ಇಷ್ಟಾರ್ಥ ಈಡೇರಿಸಿದ ತಿಮ್ಮಪ್ಪನಿಗಾಗಿ ಗುಜರಾತ್​ನಿಂದ ನಡೆದುಕೊಂಡು ಬಂದ 75 ವರ್ಷ ದಾಟಿದ ವೃದ್ಧ ದಂಪತಿ

ಇಷ್ಟಾರ್ಥ ಈಡೇರಿಸಿದ ತಿಮ್ಮಪ್ಪನಿಗಾಗಿ ಗುಜರಾತ್​ನಿಂದ ನಡೆದುಕೊಂಡು ಬಂದ 75 ವರ್ಷ ದಾಟಿದ ವೃದ್ಧ ದಂಪತಿ

ರಾಯಚೂರು: ತಮಗೆ ಬಂದೊದಗಿದ್ದ ಆಪತ್ತನ್ನು ಪಾರು ಮಾಡಿದ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ 75 ವರ್ಷ ತುಂಬಿದ ವೃದ್ಧ ದಂಪತಿ ಬರೋಬ್ಬರಿ 2000 ಕಿಲೋ ಮೀಟರ್ ಪಾದಯಾತ್ರೆ ಮಾಡಿದೆ. ಗುಜರಾತ್ ಮೂಲದ ವೃದ್ಧ ದಂಪತಿ ಇಷ್ಟಾರ್ಥ ಈಡೇರಿಸಿದ ದೇವರಿಗಾಗಿ ದಿನಕ್ಕೆ 25 ರಿಂದ 28 ಕಿಮೀ ನಡಿಗೆ ಆರಂಭಿಸಿ, ಆಂಧ್ರಪ್ರದೇಶದ ತಿರುಮಲಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದುಕೊಂಡು ವಾಪಸ್ ಹೊರಟಿದೆ.

blank

ಯಾಕೆ ಪಾದಯಾತ್ರೆ..?
5 ಬಾರಿ ಆಪರೇಷನ್​ಗೆ ಒಳಗಾದ ಮಡದಿ ಆರೋಗ್ಯಕ್ಕಾಗಿ ವೃದ್ಧ ಪ್ರಮೋದ್ ತಿಮ್ಮಪ್ಪನ ಮೊರೆ ಹೋಗಿದ್ದರು. ಬಳಿಕ ಆತನ ಪತ್ನಿಯ ಆರೋಗ್ಯ ಸರಿಹೋಗಿತ್ತು. ಇದೇ ಸಂದರ್ಭದಲ್ಲಿ ಪ್ರಮೋದ್ ತಮ್ಮ ಕಣ್ಣಿನ ದೃಷ್ಟಿಯ ಬಗ್ಗೆಯೂ ಬೇಡಿಕೊಂಡಿದ್ದರು.

blank

ತಮ್ಮ ಇಷ್ಟಾರ್ಥವನ್ನ ಈಡೇರಿಸಿದ ಈ ದಂಪತಿ ಇಂದು ತಮ್ಮ ಹರಕೆಯನ್ನ ದಾಖಲಿಸಿಕೊಂಡಿದೆ. ಅದರಂತೆ ಕಾಲ್ನಡಿಗೆಯಲ್ಲೇ ಬರೋಬ್ಬರಿ 3 ತಿಂಗಳದ 17 ದಿನ ನಡೆದು ದೇವರ ಆಶೀರ್ವಾದ ಪಡೆದುಕೊಂದ್ದಾರೆ. ಇನ್ನು ಮನೆ ಬಿಟ್ಟು ತಿಮ್ಮಪ್ಪನ ದರ್ಶನ ಪಡೆದು ಮರಳಿ ಅವರಿಗೆ 7 ತಿಂಗಳು ಬೇಕಾಗಿದೆ. ಸದ್ಯ ದೇವರ ದರ್ಶನ ಪಡೆದ ದಂಪತಿ ಗುಜರಾತ್​ನತ್ತ ಮುಖ ಮಾಡಿದ್ದಾರೆ. ದಾರಿಯುದ್ದಕ್ಕೂ ದಂಪತಿಗಳ ನೋಡಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ. ರಾಯಚೂರಿನ ಶಕ್ತಿನಗರ ರಸ್ತೆಯ ಯರಮರಸ್ ಬಳಿ ಅಪರೂಪದ ದಂಪತಿ ನ್ಯೂಸ್​ಫಸ್ಟ್​ಗೆ ಮುಖಾಮುಖಿಯಾಗಿತ್ತು. ಇಲ್ಲಿಯವರೆಗೂ ಈ ದಂಪತಿ ಈವರೆಗೂ 2219 ಕಿಲೋ ಮೀಟರ್ ಪ್ರಯಾಣದ ಹಾದಿಯನ್ನ ಕ್ರಿಯಿಸಿದೆ.

blank

Source: newsfirstlive.com Source link