಮ ನಡುವೆ ಇರುವ ಸಮನ್ವಯ ಕೊರತೆ ನೀಗಿಸಬೇಕು. ಅದಕ್ಕಾಗಿ ಅಗತ್ಯ ತಯಾರಿ ಮಾಡಿಕೊಳ್ಳಬೇಕು ಎಂದು ಎಲ್ಲಾ ದೇಶಗಳಿಗೂ ಸಲಹೆ ನೀಡಿದರು.

Source: newsfirstlive.com Source link