ಕ್ರೇನ್​ ಮಣ್ಣಲ್ಲಿ ಇದ್ದಿದ್ದರಿಂದ ವಿವೇಕ್​ಗೆ ಹೀಗಾಯ್ತು.. ವಿವೇಕ್ ಚಿಕ್ಕಪ್ಪ ಹೇಳಿದ್ದೇನು..?

ಕ್ರೇನ್​ ಮಣ್ಣಲ್ಲಿ ಇದ್ದಿದ್ದರಿಂದ ವಿವೇಕ್​ಗೆ ಹೀಗಾಯ್ತು.. ವಿವೇಕ್ ಚಿಕ್ಕಪ್ಪ ಹೇಳಿದ್ದೇನು..?

ಬೆಂಗಳೂರು: ಇವತ್ತು ಲವ್​ ಯೂ ರಚ್ಚು ಚಿತ್ರದ ಶೂಟಿಂಗ್​ ಟೈಮ್​ನಲ್ಲಿ ನಡೆದ ಅವಘಡದಿಂದ ಫೈಟರ್​ ವಿವೇಕ್​ ಸಾವನ್ನಪ್ಪಿರೋ ದುರ್ಘಟನೆ ನಡೆದಿದೆ. ಈ ವೇಳೆ, ಪ್ರತ್ಯಕ್ಷದರ್ಶಿ ಮೃತ ವಿವೇಕ್ ಚಿಕ್ಕಪ್ಪ ಸುಬ್ರಮಣಿ ಅಲ್ಲಿ ನಡೆದಿದ್ದನ್ನ ಹೇಳಿದ್ದಾರೆ.

ಕ್ರೇನ್ ಮಣ್ಣಲ್ಲಿ ಸಿಲುಕಿದ್ದರಿಂದ ವಿವೇಕ್ ಹಾಗೂ ರಂಜಿತ್​ಗೆ ಹೈಟೆನ್ಷನ್ ವೈರ್ ತಾಗಿತ್ತು. ರಂಜಿತ್ ಎಮೆರ್ಜೆನ್ಸಿಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೂಟಿಂಗ್ ಸ್ಪಾಟ್ ಅಲ್ಲಿ ಹೀರೋ ಅಜಯ್ ರಾವ್, ಸ್ಟಂಟ್ ಮಾಸ್ಟರ್, ಅಸಿಸ್ಟೆಂಟ್ ಡೈರೆಕ್ಟರ್ ಇದ್ರು. 4 ದಿನಗಳಿಂದ ಶೂಟಿಂಗ್ ಮಾಡ್ತಿದ್ವಿ. ಮಳೆ ಬಂದಿದ್ದರಿಂದ ಕ್ರೇನ್ ಮಣ್ಣಲ್ಲಿ ಸಿಕ್ಕಕ್ಕೊಂಡಿತ್ತು, ಸುಮಾರು 10 ಜನ ಸ್ಟಂಟ್ ಫೈಟರ್ಸ್ ಕೆಲಸ ಮಾಡ್ತಿದ್ವಿ..
ವಿವೇಕ್ ನನ್ನ ಅಣ್ಣನ ಮಗ, ನನ್ನ ಜೊತೆ ಶೂಟಿಂಗ್ ಗೆ ಬರ್ತಿದ್ದ. ಈಗ ಹೀಗೆ​ ಆಗೋಗಿದೆ ಅಂತ ಹೇಳಿದ್ದಾರೆ.

Source: newsfirstlive.com Source link