ಅಸಿಸ್ಟೆಂಟ್ ಫೈಟರ್‌ ವಿವೇಕ್‌ ಸಾವಿಗೆ ಕಾರಣವೇನು? ಘಟನೆ ಬಗ್ಗೆ ಆಸ್ಪತ್ರೆಯಲ್ಲಿರೋ ಗಾಯಾಳು ಹೇಳಿದ್ದೇನು?

ಅಸಿಸ್ಟೆಂಟ್ ಫೈಟರ್‌ ವಿವೇಕ್‌ ಸಾವಿಗೆ ಕಾರಣವೇನು? ಘಟನೆ ಬಗ್ಗೆ ಆಸ್ಪತ್ರೆಯಲ್ಲಿರೋ ಗಾಯಾಳು ಹೇಳಿದ್ದೇನು?

ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮತ್ತೊಮ್ಮೆ ನಡೆಯಬಾರದ ಘಟನೆ ನಡೆದು ಹೋಗಿದೆ. ಲವ್‌ ಯೂ ರಚ್ಚು ಚಿತ್ರದ ಚಿತ್ರೀಕರಣದ ವೇಳೆ ವಿದ್ಯುತ್ ಶಾಕ್‌ ತಗುಲಿ ಅಸಿಸ್ಟೆಂಟ್ ಫೈಟರ್ ಸಾವನ್ನಪ್ಪಿದ್ದಾನೆ. ಇದು ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಬ್ಬ ಸಾಹಸ ಕಲಾವಿದ ದುರಂತ ಅಂತ್ಯಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಫೈಟರ್ ವಿವೇಕ್‌ಗೆ ಶಾಕ್‌ ತಗುಲಿದ್ದೇಗೆ? ಆ ವೇಳೆ ಸ್ಥಳದಲ್ಲಿ ನಡೆದ್ದಾದ್ರೂ ಏನು? ಇಲ್ಲಿದೆ ಘನಘೋರ ದುರಂತದ ಅಸಲಿ ಸತ್ಯ..

blank

ಲವ್​ ಯೂ ರಚ್ಚು ಸಿನಿಮಾದ ಚಿತ್ರೀಕರಣದ ವೇಳೆ ಘನಘೋರ ದುರಂತವೊಂದು ನಡೆದುಹೋಗಿದೆ. ಯುವ ಪ್ರತಿಭಾವಂತ ಫೈಟರ್‌ ಆಗಿದ್ದ ವಿವೇಕ್ ಎಂಬ ಯುವಕ ವಿದ್ಯುತ್‌ ಶಾಕ್‌ ತಗುಲಿ 28ನೇ ವಯಸ್ಸಿಗೆ ಬಾರದ ಲೋಕಕ್ಕೆ ಪಯಣಿಸಿದ್ದಾನೆ. ಬದುಕಿ ಬಾಳಬೇಕಿದ್ದ ಈ ಯುವಕ ಚಿತ್ರ ತಂಡದ ನಿರ್ಲಕ್ಷ್ಯದಿಂದ ತನ್ನ ಜೀವವನ್ನೇ ಅಂತ್ಯಗೊಳಿಸಿಕೊಂಡಿದ್ದಾನೆ.

ಬಿಡದಿಯ ಜೋಗನಪಾಳ್ಯದಲ್ಲಿ ಲವ್‌ಯೂ ರಚ್ಚು ಚಿತ್ರದ ನಡೆಯುತ್ತಿತ್ತು. ಚಿತ್ರದಲ್ಲಿ ವಿವೇಕ್​​ ಅಸಿಸ್ಟೆಂಟ್ ಫೈಟರ್ ಆಗಿದ್ದ. ಅಜಯ್​ ರಾವ್, ರಚಿತಾ ರಾಮ್ ನಟನೆಯ ಸಿನಿಮಾ ಇದಾಗಿದ್ದು, ಕ್ರೇನ್​ ಮೂಲಕ ಸಾಹಸ ದೃಶ್ಯದ ರೋಪ್ ಶೂಟ್ ಮಾಡಲಾಗ್ತಿತ್ತು. ಈ ವೇಳೆ ವಿವೇಕ್​ಗೆ 11 ಕಿಲೋ ವ್ಯಾಟ್​​ನ ಹೈಟೆನ್ಷನ್ ವೈರ್ ಟಚ್ ಆಗಿ ಶಾಕ್‌ ಹೊಡೆದಿದೆ. ಪರಿಣಾಮ ಬದುಕಿ ಬಾಳಬೇಕಿದ್ದ ಅಸಿಸ್ಟೆಂಟ್ ಫೈಟ್ ಮಾಸ್ಟರ್‌ ಆಗಿದ್ದ ವಿವೇಕ್ ಪ್ರಾಣವೇ ಹೋಗಿದೆ. ಇದೀಗ ಆತನ ಸಾವಿಗೆ ಕಾರಣವೇನು ಅಂತಾ ಘಟನೆಯಲ್ಲಿ ಗಾಯಗೊಂಡಿದ್ದ ರಂಜಿತ್‌ ಅಸಲಿ ಸತ್ಯ ಬಿಚ್ಚಿಟ್ಟಿದ್ದಾನೆ.

