ಎಲ್ಲರ ಕಣ್ಣು ನನ್ನ ಮದುವೆ ಮೇಲೆ: ಮಂಜು ಪಾವಗಡ

ಬಿಗ್‍ಬಾಸ್ ವಿನ್ನರ್ ಮಂಜು ಪಾವಗಡ ಇಂದು ಖಾಸಗಿ ವಾಹಿನಿಯ ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದಿದ್ದರು. ಈ ವೇಳೆ ಅಭಿಮಾನಿಗಳು ಕೇಳಿರುವ ಪ್ರಶ್ನೆಗಳಿಗೆ ಸಖತ್ ತಮಾಷೆಯಾಗಿ ಉತ್ತರ ನೀಡಿದ್ದಾರೆ.

 

ಬಿಗ್‍ಬಾಸ್ ಜರ್ನಿ ಹೇಗಿತ್ತು? ಈ ಸಮಯದಲ್ಲಿ ಬಿಗ್‍ಬಾಸ್ ಮನೆಯಲ್ಲಿ ಏನ್ ಮಾಡುತಿದ್ದೀರಿ? ಬಿಗ್‍ಬಾಸ್ ಮನೆಯನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೀರಿ? ಎಂದೆಲ್ಲ ಲೈವ್‍ನಲ್ಲಿ ಅಭಿಮಾನಿಗಳು ಕೇಳಿದ್ದಾರೆ. ಈ ವೇಳೆ ಮಂಜು ನಾನು ಬಿಗ್‍ಬಾಸ್ ಮನೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅಷ್ಟು ದೊಡ್ಡ ಮನೆ ನೋಡಿ ನಮ್ಮ ಮನೆ ನೋಡಿದ್ರೆ ಚಿಕ್ಕದು ಎನ್ನಿಸುತ್ತದೆ. ಅಲ್ಲಿ ಮೂರ್‍ನಾಲ್ಕು ಬಾತ್ ರೂಮ್ ಇರುತ್ತಿತ್ತು, ನಮ್ಮ ಮನೆಯಲ್ಲಿ ಒಂದೇ ಎಂದು ಹೇಳುತ್ತಾ ತಮಾಷೆ ಮಾಡಿ ಲೈವ್ ನೋಡುತ್ತಿದ್ದವರನ್ನು ಸಖತ್ ಆಗಿ ನಗಿಸಿದ್ದಾರೆ.

 

ಫೋನ್ ನಂಬರ್ ಕೊಡಿ ಮಂಜಣ್ಣ, ಹಣ ಎನ್ ಮಾಡುತ್ತೀರ? ಎಂದು ಕೇಳಿದವರಿಗೆ ಅಷ್ಟು ಹಣ ಕೊಟ್ಟಿದ್ದಾರೆ ಎಂದರೆ ನಾನು ಒಂದು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಮನೆಯ ಸ್ಪರ್ಧಿಗಳ ಕುರಿತಾಗಿ ಕೇಳಿದಾಗ ದಿವ್ಯಾ ಸುರೇಶ್ ಸೇರಿದಂತೆ ಎಲ್ಲರೂ ನನಗೆ ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದಾರೆ. ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ಮಂಜು ಎಲ್ಲರಿಗೂ ನನ್ನ ಮದುವೆಯ ಮೇಲೆ ಕಣ್ಣು ಬಿದ್ದಿದ್ದೆ, ಒಂದು ಒಳ್ಳೆಯ ಹುಡುಗಿ ಸಿಗಲಿ ಆದಷ್ಟು ಬೇಗ ಆಗುತ್ತೇನೆ ಎಂದು ಹೇಳಿದ್ದಾರೆ.

ಅಭಿಮಾನಿಗಳು ತಮ್ಮ ಊರಿಗೆ ಬರುವಂತೆ ಮಂಜುಗೆ ಆಹ್ವಾನವನ್ನು ಇಟ್ಟಿದ್ದಾರೆ. ಮಂಜು ನನಗೆ ನಿಮ್ಮ ಪ್ರೀತಿ ಕಂಡು ತುಂಬಾ ಖುಷಿಯಾಗುತ್ತಿದೆ. ಖಂಡಿತವಾಗಿಯೂ ಬರುತ್ತೇನೆ ಎಂದು ಹೇಳಿದ್ದಾರೆ. ಚಂಪು ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತೀರುವುದನ್ನು ನೋಡಿ ನನಗೆ ಶುಭಾ ನೆನಪು ಆಗುತ್ತಿದ್ದಾಳೆ. ಅವರು ಒಂದು ಮುಗ್ಧ ಮಗು ಹಾಗೆ ಎಂದು ಹೇಳಿದ್ದಾರೆ. ನಿಧಿ ಬಳಿ ನಾನು ತುಂಬಾ ತಮಾಷೆ ಮಾಡಿಕೊಂಡು ಮನೆಯಲ್ಲಿ ಚೆನ್ನಾಗಿದ್ದೆ ಎಂದು ಹೇಳಿದ್ದಾರೆ. ಬಿಗ್‍ಬಾಸ್ ಜರ್ನಿಯ ಮತ್ತು ಸ್ಪರ್ಧಿಗಳ ಜೊತೆಗೆ ಕಳೆದ ಸುಂದರ ಕ್ಷಣಗಳನ್ನು ನೆನಪುಗಳನ್ನು ಮೆಲುಕು ಹಾಕಿದ್ದಾರೆ.

Source: publictv.in Source link