ಕೆಜಿಎಫ್​​ನಲ್ಲಿ ಸ್ಯಾಂಡಲ್​ವುಡ್ ಹಿರಿಯ ನಟಿಯರು -ಅದ್ಯಾವ ಪಾತ್ರ ಮಾಡಿದ್ರು ಸುಧಾರಾಣಿ-ಶೃತಿ?

ಕೆಜಿಎಫ್​​ನಲ್ಲಿ ಸ್ಯಾಂಡಲ್​ವುಡ್ ಹಿರಿಯ ನಟಿಯರು -ಅದ್ಯಾವ ಪಾತ್ರ ಮಾಡಿದ್ರು ಸುಧಾರಾಣಿ-ಶೃತಿ?

ಏನಾದ್ರೊಂದು ಧಮಾಕೇ ಧಾರ್ ಸಮಾಚಾರಗಳನ್ನ ನೀಡುತ್ತಾ ಕೆಜಿಎಫ್​ ಸಿನಿಮಾ ತಂಡ ಪ್ರೇಕ್ಷಕರ ಮನದಲ್ಲಿ ಕನವರಿಕೆಯನ್ನ ಮಾಡಿಸುತ್ತಲೇ ಇದೆ.. ಈಗ ಕೆಜಿಎಫ್​​ ಅಡ್ಡದಿಂದ ಒಂದು ಬ್ಯಾಂಗ್ ಬ್ಯಾಂಗ್ ಸಮಾಚಾರವೊಂದು ಸಿಕ್ಕಿದೆ. ಕೆಜಿಎಫ್​​​​ ಚಾಪ್ಟರ್​​​​ನಲ್ಲಿ 90ರ ದಶಕದ ಸ್ಟಾರ್ ನಟಿಯರಾದ ಸುಧಾರಾಣಿ ಹಾಗೂ ಶೃತಿ ಇರುತ್ತಾರೆ. ಅರೇ ಹೌದಾ..? ಅದ್ಯಾವ ಪಾತ್ರದಲ್ಲಿ ಅನ್ನೋ ಅಚ್ಚರಿಯ ಪ್ರಶ್ನೆಗೆ ಅದ್ಧೂರಿ ಉತ್ತರ ನಿಮಗಾಗಿ..

ಕೆಜಿಎಫ್ ಚಾಪ್ಟರ್ 1ಕ್ಕಿಂದ ಕೆಜಿಎಫ್ ಚಾಪ್ಟರ್ 2 ದೊಡ್ಡದು ಎಂದು ಈಗಾಗಲೇ ಸಿನಿಮಾ ತಂಡದ ಸರ್ವ ಸದಸ್ಯರು ಹೆಮ್ಮೆಯಿಂದ ಭರವಸೆಯ ಮಾತುಗಳನ್ನ ಆಡಾಗಿದೆ. ಇನೇನಿದ್ರು ಜನ ಮನ ಎರಡನೇ ಕೆಜಿಎಫ್​​ ಅನ್ನ ಕಂಡು ಹೆಂಗಿದೆ ಹೇಗಿದೆ ಅನ್ನೋದನ್ನ ಹೇಳಬೇಕು.

blank

ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ , ರವೀನಾ ಟಂಡನ್, ಸಂಜಯ್ ದತ್, ರಮೇಶ್ ರಾವ್, ಈಶ್ವರಿ ರಾವ್, ವಸಿಷ್ಠ ಸಿಂಹ, ಅಚ್ಯುತ್ ರಾವ್, ಪ್ರಕಾಶ್ ರೈ, ಮಾಳವಿಕಾ ಹೀಗೆ ಹೇಳ್ತಾ ಹೋದ್ರೆ ದಕ್ಷಿಣ ಮತ್ತು ಉತ್ತರ ಭಾರತದ ಪ್ರಮುಖ ಕಲಾವಿದರ ದಂಡೆ ಕೆಜಿಎಫ್ ಅಡ್ಡದಲ್ಲಿ ನಿಂತಿದೆ. ಈ ಬೃಹತ್ ಕಲಾವಿದರ ದಂಡಿನಲ್ಲಿ ಈಗ ದಕ್ಷಿಣ ಭಾರತ ಖ್ಯಾತ ಕಲಾವಿದೆಯರ ಎರಡು ಹೆಸರು ಕೇಳಿ ಬರುತ್ತಿದೆ. ಆ ಹೆಸರೇ ಕರ್ಪೂರದ ಗೊಂಬೆ ಖ್ಯಾತಿಯ ಶೃತಿ ಹಾಗೂ ಮನಮೆಚ್ಚಿದ ಹುಡ್ಗಿ ಖ್ಯಾತಿಯ ಸುಧಾರಾಣಿ.

