ಹೈದರಾಬಾದ್ ಬಿರಿಯಾನಿ ಹೋಟೆಲ್​ನಲ್ಲಿ ಬೆಂಕಿ ಅವಘಡ; ಸ್ಥಳೀಯರಲ್ಲಿ ಆತಂಕ

ಹೈದರಾಬಾದ್ ಬಿರಿಯಾನಿ ಹೋಟೆಲ್​ನಲ್ಲಿ ಬೆಂಕಿ ಅವಘಡ; ಸ್ಥಳೀಯರಲ್ಲಿ ಆತಂಕ

ಬೆಂಗಳೂರು: ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಹೈದರಾಬಾದ್ ಬಿರಿಯಾನಿ ಹೋಟೆಲ್​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಹೋಟೆಲ್​ನ ಚಿಮಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳಕ್ಕೆ ಅಗ್ನಿಶಾಮಕ ವಾಹನ ದೌಡಾಯಿಸಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಘಟನೆಯಿಂದ ಗಾಬರಿಗೊಂಡ ಹೋಟೆಲ್ ಸಿಬ್ಬಂದಿ ಹೋಟೆಲ್​ನಿಂದ ಹೊರಗೆ ಓಡಿಬಂದಿದ್ದಾರೆ. ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

Source: newsfirstlive.com Source link