ಜಹಾಂಗೀರ್ ಎಂದು ಪುತ್ರನಿಗೆ ಹೆಸರಿಟ್ಟ ಕರೀನಾ

ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ 2 ನೇ ಪುತ್ರನಿಗೆ ಜಹಾಂಗೀರ್ ಎಂದು ಹೆಸರು ಇಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಮೊದಲ ಮಗುವಿಗೆ ತೈಮೂರ್ ಅಲಿ ಖಾನ್ ಎಂದು ಹೆಸರು ಇಟ್ಟಿದ್ದು ಬಹಳ ಚರ್ಚೆಯಾಗಿತ್ತು. ಈ ಬಗ್ಗೆ ಅನೇಕರು ವಿರೋಧ ಕೂಡ ವ್ಯಕ್ತಪಡಿಸಿದ್ದರು. ಅದು ದಾಳಿಕೋರ, ಕ್ರೂರ ರಾಜನ ಹೆಸರು ಎಂಬ ಕಾರಣಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಅದೇ ಕಾರಣಕ್ಕೆ ತಮ್ಮ ಎರಡನೇ ಮಗನಿಗೆ ಹೆಸರು ಇಡುವಾಗ ಸೈಫ್-ಕರೀನಾ ತುಂಬ ಎಚ್ಚರಿಕೆ ವಹಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈಗ ಸೈಫ್-ಕರೀನಾ ಎರಡನೇ ಮಗುವಿಗೆ ಜಹಾಂಗೀರ್ ಎಂದು ನಾಮಕರಣ ಮಾಡಿದ್ದಾರೆ. ಇದನ್ನೂ ಓದಿ:  ಬಿಗಿ ಉಡುಪು ಧರಿಸಿದ್ದಕ್ಕೆ ಯುವತಿಯ ಕೊಲೆ

ಈ ವರ್ಷ ಫೆಬ್ರವರಿಯಲ್ಲಿ ಎರಡನೇ ಪುತ್ರನಿಗೆ ಕರೀನಾ ಜನ್ಮ ನೀಡಿದ್ದರು.  ಏನು ಹೆಸರು ಇಟ್ಟಿದ್ದಾರೆ ಎಂಬುದು ಕೂಡ ಬಹಿರಂಗ ಆಗಿರಲಿಲ್ಲ. ಇತ್ತೀಚೆಗೆ ಅವರ ಎರಡನೇ ಪುತ್ರನಿಗೆ ಅವರು ಜೇ (Jeh) ಎಂದು ಹೆಸರು ಇಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು.

ಕರೀನಾ ಅವರು ಪ್ರಗ್ನೆನ್ಸಿ ಬೈಬಲ್ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕದಲ್ಲಿ ಎರಡನೇ ಮಗುವಿನ ಬಗ್ಗೆ ಕರೀನಾ ವಿವರಿಸಿದ್ದಾರೆ. ಈ ಪುಸ್ತಕದಲ್ಲಿ ಕರೀನಾ ಎರಡನೇ ಮಗುವಿಗೆ ಜಹಾಂಗೀರ್ ಎಂದು ಹೆಸರಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಮಗುವಿನ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

Source: publictv.in Source link