ತನಗೆ ಸಾರಿಗೆ ಇಲಾಖೆ ಬೇಡ ಎಂದು ಶ್ರೀರಾಮಲು ಪಟ್ಟು -ಸಚಿವರ ದೆಹಲಿ ಯಾತ್ರೆ, ವರಿಷ್ಠರ ಭೇಟಿ ಕಸರತ್ತು!

ತನಗೆ ಸಾರಿಗೆ ಇಲಾಖೆ ಬೇಡ ಎಂದು ಶ್ರೀರಾಮಲು ಪಟ್ಟು -ಸಚಿವರ ದೆಹಲಿ ಯಾತ್ರೆ, ವರಿಷ್ಠರ ಭೇಟಿ ಕಸರತ್ತು!

ಬೆಂಗಳೂರು: ರಾಜ್ಯದಲ್ಲಿ ಹೊಸ ಸಿಎಂ ಬಂದ್ಮೇಲೆ ಸಚಿವ ಸಂಪುಟ ಕೂಡ ಹೊಸದಾಗಿ ರಚನೆ ಆಗಿದೆ. ಕೆಲವರಿಗೆ ಅಚ್ಚರಿಯ ಖಾತೆಗಳು ಹಂಚಿಕೆ ಆಗಿವೆ. ಇದು ಬೊಮ್ಮಾಯಿ ಸಂಪುಟದ ಕೆಲ ಸಚಿವರ ಸಂತೋಷಕ್ಕೆ ಕಾರಣವಾಗಿದ್ರೆ, ಇನ್ನೂ ಕೆಲವರು ಸಂಪುಟ ರಚನೆ ಆಗ್ತಿದ್ದಂತೆ ಸಿಡಿದೆದ್ದಿದ್ದಾರೆ. ಇದೀಗ ಈ ಖಾತೆ ಕ್ಯಾತೆಯ ಲಿಸ್ಟ್‌ ದೊಡ್ಡದಾಗುತ್ತಿದ್ದು, ಸಂಪುಟದ ಹಿರಿಯ ಸಚಿವರೊಬ್ಬರು ಕ್ಯಾತೆ ತೆಗೆದಿದ್ದಾರೆ.
ರಾಜ್ಯದಲ್ಲಿ ಹೊಸ ಸಚಿವ ಸಂಪುಟ ರಚನೆ ಆಗಿದ್ದೇ ತಡ. ಕೆಲ ಸಚಿವರು ಅಕ್ಷರಶಃ ನಿಗಿನಿಗಿ ಕೆಂಡವಾಗಿದ್ದಾರೆ. ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ ಅಂತಾ ಕೆಲ ಬಿಜೆಪಿ ಸಚಿವರು ಅಸಮಾಧಾನಗೊಂಡಿದ್ದಾರೆ. ಮತ್ತೆ ಕೆಲವರು ತಮಗೆ ಸಿಕ್ಕಿರುವ ಖಾತೆಗಳ ಬಗ್ಗೆಯೇ ಕ್ಯಾತೆ ತೆಗೆದಿದ್ದಾರೆ. ಇನ್ನು ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಮೂಲ ಬಿಜೆಪಿಯ ಸಚಿವರು ಮಾತ್ರ ಸದ್ಯ ಶಾಂತವಾಗಿದ್ದಾರೆ.

blank

ತನಗೆ ಸಾರಿಗೆ ಇಲಾಖೆ ಬೇಡ ಎಂದು ಶ್ರೀರಾಮಲು ಪಟ್ಟು
ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದ ಮೂಲ ಸಚಿವರು ತಮಗೆ ಸಿಕ್ಕ ಖಾತೆಯಿಂದ ಖುಷ್‌ ಆಗಿದ್ದಾರೆ. ಖಾತೆ ಹಂಚಿಕೆ ಬಳಿಕ ತಮ್ಮ ತಮ್ಮ ಇಲಾಖೆಯ ಕೆಲಸದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಆದ್ರೆ, ಸಚಿವ ಬಿ. ಶ್ರೀರಾಮುಲು ಮಾತ್ರ ತನಗೆ ಸಾರಿಗೆ ಇಲಾಖೆ ಬೇಡ ಅಂತಾ ಪಟ್ಟು ಹಿಡಿದಿದ್ದಾರೆ. ಇದರ ಬೆನ್ನಲ್ಲೇ ದೆಹಲಿಯಾತ್ರೆ ಕೈಗೊಂಡಿದ್ದಾರೆ. ತಮ್ಮ ವರಿಷ್ಠರ ಭೇಟಿಗೆ ಕಸರತ್ತು ನಡೆಸ್ತಿದ್ದಾರೆ.

