ಗುಡ್​ನ್ಯೂಸ್: ಶೀಘ್ರವೇ ಎಂಟ್ರಿ ಕೊಡಲಿದೆ ‘ಚುಚ್ಚುಮದ್ದು ರಹಿತ’ ವ್ಯಾಕ್ಸಿನ್​

ಗುಡ್​ನ್ಯೂಸ್: ಶೀಘ್ರವೇ ಎಂಟ್ರಿ ಕೊಡಲಿದೆ ‘ಚುಚ್ಚುಮದ್ದು ರಹಿತ’ ವ್ಯಾಕ್ಸಿನ್​

ನವದೆಹಲಿ: ಭಾರತೀಯ ಫಾರ್ಮಾಸಿಟಿಕಲ್ ಕಂಪನಿ ಜೈಡಸ್ ಕ್ಯಾಡಿಲಾ ಅಭಿವೃದ್ಧಿ ಪಡಿಸಿರುವ ಚುಚ್ಚುಮದು ರಹಿತ ಕೋವಿಡ್ ವ್ಯಾಕ್ಸಿನ್​ಗೆ ಈ ವಾರ ತುರ್ತು ಬಳಕೆಗೆ ಅನುಮತಿ ಪಡೆಯುವ ಸಾಧ್ಯತೆ ಇದೆ. ಅಹ್ಮದಾಬಾದ್ ಮೂಲದ ಜೈಡಸ್ ಕ್ಯಾಡಿಲಾ ಜೈಕೋವ್-ಡಿ ಹೆಸರಿನ ವ್ಯಾಕ್ಸಿನ್ ಅಭಿವೃದ್ಧಿಪಡಿಸಿದ್ದು ಇಂದು ಮೂರು ಡೋಸ್​ಗಳ ಡಿಎನ್​ಎ ವ್ಯಾಕ್ಸಿನ್ ಆಗಿದೆ. ಜುಲೈ 1 ರಂದು ತುರ್ತು ಬಳಕೆಗೆ ಅರ್ಜಿ ಸಲ್ಲಿಸಿರುವ ಸಂಸ್ಥೆ ಅನುಮತಿ ಪಡೆದ 2 ತಿಂಗಳುಗಳಲ್ಲಿ ಲಸಿಕೆಯನ್ನ ಲಾಂಚ್ ಮಾಡುವುದಾಗಿ ಹೇಳಿದೆ.

ಇದನ್ನೂ ಓದಿ: ವಯಸ್ಕ ಸೋಂಕಿತರಿಗೆ ನೀಡುವ ಜೈಡಸ್​ ಕ್ಯಾಡಿಲಾದ ‘ವಿರಾಫಿನ್’ ಮೆಡಿಸಿನ್​ಗೆ DCGI ಅನುಮತಿ

ಇನ್ನು ಜೈಡಸ್ ತಾನು ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್ ಲಕ್ಷಣ ಸಹಿತ ಕೊರೊನಾ ಕೇಸ್​ಗಳ ವಿರುದ್ಧ 66.6 ಪರ್ಸೆಂಟ್​ನಷ್ಟು ಪರಿಣಾಮಕಾರಿಯಾಗಿದೆ ಹಾಗೂ ಮಧ್ಯಮ ಲಕ್ಷಣ ಹೊಂದಿರುವ ಕೊರೊನಾ ವಿರುದ್ಧ 100 ಪರ್ಸೆಂಟ್ ಪರಿಣಾಮಕಾರಿಯಾಗಿದೆ ಎಂದು ಹೇಳಿದೆ. ಅಲ್ಲದೇ 12 ಮತ್ತು 18 ವರ್ಷ ವಯಸ್ಸಿನ ಅಂತರದ ಮಕ್ಕಳಿಗೂ ವ್ಯಾಕ್ಸಿನ್ ಸೇಫ್ ಎಂದು ಹೇಳಿದೆ.

blank

ಜೈಡಸ್ ವ್ಯಾಕ್ಸಿನ್​ಗೆ ಒಂದು ವೇಳೆ ಅನುಮತಿ ಸಿಕ್ಕಲ್ಲಿ ಇದು ಎರಡನೇ ಸ್ವದೇಶಿ ವ್ಯಾಕ್ಸಿನ್ ಹಾಗೂ ದೇಶದಲ್ಲಿ ಅನುಮತಿ ಪಡೆದ 6 ನೇ ವ್ಯಾಕ್ಸಿನ್ ಎನ್ನಿಸಿಕೊಳ್ಳಲಿದೆ. ದೇಶದಲ್ಲಿ ಈವರೆಗೆ ಜಾನ್​ಸನ್ ಅಂಡ್ ಜಾನ್​​ಸನ್, ಮೊಡೆರ್ನಾ, ಆಸ್ಟ್ರಾಜೆನೆಕಾ, ಸೀರಮ್ ಇನ್​​ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತ್ ಬಯೋಟೆಕ್ ಮತ್ತು ರಷ್ಯಾದ ಗಮಲೆಯ ಇನ್​ಸ್ಟಿಟ್ಯೂಟ್​ಗಳು ತಮ್ಮ ವ್ಯಾಕ್ಸಿನ್​ಗೆ ಅನುಮತಿ ಪಡೆದುಕೊಂಡಿವೆ.

Source: newsfirstlive.com Source link