blank

ಇದನ್ನೂ ಓದಿ: ಕ್ರೇನ್​ ಮಣ್ಣಲ್ಲಿ ಇದ್ದಿದ್ದರಿಂದ ವಿವೇಕ್​ಗೆ ಹೀಗಾಯ್ತು.. ವಿವೇಕ್ ಚಿಕ್ಕಪ್ಪ ಹೇಳಿದ್ದೇನು..?

ಘಟನೆ ಬಗ್ಗೆ ಆಸ್ಪತ್ರೆಯಿಂದ ಗಾಯಾಳು ರಂಜಿತ್ ಮಾಹಿತಿ
ಕ್ರೇನ್ ಆಪರೇಟರ್ ಮಿಸ್ಟೇಕ್​​​​​​​​​​​​​​​​​ನಿಂದ ಅವಘಡ ಸಂಭವಿಸಿದೆ ಅಂತಾ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರೋ ಗಾಯಾಳು ರಂಜಿತ್ ಮಾಹಿತಿ ನೀಡಿದ್ದಾರೆ. ರಂಜಿತ್‌ ಸಾಹಸ ನಿರ್ದೇಶಕ ವಿನೋದ್‌ರ ಸಹಾಯಕರಾಗಿದ್ದು, ಘಟನೆ ವೇಳೆ ಪ್ರತ್ಯತ್ಷದರ್ಶಿಯೂ ಆಗಿದ್ದಾರೆ. ಶೂಟಿಂಗ್​​​​​​ನಲ್ಲಿ ಎಲ್ಲಾ ಸ್ಟಂಟ್ ಚೆನ್ನಾಗಿಯೇ ನಡೀತಾ ಇತ್ತು. ಬೆಳಗ್ಗೆ ಕ್ರೇನ್ ಆಪರೇಟರ್ ಮರಕ್ಕೆ ಕ್ರೈನ್ ಟಚ್ ಮಾಡಿದ್ರು. ಅವಾಗಲೇ ನಾವು ಕ್ರೇನ್ ಆಪರೇಟರ್ ಅನ್ನು ಎಚ್ಚರಿಸಿದ್ವಿ. ಆ ಬಳಿಕ ಹೈ ಟೆನ್ಶನ್ ವೈರ್‌ಗೆ ಕ್ರೇನ್ ಟಚ್‌ ಆಗಿ ವಿವೇಕ್‌ಗೆ ಶಾಕ್‌ ತಗುಲಿದೆ ಅಂತಾ ರಂಜಿತ್ ಹೇಳಿದ್ದಾನೆ.

blank

ಇನ್ನು, ಘಟನೆ ಸಂಬಂಧ ಚಿತ್ರದ ಫೈಟ್ ಮಾಸ್ಟರ್​ ಸೇರಿ ಮೂವರನ್ನ ವಶಕ್ಕೆ ಪಡೆಯಲಾಗಿದೆ. ಜೊತೆಗೆ ತಮ್ಮ ಮಗನನ್ನ ಕಳೆದುಕೊಂಡು ಕುಟುಂಬಸ್ಥರ ಗೋಳು ಹೇಳತೀರದಾಗಿದೆ. ಅದೇನೆ ಇರ್ಲಿ ಕನ್ನಡ ಚಿತ್ರರಂಗದಲ್ಲಿ ಪದೇ ಪದೇ ಈ ರೀತಿಯ ಘಟನೆಗಳು ನಡೀತಾನೆ ಇವೆ. ಸಾಹಸ ಕಲಾವಿದರು ತಮ್ಮ ಪ್ರಾಣವನ್ನ ಕಳೆದುಕೊಳ್ತಿದ್ದಾರೆ. ಇಂಥಹ ಅನಾಹುತಗಳಿಗೆ ಅಂತ್ಯ ಯಾವಾಗ ಅನ್ನೋದೆ ಸದ್ಯದ ಪ್ರಶ್ನೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಫೈಟರ್ ಮೃತದೇಹ ನೋಡಲು ಬಿಡದ ಸಿಬ್ಬಂದಿ.. ವಾಪಸ್ಸಾದ ಅಜಯ್​ ರಾವ್​

Source: newsfirstlive.com Source link