ಫೈಟ್ ಮಾಸ್ಟರ್ ದು ಯಾವುದೇ ತಪ್ಪಿಲ್ಲ: ಗಾಯಾಳು ರಂಜಿತ್

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಜಯ್ ರಾವ್ ಮತ್ತು ರಚಿತಾರಾಮ್ ಅಭಿನಯದ ‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ನಡೆದ ಘಟನೆಗೆ ಮತ್ತೊಂದು ತಿರುವು ಸಿಕ್ಕಿದೆ.

ಫೈಟರ್ ವಿವೇಕ್ ಜೊತೆಗೆ ಗಾಯಗೊಂಡು ಆಸ್ಪತ್ರೆಯಲ್ಲಿರುವ ರಂಜಿತ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಶೂಟಿಂಗ್ ವೇಳೆ ದುರಂತಕ್ಕೆ ಫೈಟ್ ಮಾಸ್ಟರ್ ಕಾರಣವಲ್ಲ, ಕ್ರೈನ್ ಡ್ರೈವರ್ ಮಾಡಿದ ಎಡವಟ್ಟಿನಿಂದಲೇ ಈ ದುರ್ಘಟನೆ ನಡೆದಿದೆ. ಬೆಳಗ್ಗೆ ಶೂಟಿಂಗ್ ಪ್ರಾರಂಭ ಮಾಡಿದಾಗಲೇ ಕ್ರೈನ್ ಡ್ರೈವರ್ ಮಾದೇವ್ ಕ್ರೈನ್ ಮರಕ್ಕೆ ಗುದ್ದಿದ್ದ. ಆಗ ನಾನು ಸೇರಿದಂತೆ ಅವನಿಗೆ ಸ್ವಲ್ಪ ತಿಳಿ ಹುಷಾರಪ್ಪ ಅಂತ ಹೇಳಿದ್ವಿ ಎಂದಿದ್ದಾರೆ.

ಬಳಿಕ ಶೂಟಿಂಗ್ ಸ್ಟಾರ್ಟ್ ಮಾಡಿದ್ವಿ. ಆ ವೇಳೆ ಕ್ರೈನ್ ಹೈಟೆನ್ಷನ್ ವೈಯರ್ ಗೆ  ಟಚ್ ಮಾಡಿದ್ದ. ಆಗ ನನಗೆ ಮತ್ತು ವಿವೇಕ್‍ಗೆ ಕರೆಂಟ್ ಶಾಕ್ ಹೊಡೆದಿತ್ತು. ವಿವೇಕ್ ಗಂಭೀರವಾಗಿ ಗಾಯಗೊಂಡ ಕಣ್ಣ ಮುಂದೆಯೇ ಸಾವನ್ನಪ್ಪಿದ. ಶೂಟಿಂಗ್ ನಲ್ಲಿ ಎಲ್ಲರು ಇದ್ದರೂ, ಆದರೆ ಯಾರಿಗೂ ಏನು ಮಾಡಬೇಕು ಎಂಬುದು ತಿಳಿಯಲಿಲ್ಲ. ಯಾರೂ ಹೆಲ್ಪ್ ಕೂಡ ಮಾಡುವುದಕ್ಕೆ ಮುಂದಾಗಲಿಲ್ಲ. ಕ್ಷಣಮಾತ್ರದಲ್ಲೇ ಎಲ್ಲವೂ ನಡೆಯೋಯ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ದುರಂತ – ಹೈಟೆನ್ಷನ್ ವೈರ್ ತಗುಲಿ ಫೈಟರ್ ಸಾವು

blank

ಈ ಘಟನೆಗೆ ಫೈಟ್ ಮಾಸ್ಟರ್ ಕಾರಣ ಅಂತ ಹೇಳುವುದು ತಪ್ಪಾಗುತ್ತದೆ. ಅವರು ತುಂಬಾ ಕೇರ್ ಫುಲ್ ಆಗಿ ಕೆಲಸ ಮಾಡಿಸಿದ್ದರು. ಫೈಟ್ ಮಾಸ್ಟರ್ ವಿನೋದ್‍ಗೂ ಈ ಸಾವಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ರಂಜಿತ್ ಆರ್.ಆರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.

ಘಟನೆ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇದನ್ನೂ ಓದಿ:ಲವ್ ಯು ರಚ್ಚು ಶೂಟಿಂಗ್ ದುರಂತ – ನಿರ್ದೇಶಕ ಸೇರಿ ನಾಲ್ವರು ಪೊಲೀಸ್ ವಶಕ್ಕೆ

Source: publictv.in Source link