ಫೈಟರ್ ವಿವೇಕ್ ಕುಟುಂಬಕ್ಕೆ ನೆರವಾದ ನಿಖಿಲ್.. ₹50 ಸಾವಿರ ಪರಿಹಾರ ಘೋಷಣೆ

ಫೈಟರ್ ವಿವೇಕ್ ಕುಟುಂಬಕ್ಕೆ ನೆರವಾದ ನಿಖಿಲ್.. ₹50 ಸಾವಿರ ಪರಿಹಾರ ಘೋಷಣೆ

ಬೆಂಗಳೂರು: ಲವ್​ಯೂ ರಚ್ಚು ಸಿನಿಮಾದ ಚಿತ್ರೀಕರಣದ ವೇಳೆ ನಡೆದ ದುರಂತದಲ್ಲಿ ಸಾವನ್ನಪ್ಪಿದ ಫೈಟರ್​ ವಿವೇಕ್ ಕುಟುಂಬಕ್ಕೆ ಯುವರಾಜ ನಿಖಿಲ್ ಕುಮಾರಸ್ವಾಮಿ ₹50 ಸಾವಿರ ರೂ ಪರಿಹಾರ ಘೋಷಣೆ ಮಾಡಿದ್ದಾರೆ. ತಮ್ಮ ಮ್ಯಾನೇಜರ್ ಮೂಲಕ ನಿಖಿಲ್ ವಿವೇಕ್ ಕುಟುಂಬಕ್ಕೆ ಹಣ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ಲವ್​ ಯು ರಚ್ಚು’ ಚಿತ್ರೀಕರಣದ ವೇಳೆ ಅವಘಡ; ವಿದ್ಯುತ್ ತಂತಿ ತಗುಲಿ ಫೈಟರ್ ಸಾವು

ಇಂದು ಸಿನಿಮಾ ಶೂಟಿಂಗ್ ವೇಳೆ ದುರಂತದಲ್ಲಿ ಫೈಟಿಂಗ್ ವೇಳೆ ಹೈಟೆನ್ಷನ್ ವೈರ್​ಗೆ ಕ್ರೇನ್ ತಗುಲಿ ವಿವೇಕ್ ಸಾವನ್ನಪ್ಪಿದ್ದರು. ಬಿಡದಿಯ ಸಮೀಪ ಶೂಟಿಂಗ್ ನಡೆಯುತ್ತಿದ್ದಾಗ ದುರ್ಘಟನೆ ಸಂಭವಿಸಿತ್ತು. ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾದಲ್ಲಿ ಫೈಟಿಂಗ್ ಸನ್ನಿವೇಶದಲ್ಲಿ ವಿವೇಕ್ ನಟಿಸಿದ್ದರು.

Source: newsfirstlive.com Source link