ಪೊಲೀಸರಿಗೆ ಕಂಪ್ಲೇಂಟ್ ಕೊಡಲು ಬಂದ ಫೈಟರ್ ಕುಟುಂಬ ವಾಪಸ್..​ ಕರೆದೊಯ್ದವರಾರು..?

ಪೊಲೀಸರಿಗೆ ಕಂಪ್ಲೇಂಟ್ ಕೊಡಲು ಬಂದ ಫೈಟರ್ ಕುಟುಂಬ ವಾಪಸ್..​ ಕರೆದೊಯ್ದವರಾರು..?

ಬೆಂಗಳೂರು: ಲವ್​ಯೂ ರಚ್ಚು ಸಿನಿಮಾ ಶೂಟಿಂಗ್​ ವೇಳೆ ಫೈಟರ್ ವಿವೇಕ್ ಎಂಬಾತನಿಗೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆ ದೂರು ನೀಡಲು ಬಂದ ವಿವೇಕ್ ತಾಯಿಯನ್ನು ಲವ್​ಯೂ ರಚ್ಚು ಸಿನಿಮಾ ತಂಡದವರು ವಾಪಸ್ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಲವ್​ಯೂ ರಚ್ಚು ಶೂಟಿಂಗ್ ದುರಂತ; ಸಾಕ್ಷ್ಯನಾಶ ಆರೋಪದಡಿ ಎಫ್​ಐಆರ್​ಗೆ ಸಿದ್ಧತೆ

ವಿವೇಕ್ ಕುಟುಬಂದವರು ಬಿಡದಿಗೆ ದೂರು ನೀಡಲು ಮಾರುತಿ ಓಮ್ನಿ ಕಾರಿನಲ್ಲಿ ಬಂದಿದ್ದರು.. ವಿವೇಕ್ ತಾಯಿಗೆ ಲೋ ಬಿಪಿ ಅಂತ ನೆಪ ಹೇಳಿ ಫಾರ್ಚೂನರ್ ಕಾರಿನಲ್ಲಿ ಸಾಹಸ ನಿರ್ದೇಶಕ ವಿನೋದ್ ಅಸಿಸ್ಟೆಂಟ್ ಅರ್ಜುನ್ ಎಂಬಾತ ಕರೆದೊಯ್ದಿದ್ದಾನೆ ಎನ್ನಲಾಗಿದೆ. ಬಿಡದಿಯಿದ ಬೆಂಗಳೂರು ಕಡೆಗೆ ವಿವೇಕ್ ಕುಟುಂಬದವರನ್ನು ಕರೆತಂದಿದ್ದಾರೆ ಎಂದು ಹೇಳಲಾಗಿದೆ. ಇತ್ತ ಪ್ರಕರಣದ ನಂತರ ನಿರ್ಮಾಪಕ ಗುರುದೇಶಪಾಂಡೆ ತಲೆ ಮರೆಸಿಕೊಂಡಿದ್ದು ಅಜ್ಞಾತ ಸ್ಥಳದಲ್ಲೇ ಕೂತು ದೂರು ನೀಡದೇ ಮಾತುಕತೆ ಮೂಲಕ ಇತ್ಯರ್ಥ ಮಾಡಿಕೊಳ್ಳೋಕೆ ಪ್ರಯತ್ನ ಪಡ್ತಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ವಿದ್ಯುತ್ ಶಾಕ್ ತಗುಲಿ, ಫೈಟರ್ ಸಾವು: ಇದು 100% ಬೇಜವಾಬ್ದಾರಿಯೇ -ಅಜಯ್ ರಾವ್

Source: newsfirstlive.com Source link