ವಾಸಸ್ಥಾನಕ್ಕಾಗಿ 2 ಹುಲಿಗಳ ನಡುವೆ ಭೀಕರ ಕಾದಾಟ.. ಬೆಚ್ಚಿಬಿದ್ದ ಪ್ರವಾಸಿಗರು

ವಾಸಸ್ಥಾನಕ್ಕಾಗಿ 2 ಹುಲಿಗಳ ನಡುವೆ ಭೀಕರ ಕಾದಾಟ.. ಬೆಚ್ಚಿಬಿದ್ದ ಪ್ರವಾಸಿಗರು

ಮೈಸೂರು: ಎರಡು ಹುಲಿಗಳ ಕಾದಾಟದ ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿರೋ ಘಟನೆ, ನಾಗರಹೊಳೆ ಅರಣ್ಯದಲ್ಲಿ ನಡೆದಿದೆ.

blank

ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಸಫಾರಿ ಮಾಡುವ ವೇಳೆ ಹುಲಿಗಳು ತಮ್ಮ ಟೆರಿಟರಿಗಾಗಿ ಕಾದಾಟ ನಡೆಸುತ್ತವೆ. ಈ ವೇಳೆ ಒಂದು ಹುಲಿಯ ಟೆರಿಟರಿಗೆ ಮತ್ತೊಂದು ಹುಲಿ ಬಂದಾಗ ಕಾದಾಟ ಮಾಡುವ ಅಪರೂಪದ ದೃಶ್ಯ ಸೆರೆ ಹಿಡಿದಿದ್ದಾರೆ ಪ್ರವಾಸಿಗರು. ಸಾಮಾನ್ಯವಾಗಿ ಕಾಡಿನಲ್ಲಿ ಎರಡು ಹುಲಿಗಳ ನಡುವೆ ಈ ರೀತಿ ಕಾದಾಟ ನಡೆಯುತ್ತೆ. ಆದರೆ ಪ್ರವಾಸಿಗರಿಗೆ ಸಿಗುವುದು ಅಪರೂಪದಲ್ಲೇ ಅಪರೂಪ.

Source: newsfirstlive.com Source link