ಇನ್ನುಮುಂದೆ ಭಾರತದಲ್ಲಿ ನೆಲೆಸಿರುವ ವಿದೇಶಿಗರಿಗೂ ವ್ಯಾಕ್ಸಿನೇಷನ್- ಕೇಂದ್ರದ ನಿರ್ಧಾರ

ಇನ್ನುಮುಂದೆ ಭಾರತದಲ್ಲಿ ನೆಲೆಸಿರುವ ವಿದೇಶಿಗರಿಗೂ ವ್ಯಾಕ್ಸಿನೇಷನ್- ಕೇಂದ್ರದ ನಿರ್ಧಾರ

ನವದೆಹಲಿ: ಕೇಂದ್ರ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಕ್ಸಿನೇಷನ್​​ಗೆ ಸಂಬಂಧಿಸಿದಂತೆ ಇಂದು ಮತ್ತೊಂದು ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿವೆ. ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳಿಗೂ ಸಹ ಇನ್ನು ಮುಂದೆ ವ್ಯಾಕ್ಸಿನ್ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಹೇಳಿದೆ.

ವಿದೇಶಿ ಪ್ರಜೆಗಳು ವ್ಯಾಕ್ಸಿನ್ ಪಡೆಯಲು ತಮ್ಮ ಗುರುತಿಗಾಗಿ ಪಾಸ್​​ಪೋರ್ಟ್ ತೋರಿಸಬೇಕು.. ಅಲ್ಲದೇ ಕೋವಿನ್ ಪೋರ್ಟಲ್​ನಲ್ಲಿ ನೋಂದಣಿ ಮಾಡಿಸಿಕೊಂಡು ವ್ಯಾಕ್ಸಿನ್ ಪಡೆದುಕೊಳ್ಳಬಹುದಾಗಿದೆ. ದೇಶದಲ್ಲಿ ಗಣನೀಯ ಸಂಖ್ಯೆಯಲ್ಲಿ ವಿದೇಶಿಗರು ವಾಸವಿದ್ದಾರೆ. ಅದ್ರಲ್ಲೂ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ವಿದೇಶಿಗರು ಹೆಚ್ಚಾಗಿ ವಾಸವಾಗಿದ್ದಾರೆ. ನಗರ ಪ್ರದೇಶಗಳಲ್ಲಿ ಹಾಗೂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ ಅಗತ್ಯ ಇರುವವರಿಗೆ ವ್ಯಾಕ್ಸಿನ್ ನೀಡುವುದು ಮುಖ್ಯವಾಗುತ್ತದೆ ಎಂದು ಆರೋಗ್ಯ ಇಲಾಖೆ ಹೇಳಿಕೆ ನೀಡಿದೆ. ಭಾರತದಲ್ಲಿ ಈವರೆಗೆ ಸುಮಾರು 51 ಕೋಟಿ ವ್ಯಾಕ್ಸಿನ್ ಡೋಸ್​ಗಳನ್ನು ನೀಡಲಾಗಿದೆ.

Source: newsfirstlive.com Source link