ರಾಜೀವ್ ಗಾಂಧಿ ಖೇಲ್​ ರತ್ನ ಮರುನಾಮಕರಣ; ಇದು ‘ರಾಜಕೀಯದ ಆಟ’ ಎಂದು ಕುಟುಕಿದ ಶಿವಸೇನೆ

ರಾಜೀವ್ ಗಾಂಧಿ ಖೇಲ್​ ರತ್ನ ಮರುನಾಮಕರಣ; ಇದು ‘ರಾಜಕೀಯದ ಆಟ’ ಎಂದು ಕುಟುಕಿದ ಶಿವಸೇನೆ

ಮುಂಬೈ: ಮೇಜರ್​​ಧ್ಯಾನ್​ಚಂದ್​​ ಖೇಲ್​ ರತ್ನ ಮರುನಾಮಕರಣ, ಅಹಮದಾಬಾದ್​​ನ ಕ್ರಿಕೆಟ್​ ಕ್ರೀಡಾಂಗಣಕ್ಕೆ ಮೋದಿ ಹೆಸರು ನಾಮಕರಣವನ್ನ ಶಿವಸೇನೆ ವಿರೋಧಿಸಿದೆ. ಇದೊಂದು ರಾಜಕೀಯ ಆಟ ಅಂದಿರೋ ಶಿವಸೇನೆ ಕ್ರಿಕೆಟ್​ಗೆ ಮೋದಿ ಕೊಡುಗೆ ಏನಿದೆ ಅಂತ ಪ್ರಶ್ನಿಸಿದೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರು ಬದಲಾವಣೆ ಜನರ ಇಚ್ಚೆಯಾಗಿಲ್ಲ, ಬದಲಾಗಿ ಬಿಜೆಪಿ ರಾಜಕೀಯ ಆಟ ಎಂದು ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್‍ಚಂದ್ ಖೇಲ್ ರತ್ನ ಎಂದು ಮರುನಾಮಕರಣ ಮಾಡಿತ್ತು. ಇದನ್ನು ತನ್ನ ಮುಖವಾಣಿ ಸಾಮ್ನಾದಲ್ಲಿ ಶಿವಸೇನೆ ಟೀಕಿಸಿದೆ.
ಅಹಮದಾಬಾದ್‍ನ ಕ್ರಿಕೆಟ್ ಕ್ರೀಡಾಂಗಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ಕ್ರಿಕೆಟ್‍ಗೆ ಮೋದಿ ಅವರ ಕೊಡುಗೆ ಏನಿತ್ತು ಎಂದು ಶಿವಸೇನೆ ಪ್ರಶ್ನಿಸಿದೆ. ಖೇಲ್ ರತ್ನ ಮರುನಾಮಕರಣದ ವೇಳೆ ಅದನ್ನು ಜನರ ಆಶಯ ಎಂದು ಮೋದಿ ಹೇಳಿದ್ದಾರೆ. ಅದು ರಾಜಕೀಯದಾಟವಷ್ಟೇ ಎಂದು ತರಾಟೆಗೆ ತೆಗೆದುಕೊಂಡಿದೆ.

Source: newsfirstlive.com Source link