ಪ್ರಶಾಂತ್ ನೀಲ್​​ಗೆ ಮೋಡಿ ಮಾಡಿದ ಶೃತಿ ಹಾಸನ್! ಸ್ಟ್ರಿಕ್ಟ್ ಡೈರೆಕ್ಟರ್ ಮೊಗದಲ್ಲಿ ಮುಗುಳು ನಗೆ

ಪ್ರಶಾಂತ್ ನೀಲ್​​ಗೆ ಮೋಡಿ ಮಾಡಿದ ಶೃತಿ ಹಾಸನ್! ಸ್ಟ್ರಿಕ್ಟ್ ಡೈರೆಕ್ಟರ್ ಮೊಗದಲ್ಲಿ ಮುಗುಳು ನಗೆ

ಮಹಾ ಮೌನಿ, ಪಕ್ಕಾ ಸಿನಿಮಾ ಜ್ಞಾನಿ ಪ್ರಶಾಂತ್ ನೀಲ್​.. ನರಾಚಿ ಸೃಷ್ಟಿಕರ್ತ ಶೂಟಿಂಗ್ ಸೆಟ್​​ನಲ್ಲಿ ಸೆಟೆಲ್ ಆದ್ರೆ ಮುಗೀತು; ಅವರ ಅಕ್ಕ ಪಕ್ಕ ನಿಲ್ಲೋಕೂ ಸಹ ಕಲಾವಿದರು ಹೆದರುತ್ತಾರಂತೆ.. ನಗೋದಿಲ್ಲ.. ಕೆಲಸದ ವಿಚಾರದಲ್ಲಿ ಕಾಂಪ್ರಮೈಸ್ ಅಂತೂ ಆಗೋದೇ ಇಲ್ಲ.. ಇಂತಹ ಪ್ರಶಾಂತ್ ನೀಲ್ ನಾಯಕಿ ನಟಿ ಶೃತಿ ಹಾಸನ್ ಮುಂದೆ ಸೋತು ಹೋದ್ರಂತೆ.!

blank

 

ಬಾಹುಬಲಿ ಖ್ಯಾತಿಯ ಪ್ಯಾನ್ ಇಂಡಿಯನ್ ಸ್ಟಾರ್ ಪ್ರಭಾಸ್ ಕೆಜಿಎಫ್ ಸಿನಿಮಾವನ್ನ ನೋಡಿ ಫಿದಾ ಆಗಿ ಪ್ರಶಾಂತ್ ನೀಲ್​​​​​ಗೆ ಒಂದು ಸಿನಿಮಾ ಮಾಡಿಕೊಡಿ ಎಂದಿದ್ದು ನಿಮಗೆ ಗೊತ್ತಿದೆ. ತದ ನಂತರ ಸಲಾರ್ ಸಿನಿಮಾ ಅದ್ಧೂರಿಯಾಗಿ ಸ್ಟಾರ್ಟ್ ಆಗಿದ್ದು ನಿಮಗೆ ಗೊತ್ತಿದೆ. ಈಗಾಗಲೇ 60 ಪರ್ಸೆಂಟ್ ಶೂಟಿಂಗ್ ಮಾಡಿ ಮುಗಿಸಿದೆ ಪ್ರಶಾಂತ್ ನೀಲ್ ಟೀಮ್​​.. ಇನ್ನುಳಿದ ಭಾಗದ ಶೂಟಿಂಗ್​​​ ಅನ್ನ ಆದಷ್ಟು ಬೇಗ ಮುಗಿಸಿ 2022ರ ಏಪ್ರಿಲ್ ವೇಳೆಗೆ ಪ್ರೇಕ್ಷಕರ ಮುಂದೆ ಸಿನಿಮಾವನ್ನ ತಂದು ನಿಲ್ಲಿಸಬೇಕು ಅನ್ನೋದು ಹೊಂಬಾಳೆ ಗುರಿ.. ಇಂತಹ ಟೈಮ್​​ನಲ್ಲಿ ಬಹುಭಾಷಾ ನಟಿ ಹಾಟ್ ಪ್ಲಸ್ ಕ್ಯೂಟಿ ಶೃತಿ ಹಾಸನ್ ಕಡೆಯಿಂದ ಸಲಾರ್ ಸಿನಿಮಾದ ಬಗ್ಗೆ ಒಂದು ಸ್ಪೆಷಲ್ ಸಮಾಚಾರ ಹೊರಬಂದಿದೆ.

 

 

View this post on Instagram

 

A post shared by Shruti Haasan (@shrutzhaasan)

ಸಲಾರ್ ಸಿನಿಮಾದ ನಾಯಕಿಯಾಗಿ ಕ್ಯಾಮೆರಾ ಎದುರಿಸುತ್ತಿರೋ ಮದ್ರಾಸಿ ಮೋನಾಲಿಸಾ, ಪ್ರಶಾಂತ್ ನೀಲ್ ಅವರ ಕಾರ್ಯವೈಖರಿಯನ್ನ ಮೆಚ್ಚಿ ಕೊಂಡಾಡಿದ್ದಾರೆ. ಜೊತೆಗೆ ಶೂಟಿಂಗ್ ಸ್ಪಾಟ್​​ನಲ್ಲಿ ಗಂಭೀರವಾಗಿ ಕೆಲಸ ಮಾಡೋ ನೀಲ್ ಅವ್ರನ್ನ ಕಾಮಿಡಿ ಮಾಡಿ ನಗಿಸಿದ್ದಾರಂತೆ ಶೃತಿ ಹಾಸನ್​. ನೀಲ್ ಅವರನ್ನ ನಗಿಸಿದ್ದು ನನ್ನ ಹೆಮ್ಮೆ ಎಂದು ಸೋಶಿಯಲ್ ಸಮುದ್ರದ ದಡದಲ್ಲಿ ಅಚ್ಚರಿಯ ಸಂದೇಶವನ್ನ ತೇಲಿ ಬಿಟ್ಟಿದ್ದಾರೆ.

 

Source: newsfirstlive.com Source link