KGF-2 ಸಿನಿಮಾದಲ್ಲಿ ಶೃತಿ ಮತ್ತು ಸುಧಾರಾಣಿ.. ಯಾವ ಪಾತ್ರ ಮಾಡಿದ್ದಾರೆ..?

KGF-2 ಸಿನಿಮಾದಲ್ಲಿ ಶೃತಿ ಮತ್ತು ಸುಧಾರಾಣಿ.. ಯಾವ ಪಾತ್ರ ಮಾಡಿದ್ದಾರೆ..?

ಏನಾದ್ರೊಂದು ಧಮಾಕೇ ಧಾರ್ ಸಮಾಚಾರಗಳನ್ನ ನೀಡುತ್ತಾ ಕೆಜಿಎಫ್​ ಸಿನಿಮಾ ತಂಡ ಪ್ರೇಕ್ಷಕರ ಮನದಲ್ಲಿ ಕನವರಿಕೆಯನ್ನ  ಮೂಡಿಸುತ್ತಲೇ ಇದೆ. ಈಗ ಕೆಜಿಎಫ್​​ ಅಡ್ಡದಿಂದ ಒಂದು ಬಿಗ್​ ಬ್ಯಾಂಗ್ ಸಮಾಚಾರವೊಂದು ಸಿಕ್ಕಿದೆ. ಕೆಜಿಎಫ್​​​​ ಚಾಪ್ಟರ್​​​​-2 ನಲ್ಲಿ 90ರ ದಶಕದ ಸ್ಟಾರ್ ನಟಿಯರಾದ ಸುಧಾರಾಣಿ ಹಾಗೂ ಶೃತಿ ಇರುತ್ತಾರೆ ಅನ್ನೋ ಸುದ್ದಿ ಕೇಳಿ​ ಬರ್ತಿದೆ.

ಕೆಜಿಎಫ್ ಚಾಪ್ಟರ್ 1ಕ್ಕಿಂದ ಕೆಜಿಎಫ್ ಚಾಪ್ಟರ್ 2 ದೊಡ್ಡದು ಎಂದು ಈಗಾಗಲೇ ಸಿನಿಮಾ ತಂಡದ ಸರ್ವ ಸದಸ್ಯರು ಹೆಮ್ಮೆಯಿಂದ ಭರವಸೆಯ ಮಾತುಗಳನ್ನ ಆಡಾಗಿದೆ.. ಇನೇನಿದ್ರೂ ಜನ ಮನ ಎರಡನೇ ಕೆಜಿಎಫ್​​ ಅನ್ನ ಕಂಡು ಹೆಂಗಿದೆ ಹೇಗಿದೆ ಅನ್ನೋದನ್ನ ಹೇಳಬೇಕು. ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಸಂಜಯ್ ದತ್, ರಮೇಶ್ ರಾವ್, ಈಶ್ವರಿ ರಾವ್, ವಸಿಷ್ಠ ಸಿಂಹ, ಅಚ್ಯುತ್ ರಾವ್, ಪ್ರಕಾಶ್ ರೈ, ಮಾಳವಿಕಾ ಹೀಗೆ ಹೇಳ್ತಾ ಹೋದ್ರೆ ದಕ್ಷಿಣ ಮತ್ತು ಉತ್ತರ ಭಾರತದ ಪ್ರಮುಖ ಕಲಾವಿದರ ದಂಡೇ ಕೆಜಿಎಫ್ ಅಡ್ಡದಲ್ಲಿ ನಿಂತಿದೆ.. ಈ ಬೃಹತ್ ಕಲಾವಿದರ ದಂಡಿನಲ್ಲಿ ಈಗ ದಕ್ಷಿಣ ಭಾರತ ಖ್ಯಾತ ಕಲಾವಿದೆಯರ ಎರಡು ಹೆಸರು ಕೇಳಿ ಬರುತ್ತಿದೆ.. ಆ ಹೆಸರೇ ಕರ್ಪೂರದ ಗೊಂಬೆ ಖ್ಯಾತಿಯ ಶೃತಿ ಹಾಗೂ ಮನಮೆಚ್ಚಿದ ಹುಡ್ಗಿ ಖ್ಯಾತಿಯ ಸುಧಾರಾಣಿ..

ರಮೀಕಾ ಸೇನ್​​.. ಕೆಜಿಎಫ್ ಸಿನಿಮಾದ ಪವರ್ ಫುಲ್ ಪಾತ್ರಗಳಲ್ಲೊಂದು.. ಈ ರಮೀಕಾ ಸೇನ್ ಪಾತ್ರವನ್ನ ರವೀನಾ ಟಂಡನ್ ನಿರ್ವಹಿಸಿದ್ದಾರೆ. ಈ ಪವರ್ ಫುಲ್ ಪ್ರಧಾನಿ ಪಾತ್ರಕ್ಕೆ ಕನ್ನಡದ ಧ್ವನಿದಾನವನ್ನ ಎವರ್​ಗ್ರೀನ್ ಬ್ಯೂಟಿ ಸುಧಾರಾಣಿ ಅವರು ನೀಡಿದ್ದಾರೆ.  ಇನ್ನು ತೆಲುಗಿನ ಫೇಮಸ್ ನಟಿ ಈಶ್ವರಿ ರಾವ್​​​​​​ ಕೂಡ ಒಂದು ಖಡಕ್ ಪಾತ್ರವನ್ನ ಎರಡನೇ ಕೆಜಿಎಫ್​​​ನಲ್ಲಿ ಮಾಡಿದ್ದಾರೆ. ಈಶ್ವರಿ ರಾವ್ ನಿರ್ವಹಿಸಿರೋ ಪಾತ್ರಕ್ಕೆ ಕನ್ನಡ ವಾಯ್ಸ್​​​​​​​ ಡಬ್ಬಿಂಗ್ ಅನ್ನ ಕರ್ಪೂರದ ಗೊಂಬೆ ಖ್ಯಾತಿಯ ಶೃತಿ ಮಾಡಿದ್ದಾರೆ.

Source: newsfirstlive.com Source link