ಸಾರಿಗೆ ಇಲಾಖೆಯ ಚಾರ್ಜ್ ತೆಗೆದುಕೊಳ್ಳಲು ಒಪ್ಪದ ಶ್ರೀರಾಮುಲು!
ಸಚಿವ ಬಿ. ಶ್ರೀರಾಮುಲುಗೆ ಸಮಾಜ ಕಲ್ಯಾಣ ಖಾತೆಯಿಂದ ಸಾರಿಗೆ ಖಾತೆಯನ್ನ ನೀಡಲಾಗಿದೆ. ಆದ್ರೆ, ಸಾರಿಗೆ ಇಲಾಖೆಯ ಚಾರ್ಜ್ ತೆರೆದುಕೊಳ್ಳಲು ಶ್ರೀರಾಮುಲು ಒಪ್ಪುತ್ತಿಲ್ಲ. ತಮಗೆ ನೀಡಿರು ಖಾತೆಯನ್ನ ಬದಲಾವಣೆ ಮಾಡುವಂತೆ ವರಿಷ್ಠರ ಮುಂದೆ ಶ್ರೀರಾಮುಲು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಹಿಂದೆ ನಿಭಾಯಿಸಿದ್ದ ಸಮಾಜ ಕಲ್ಯಾಣ ಜವಾಬ್ದಾರಿಯನ್ನೇ ನೀಡಿ ಅಂತಾ ಬಿಜೆಪಿ ಹೈ ಕಮಾಂಡ್‌ನ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಸಚಿವ ಶ್ರೀರಾಮುಲು ಹೈ ಕಮಾಂಡ್ ನಾಯಕರನ್ನ ಭೇಟಿ ಮಾಡಿ ಹಲವು ಬೇಡಿಕೆಗಳನ್ನ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅವುಗಳನ್ನ ಈಡೇರಿಸಲೇಬೇತು ಅಂತಾ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

blank

ಸಾರಿಗೆ ಖಾತೆ ನನಗೆ ಬೇಡ, ಸಮಾಜ ಕಲ್ಯಾಣ ಇಲಾಖೆ ಕೊಡಿ
ಕಳೆದ ಬಾರಿ ತಾವೇ ದೆಹಲಿಗೆ ಬರುವಂತೆ ಸೂಚನೆಯನ್ನ ನೀಡಿದ್ರಿ, ಡಿಸಿಎಂ ಹುದ್ದೆ ನೀಡುವುದಾಗಿ ಹೇಳಿ, ಹುದ್ದೆ ಕೂಡಾ ನೀಡಿಲ್ಲ. ಇದೀಗ ಸಾರಿಗೆ ಖಾತೆ ನನಗೆ ಬೇಡ, ಸಮಾಜ ಕಲ್ಯಾಣ ಇಲಾಖೆ ಕೊಡಿ ಅಂತಾ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೇ ಹಿಂದಿನ ಬಹುತೇಕ ಸಚಿವರಿಗೆ ಅದೇ ಇಲಾಖೆಯ ಖಾತೆ ಸಿಕ್ಕಿದೆ. ಆದ್ರೆ ನನಗೆ ಮಾತ್ರ ಸಮಾಜ ಕಲ್ಯಾಣದಿಂದ ಸಾರಿಗೆ ನೀಡಲಾಗಿದೆ. ಹೀಗಾಗಿ ತಮ್ಮ ಬೇಡಿಕೆಗೆ ಮನ್ನಣೆ ನೀಡಿ ಅಂತಾ ವರಿಷ್ಠರ ಮುಂದೆ ಪಟ್ಟು ಹಿಡಿಯಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಒಟ್ಟಾರೆ, ಕೆಲವರು ಸಚಿವ ಸ್ಥಾನ ಸಿಗಲಿಲ್ಲ ಅಂತಾ ಅಸಮಾಧಾನ ಹೊರ ಹಾಕ್ತಿದ್ದಾರೆ. ಇತ್ತ ಸಂಪುಟದ ಎರಡ್ಮೂರು ಸಚಿವರು ತಮಗೆ ಕೊಟ್ಟಿರುವ ಖಾತೆ ಬಗ್ಗೆಯೇ ಕ್ಯಾತೆ ತೆಗಿದ್ದಾರೆ. ಈ ಕ್ಯಾತೆ ಸದ್ಯ ಹೈಕಮಾಂಡ್ ನಾಯಕರವರೆಗೂ ಮುಟ್ಟಿದೆ. ಇನ್ನೂ ಇದು ಯಾವ ಹಂತಕ್ಕೆ ತಲುಪುತ್ತೋ ಲೆಟ್ಸ್ ವೇಯ್ಟ್‌ ಅಂಡ್ ವಾಚ್‌.

ವಿಶೇಷ ಬರಹ: ಶಿವಪ್ರಸಾದ್, ಪೊಲಿಟಿಕಲ್ ಬ್ಯುರೋ, ನ್ಯೂಸ್‌ಫಸ್ಟ್‌

Source: newsfirstlive.com Source link