ಹಿರಿಯ ಪತ್ರಕರ್ತ ಎಸ್​. ಚಂದ್ರಶೇಖರ್ ರಾವ್ ಇನ್ನಿಲ್ಲ

ಹಿರಿಯ ಪತ್ರಕರ್ತ ಎಸ್​. ಚಂದ್ರಶೇಖರ್ ರಾವ್ ಇನ್ನಿಲ್ಲ

ಹಿರಿಯ ಪತ್ರಕರ್ತರಾದ ಎಸ್​. ಚಂದ್ರಶೇಖರ್ ರಾವ್(ಸಾ.ಚ)(75) ಇಂದು ಕೊನೆಯುಸಿರೆಳೆದಿದ್ದಾರೆ. ನಾಳೆ ಬೆಳಿಗ್ಗೆ 10 ಗಂಟೆಗೆ ಹರಿಶ್ಚಂದ್ರ ಘಾಟ್​ನಲ್ಲಿ ಚಂದ್ರಶೇಖರ್ ರಾವ್ ಅವರ ಅಂತ್ಯಸಂಸ್ಕಾರ ನಡೆಯಲಿದೆ. ಅಂತ್ಯಸಂಸ್ಕಾರಕ್ಕೂ ಮುನ್ನ ಮಂಜುನಾಥ ನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

blank

ಚಂದ್ರಶೇಖರ್ ರಾವ್ ಬೆಂಗಳೂರಿನಲ್ಲಿ ಶಿಕ್ಷಕರಾಗಿಯೂ ಕೆಲಸ ಮಾಡಿದ್ದರು. ನಿಷ್ಠುರವಾದಿ ಪತ್ರಕರ್ತರಾಗಿದ್ದ ಚಂದ್ರಶೇಖರ್ ಅನೇಕ ಯುವಕರನ್ನ ಪತ್ರಿಕಾ ರಂಗಕ್ಕೆ ಪರಿಚಯಿಸಿಕೊಟ್ಟಿದ್ದಾರೆ. ಚಂದ್ರಶೇಖರ್ ರಾವ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಂತಾಪ ಸೂಚಿಸಿದ್ದಾರೆ.

Source: newsfirstlive.com Source link