ಹೃದಯ ಸಂಬಂಧಿ ಸಮಸ್ಯೆ ಇದ್ರು SSLCಯಲ್ಲಿ 625ಕ್ಕೆ 625 ಅಂಕ ಗಳಿಸಿದ ವಿದ್ಯಾರ್ಥಿನಿಗೆ ಸಚಿವ ಕಾರಜೋಳ ನೆರವು

ಹೃದಯ ಸಂಬಂಧಿ ಸಮಸ್ಯೆ ಇದ್ರು SSLCಯಲ್ಲಿ 625ಕ್ಕೆ 625 ಅಂಕ ಗಳಿಸಿದ ವಿದ್ಯಾರ್ಥಿನಿಗೆ ಸಚಿವ ಕಾರಜೋಳ ನೆರವು

ಬಾಗಲಕೋಟೆ: ಹೃದಯದ ಖಾಯಿಲೆ ಹಾಗೂ ಉಸಿರಾಟದ ಕಾಯಿಲೆ ಇದ್ದರೂ ಖಾಯಿಲೆಗೆ ಸೆಡ್ಡು ಹೊಡೆದು ಬಾಗಲಕೋಟೆಯ ವಿದ್ಯಾರ್ಥಿನಿಯೋರ್ವಳು SSLC ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆಯುವುದರ ಮೂಲಕ ಜಿಲ್ಲೆಗೆ ಕೀರ್ತಿಯನ್ನ ತಂದಿದ್ದಾಳೆ‌.

ಹೌದು, ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡಾದ ಶ್ರೀ ದುರ್ಗಾದೇವಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಗಂಗಮ್ಮ. ಬಸಪ್ಪ ಹುಡೇದ ಎಂಬ ವಿದ್ಯಾರ್ಥಿನಿಯೇ ಈ ಸಾಧನೆ ಮಾಡಿದ ಸಾಧಕಿ. ಕಳೆದ ಕೆಲವು ವರ್ಷಗಳಿಂದ ಈಕೆ ಹೃದಯದ ಖಾಯಿಲೆಯಿಂದ ಬಳಲುತ್ತಿದ್ದರೂ ಕೂಡ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಈ ಸಾಧನೆಯನ್ನ ಮಾಡಿದ್ದಾಳೆ. ತಾಯಿ ಆಶಾಕಾರ್ಯಕರ್ತೆಯಾಗಿದ್ದು, ತಂದೆ ಖಾಸಗಿ ನೌಕರ. ಬಡತನ ಹಾಗೂ ಅನಾರೋಗ್ಯದ ನಡುವೆಯೂ ವಿದ್ಯಾರ್ಥಿನಿ ಈ ಸಾಧನೆ ಮಾಡಿದ್ದಕ್ಕೆ ಶಾಲೆಯ ಶಿಕ್ಷಕರು, ಪೋಷಕರು ಹರ್ಷವನ್ಮ ವ್ಯಕ್ತಪಡಿಸಿದ್ದಾರೆ.

blank

ಇನ್ನು ಶಾಲೆಯ ಶಿಕ್ಷಕರು ಕೂಡ ವಿದ್ಯಾರ್ಥಿನಿಗೆ ಉತ್ತಮವಾಗಿ ಓದಲು ಬಹಳಷ್ಟು ಸಹಕಾರವನ್ನ ನೀಡಿದ್ದಾರೆ. ಆಕೆ ಸತತವಾಗಿ oxygen ಮೇಲೆ ಇರಬೇಕಾಗಿರುವುದರಿಂದ ಶಾಲೆಯ ಶಿಕ್ಷಕರು ಆಕೆಯ ಓದಿಗೆ ಸಾಕಷ್ಟು ಸಹಕಾರವನ್ನ ನೀಡಿದ್ದಕ್ಕೆ ಪೋಷಕರು ಶಿಕ್ಷಕರಿಗೆ ಧನ್ಯವಾದಗಳನ್ನ ಅರ್ಪಿಸಿದ್ದಾರೆ. ಇನ್ನು ಆಕೆಯ ಶಾಲೆಯ ಶಿಕ್ಷಕರು ಕೂಡ ಸಂತಾವನ್ನ ವ್ಯಕ್ತಪಡಿಸಿದ್ದಾರೆ.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿ ಜಿಲ್ಲೆಗೆ ಕೀರ್ತಿ ತಂದ ಗಂಗಮ್ಮ ಹುಡೇದ್ ಎಂಬ ವಿದ್ಯಾರ್ಥಿನಿಗೆ ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಫೋನ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ದೇ ಗಂಗಮ್ಮ ಆರೋಗ್ಯ ವಿಚಾರವಾಗಿ ಪೋಷಕರೊಂದಿಗೆ ಚರ್ಚೆ‌ ನಡೆಸಿದ್ರು. ಈ ಸಂಬಂಧ ನಾಳೆ ದಿನ ಡಿ.ಎಚ್.ಓ ನಿಮ್ಮ ಮನೆಗೆ ಬಂದು ವಿಚಾರಿಸ್ತಾರೆ. ನಂತ್ರ ಚಿಕಿತ್ಸೆ ಅವಶ್ಯಕ ಅನಿಸಿದ್ರೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ತೋರಿಸಲು ನಾನು ವ್ಯವಸ್ಥೆ ಮಾಡುವೆ. ವಿದ್ಯಾರ್ಥಿನಿ ಹಾಗೂ ಪೋಷಕರಿಗೆ ಅಭಿನಂದನೆ ಸಲ್ಲಿಸೋದ್ರ ಜೊತೆಗೆ ಆಕೆಯ ಚಿಕಿತ್ಸೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ಸಚಿವ ಕಾರಜೋಳ ನೀಡಿದ್ದಾರೆ.

blank

Source: newsfirstlive.com Source link