ಬ್ರೈನ್​ ಟ್ಯೂಮರ್​ಗೆ ಮಲಯಾಳಂ ನಟಿ ಸರಣ್ಯ ಬಲಿ

ಬ್ರೈನ್​ ಟ್ಯೂಮರ್​ಗೆ ಮಲಯಾಳಂ ನಟಿ ಸರಣ್ಯ ಬಲಿ

ಬ್ರೈನ್​ ಟೂಮರ್​ನಿಂದ ಬಳಲುತ್ತಿದ್ದ ಮಲಯಾಳಂ ನಟಿ ಸರಣ್ಯ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

2012 ರಲ್ಲಿ ಸರಣ್ಯ ಕ್ಯಾನ್ಸರ್​ ರೋಗಕ್ಕೆ ತುತ್ತಾಗಿ 11 ಬಾರಿ ಸರ್ಜರಿಗೆ ಒಳಗಾಗಿದ್ದರು. ಅಲ್ಲದೆ ಈ ನಡುವೆ ಕೊರೊನಾ ಸೋಂಕು ಸಹ ಸರಣ್ಯ ಅವರನ್ನು ಕಾಡಿತ್ತು. ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದರು. ಆದರೆ ಕೆಲ ದಿನಗಳ ಹಿಂದೆ ಮತ್ತೆ ಆರೋಗ್ಯ ಹದಗೆಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾರೆ.

ಸ್ಥಳೀಯ ಪತ್ರಿಕೆಯ ವರದಿಯ ಅನ್ವಯ, ರಕ್ತದಲ್ಲಿ ಸೋಡಿಯಂ ಪ್ರಮಾಣ ಕಡಿಮೆಯಾದ ಕಾರಣ ಅವರನ್ನು ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕತ್ಸೆ ಫಲಕಾರಿಯಾಗದೆ ಸೋಮವಾರ ಮಧ್ಯಾಹ್ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Source: newsfirstlive.com Source link