‘ಲವ್​ ಯು ರಚ್ಚು’ ಶೂಟಿಂಗ್ ವೇಳೆ ಫೈಟರ್ ಸಾವು; ಘಟನೆ ಬಗ್ಗೆ ಗಾಯಾಳು ರಂಜಿತ್ ಹೇಳಿದ್ದೇನು..?

‘ಲವ್​ ಯು ರಚ್ಚು’ ಶೂಟಿಂಗ್ ವೇಳೆ ಫೈಟರ್ ಸಾವು; ಘಟನೆ ಬಗ್ಗೆ ಗಾಯಾಳು ರಂಜಿತ್ ಹೇಳಿದ್ದೇನು..?

ಬೆಂಗಳೂರು: ಲವ್​ ಯೂ ರಚ್ಚು ಸಿನಿಮಾದ ಚಿತ್ರೀಕರಣದ ವೇಳೆ ಅವಘಡದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಫೈಟರ್ ರಂಜಿತ್ ಹೇಳಿಕೆ ನೀಡಿದ್ದಾರೆ.

ಶೂಟಿಂಗ್​ನಲ್ಲಿ ಎಲ್ಲ ಸ್ಟಂಟ್ ಚೆನ್ನಾಗಿ ನಡಿತಾ ಇತ್ತು. ಬೆಳಗ್ಗೆ ಮರಕ್ಕೆ ಕ್ರೈನ್ ಆಪರೇಟರ್ ಟಚ್ ಮಾಡಿದ್ದ. ಆವಾಗ ಅವನನ್ನು ಎಚ್ಚರಿಸಿದ್ವಿ. ಅಲ್ಲದೇ, ಸ್ಟಂಟ್ ಮಾಸ್ಟರ್‌ ಬಳಿ 7, 8 ವರ್ಷಗಳಿಂದ ನಾನು ಕೆಲಸ ಮಾಡ್ತಿದ್ದೀನಿ. ಅವರು ಪ್ರತಿಯೊಬ್ಬರ ಬಗ್ಗೆ ಅಷ್ಟೇ ಕೇರ್ ಮಾಡ್ತಾರೆ. ಫೈಟ್ ಮಾನಿಟರ್ ಎಲ್ಲಾ ಚೆನ್ನಾಗೆ ನಡೀತಿತ್ತು. ಆಗ‌ ಕ್ರೇನ್ ಆಪರೇಟರ್ ಮಿಸ್ಟೇಕ್​ನಿಂದ ಹೈಟೆನ್ಷನ್ ವೈರ್ ಟಚ್ ಆಗಿದೆ. ಇಲ್ಲಿ ಫೈಟ್ ಮಾಸ್ಟರ್ ತಪ್ಪಿಲ್ಲ. ಈ ಸಂದರ್ಭದಲ್ಲಿ ‌ನನಗೂ ಗಾಯಗಳಾಗಿದೆ. ಕೂಡಲೇ ನನ್ನನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಚೇತರಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

Source: newsfirstlive.com Source link