ಡ್ರೋನ್​ ಮೂಲಕ​​ ಟಿಫಿನ್ ಬಾಕ್ಸ್ ಬಾಂಬ್, ಆರ್​ಡಿಎಕ್ಸ್ ಡ್ರಾಪ್​ -ಪಾಕ್ ಕೈವಾಡ ಶಂಕೆ

ಡ್ರೋನ್​ ಮೂಲಕ​​ ಟಿಫಿನ್ ಬಾಕ್ಸ್ ಬಾಂಬ್, ಆರ್​ಡಿಎಕ್ಸ್ ಡ್ರಾಪ್​ -ಪಾಕ್ ಕೈವಾಡ ಶಂಕೆ

ಅಮೃತಸರ: ಪಂಜಾಬ್​ನ ಅಮೃತಸರದ ಗ್ರಾಮವೊಂದರಲ್ಲಿ ಟಿಫಿನ್​ ಬಾಕ್ಸ್​ನಲ್ಲಿ 2 ಕೆಜಿಯಷ್ಟು ಆರ್​ಡಿಎಕ್ಸ್​​ ಸ್ಫೋಟಕ ಪತ್ತೆಯಾಗಿದೆ. ಸ್ವಾತಂತ್ರ್ಯ ದಿನಚರಣೆಗೂ ಮುನ್ನ ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಉಗ್ರರು ಡ್ರೋನ್​ ಮೂಲಕ ಈ ಸ್ಫೋಟಕವನ್ನು ತಂದಿರಬಹುದು ಎಂದು ಶಂಕಿಸಲಾಗಿದೆ.

ಅಮೃತಸರದ ದಲೆಕೆ ಗ್ರಾಮದಲ್ಲಿ ಸಿಕ್ಕಿರುವ ಟಿಫಿನ್​ ಬಾಕ್ಸ್​ನಲ್ಲಿ ಆರ್​ಡಿಎಕ್ಸ್ ಜೊತೆಗೆ 5 ಹ್ಯಾಂಡ್​ ಗ್ರೆನೇಡ್​ಗಳು, ಸಹ ಪತ್ತೆಯಾಗಿರೋದಾಗಿ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ದಿನಕರ್ ಗುಪ್ತಾ ತಿಳಿಸಿದ್ದಾರೆ.

ಅಮೃತಸರ ಗ್ರಾಮೀಣ ಪ್ರದೇಶದಲ್ಲಿ ಕೆಲವು ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಐದು ಗ್ರೆನೇಡ್‌ಗಳು, ಸುಧಾರಿತ ಸ್ಫೋಟ ಹೊಂದಿರುವ ಟಿಫಿನ್ ಬಾಕ್ಸ್ ಮತ್ತು 9 ಎಂಎಂ ಪಿಸ್ತೂಲ್​​ನ 100 ಜೀವಂತ ಗುಂಡು ಸೇರಿವೆ. ನಮ್ಮ ಪರಿಶೀಲನೆ ಬಳಿಕ ಸ್ಫೋಟಕಗಳನ್ನು ಗಡಿಯಾಚೆಗಿನ ಡ್ರೋನ್ ಮೂಲಕ ತಲುಪಿಸಲಾಗಿದೆ ಎಂದು ಗುಪ್ತಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸ್ಫೋಟಕಗಳು ಪತ್ತೆಯಾಗುತ್ತಿದ್ದಂತೆ ಪಂಜಾಬ್​​ನಲ್ಲಿ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ.

Source: newsfirstlive.com Source link