ಕರಾಚಿ ಬಂದರು ದಾಳಿ ಮುನ್ನಡೆಸಿದ್ದ ಕಮಾಂಡರ್ ಗೋಪಾಲ್ ರಾವ್ ಇನ್ನಿಲ್ಲ

ಕರಾಚಿ ಬಂದರು ದಾಳಿ ಮುನ್ನಡೆಸಿದ್ದ ಕಮಾಂಡರ್ ಗೋಪಾಲ್ ರಾವ್ ಇನ್ನಿಲ್ಲ

ಭಾರತದ ಎರಡನೇ ಅತ್ಯುನ್ನತ ಮಿಲಿಟರಿ ಮಹಾವೀರ ಚಕ್ರ ಪ್ರಶಸ್ತಿ ವಿಜೇತ ಕಮಾಂಡರ್ ಕಾಸರಗೋಡು ಪಟ್ಟಣಶೆಟ್ಟಿ ಗೋಪಾಲ್ ರಾವ್ (94) ಕೊನೆಯುಸಿರೆಳೆದಿದ್ದಾರೆ. ದೇಶದಲ್ಲಿ 1971ರ ಯುದ್ಧ ವೀರ ಎಂದೇ ಖ್ಯಾತಿಯಾಗಿದ್ದ ಇವರು ಕರಾಚಿ ಬಂದರು ದಾಳಿ ಮಾಡಿದ್ದ ಸಣ್ಣ ಟಾಸ್ಕ್ ಗ್ರೂಪ್ ಅನ್ನು ಮನ್ನಡೆಸಿದ್ದರು. ಸದ್ಯ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ನಮ್ಮನ್ನಗಲಿದ್ದಾರೆ.

1971 ಡಿಸೆಂಬರ್ 4ನೇ ತಾರೀಕು ಆಪರೇಷನ್ ಟ್ರೈಡೆಂಟ್ ಸಮಯದಲ್ಲಿ ಕರಾಚಿ ಬಂದರಿನ ಮೇಲೆ ಭಾರತೀಯ ಟಾಸ್ಕ್ ಗ್ರೂಪ್ ದಾಳಿ ನಡೆಸಿತ್ತು. ಈ ಟಾಸ್ಕ್​​​​ ಗ್ರೂಪ್​​ ಭಾಗವಾಗಿದ್ದರು ಗೋಪಾಲ್ ರಾವ್. ಐಎನ್ಎಸ್ ಕಿಲ್ತಾನ್ ಮತ್ತು ಐಎನ್ಎಸ್ ಕಾಟ್ಚಾಲ್​​ನ ಕಮಾಂಡರ್ ಆಗಿದ್ದ ಇವರು, ಕರಾಚಿ ಬಂದರು ದಾಳಿ ನೇತೃತ್ವ ವಹಿಸಿದ್ದರು. ಈ ದಾಳಿಯ ದಿನವನ್ನೇ ಈಗ ನೌಕಾಪಡೆ ದಿನ ಎಂದು ಸೆಲೆಬ್ರೇಟ್​ ಮಾಡಲಾಗುತ್ತಿದೆ.

ಇದನ್ನೂ ಓದಿ: ಸಾಗರ ಭದ್ರತೆ ಬಲವರ್ಧನೆ ಅಂತರಾಷ್ಟ್ರೀಯ ಸಹಕಾರ ಅಭಿವೃದ್ಧಿಗೆ ಉದಾಹರಣೆ; ಪ್ರಧಾನಿ ಮೋದಿ

ಗೋಪಾಲ್ ರಾವ್ 1926 ನವೆಂಬರ್ 13ರಂದು ಮಂಗಳೂರಿನಲ್ಲಿ ಜನಿಸಿದರು. 1950 ಏಪ್ರಿಲ್ 21ರಂದು ಭಾರತೀಯ ನೌಕಾಪಡೆಗೆ ನಿಯೋಜನೆಗೊಂಡಿದ್ದರು. ಗನ್ನರಿಯಲ್ಲಿ ಪರಿಣಿತರಾಗಿದ್ದ ರಾವ್ ನೌಕಾ ಪಡೆಯ ಕಮಾಂಡರ್​​ ಆಗಿದ್ದರು.

Source: newsfirstlive.com Source link