KGF-2 ಚಿತ್ರದಲ್ಲಿ ಯಾವ ಪಾತ್ರ ಮಾಡಿದ್ದಾರೆ ನಟಿಯರು?
ಸುಧಾರಾಣಿ ಮತ್ತು ಶೃತಿ.. 90ರ ದಶಕದ ಸ್ಯಾಂಡಲ್​ವುಡ್​​ನ ಸ್ಟಾರ್ ನಟಿಮಣಿಯರು. ಅಂದಿನಿಂದ ಇಂದಿನ ತನಕ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದಾರೆ. ಒಂದು ಕಾಲದ ಸ್ಟಾರ್ ನಟಿ ಮಣಿಯರು ಇಂದು ಸ್ಟಾರ್ ಪೋಷಕ ನಟಿಯರಾಗಿ ಮಿಂಚುತ್ತಿದ್ದಾರೆ. ಇಂತಿಪ್ಪ ನಟಿಮಣಿಯರು ಭಾರತೀಯ ಚಿತ್ರರಂಗ ಬಹುನಿರೀಕ್ಷಿತ ಕೆಜಿಎಫ್​​ನಲ್ಲಿ ಯಾವ ಪಾತ್ರಕ್ಕೆ ಜೀವ ತುಂಬಿದ್ದಾರೆ ಅನ್ನೊ ಇಂಟ್ರಸ್ಟಿಂಗ್. ಶೃತಿ ಮತ್ತು ಸುಧಾರಾಣಿ ಅವರು ಕೆಜಿಎಫ್ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಆದ್ರೆ ಆದ್ಯಾವ ಕೆಲಸವನ್ನ ಮಾಡಿದ್ದಾರೆ ಅನ್ನೋದನ್ನ ಬಿಡಿಸಿ ಹೇಳ್ತಿವಿ ಕೇಳಿ..?

blank

ರಮೀಕಾ ಸೇನ್ ಪಾತ್ರಕ್ಕೆ ಧ್ವನಿಯಾದ ಸುಧಾರಾಣಿ..!
ರಮೀಕಾ ಸೇನ್​​.. ಕೆಜಿಎಫ್ ಸಿನಿಮಾದ ಪವರ್ ಫುಲ್ ಪಾತ್ರಗಳಲೊಂದು.. ಈ ರಮೀಕಾ ಸೇನ್ ಪಾತ್ರವನ್ನ ರವೀನಾ ಟಂಡನ್ ನಿರ್ವಹಿಸಿದ್ದಾರೆ. ಈ ಪವರ್ ಫುಲ್ ಪ್ರಧಾನಿ ಪಾತ್ರಕ್ಕೆ ಕನ್ನಡದ ಧ್ವನಿದಾನವನ್ನ ಎವರ್​ಗ್ರೀನ್ ಬ್ಯೂಟಿ ಸುಧಾರಾಣಿ ಅವರು ನೀಡಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಡಬ್ಬಿಂಗ್ ಆರ್ಟಿಸ್ಟ್​ಗಳು ರಮೀಕಾ ಸೇನ್ ಪಾತ್ರಕ್ಕೆ ಧ್ವನಿಯಾಗಿದ್ದಾರೆ. ಆದ್ರೆ ನಮ್ಮ ಕನ್ನಡ ಅವತರಿಣಿಗೆ ಸುಧಾರಾಣಿ ಹಿನ್ನಲೆ ಧ್ವನಿಯಾಗಿರೋದು ವಿಶೇಷ.

blank

ಈಶ್ವರಿ ರಾವ್ ಪಾತ್ರಕ್ಕೆ ಶೃತಿ ನೀಡಿದ್ದಾರೆ ಹಿನ್ನಲೆ ಧ್ವನಿ..!
ಇನ್ನು ತೆಲುಗಿನ ಫೇಮಸ್ ನಟಿ ಈಶ್ವರಿ ರಾವ್​​​​​​ ಕೂಡ ಒಂದು ಖಡಕ್ ಪಾತ್ರವನ್ನ ಎರಡನೇ ಕೆಜಿಎಫ್​​​ನಲ್ಲಿ ಮಾಡಿದ್ದಾರೆ. ಒಂದ್ ಕಾಲದಲ್ಲಿ ನಮ್ಮ ಕನ್ನಡದಲ್ಲಿ ಮೇಘ ಮಾಲೆ ಅನ್ನೋ ಸಿನಿಮಾದಲ್ಲಿ ನಟಿಸಿ ನರ್ತಿಸಿದ್ದ ನಟಿ ಮಣಿ ಈ ಈಶ್ವರಿ ರಾವ್. ಮೇಘಾ ಮಾಲೆ ಸಿನ್ಮಾದ ನಂತರ ಕನ್ನಡದಲ್ಲೇ ಕಾಣಲೇ ಇಲ್ಲ ಈಶ್ವರಿ ರಾವ್. ಹಲವು ವರ್ಷಗಳ ನಂತರ ಮತ್ತೆ ಕೆಜಿಎಫ್​ ಸಿನಿಮಾದಿಂದ ಕನ್ನಡಿಗರಿಗೆ ದರ್ಶನ ಕೊಡ್ತಿದ್ದಾರೆ ಈಶ್ವರಿ ರಾವ್. ಈಶ್ವರಿ ರಾವ್ ನಿರ್ವಹಿಸಿರೋ ಪಾತ್ರಕ್ಕೆ ಕನ್ನಡ ವಾಯ್ಸ್​​​​​​​ ಡಬ್ಬಿಂಗ್ ಅನ್ನ ಕರ್ಪೂರದ ಗೊಂಬೆ ಖ್ಯಾತಿಯ ಶೃತಿ ಮಾಡಿದ್ದಾರೆ.

ಈ ರೀತಿ ಪರೋಕ್ಷವಾಗಿ 90ರ ದಶಕದ ಕನ್ನಡದ ಫೇಮಸ್ ನಟಿಮಣಿಯರು ಫೇಮಸ್ ಕೆಜಿಎಫ್​​ನಲ್ಲಿ ಕೆಲಸ ಮಾಡಿರೋದು ನಿಜಕ್ಕೂ ಖುಷಿಯ ವಿಚಾರ.. ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿಗಳು ಹೊರ ಬರೋ ಸಾಧ್ಯತೆಗಳಿವೆ.

Source: newsfirstlive.com Source link